ಮಡಿಕೇರಿ: ಡ್ರಗ್ಸ್‌ ಪ್ರಕರಣದಲ್ಲಿ ಕೇವಲ ನಟಿಯರಾದ ಸಂಜನಾ, ರಾಗಿಣಿಯನ್ನು ಪೊಲೀಸರು ಟಾರ್ಗೆಟ್‌ ಮಾಡುತ್ತಿದ್ದಾರೆ. ಇದರ ಒಳಮರ್ಮ ಅರ್ಥವಾಗುತ್ತಿಲ್ಲ. ಹಾಗಾದರೆ ಬೇರೆ ಯಾರೂ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿಲ್ವಾ ಎಂದು ಹಿರಿಯ ಚಿತ್ರನಟ ಜೈಜಗದೀಶ್‌ ಪ್ರಶ್ನಿಸಿದ್ದಾರೆ.

ಮಗಳು ನಿರಾಪರಾಧಿ ,ತಪ್ಪು ಮಾಡಿಲ್ಲ; ರಾಗಿಣಿ ತಂದೆ ಮಾತು

ಮಡಿಕೇರಿಯಲ್ಲಿ ಬುಧವಾರ ಡ್ರಗ್ಸ್‌ ಪ್ರಕರಣ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಬೆಂಗಳೂರಿನ ಸಾಕಷ್ಟುಅಂಗಡಿಗಳಲ್ಲಿ ಡ್ರಗ್ಸ್‌ ಸಿಗುತ್ತದೆ. ಇವರನ್ನು ಹಿಡಿಯುವ ಕೆಲಸವನ್ನು ಪೊಲೀಸರು ಮಾಡಿಲ್ಲ. ಒಂದು ವರ್ಷದಿಂದ ಭಾರತದಲ್ಲಿ ನಟ-ನಟಿಯರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಅವರು ಅಪರಾಧಿ​ಗಳಾಗಿದ್ದಲ್ಲಿ ಈವರೆಗೂ ಯಾರಿಗೂ ಶಿಕ್ಷೆ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿ, ಚಿತ್ರರಂಗವನ್ನೇ ಎಲ್ಲವಕ್ಕೂ ಗುರಿ ಮಾಡಬೇಡಿ ಎಂದು ಆಗ್ರಹಿಸಿದರು.

ಡ್ರಗ್‌ ಮಾಫಿಯಾ: ಡ್ರಗ್ಗಿಣಿಯರ 600 ಪುಟ ಚಾಟಿಂಗ್‌ ಸಂಗ್ರಹ..! 

ರಾಗಿಣಿಯನ್ನು ಪೊಲೀಸರು ಬಂಧಿಸಿ ಸುಮಾರು 2 ತಿಂಗಳೇ ಕಳೆದಿವೆ. ಆದರೆ ಜಾಮೀನ ಸಿಗದ ಕಾರಣ ಹೊರ ಬರಲು ಸಾಧ್ಯವಾಗಿಲ್ಲ. ನಟಿ ಸಂಜನಾಗೂ ಇದೇ ಪರಿಸ್ಥಿತಿ ಎದುರಾಗಿದೆ. ಸ್ಯಾಂಡಲ್‌ವುಡ್‌ ನಟಿಯರು ಜೈಲು ಸೇರಿದ ಮೇಲೆ ಯಾವುದೇ ಸೆಲೆಬ್ರಿಟಿ ಅಥವಾ ಆಪ್ತರು ಅವರನ್ನು ಭೇಟಿ ಮಾಡಲು ಬಂದಿಲ್ಲ ಎಂದು ಈ ಹಿಂದೆ ಹೇಳಲಾಗಿತ್ತು. ಇಬ್ಬರು ಜೈಲಿನಲ್ಲಿ ನಡೆಯವ ಕಾರ್ಯ-ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಹಾಗೂ ಬಿಡುವಿನ ಸಮಯದಲ್ಲಿ ಪುಸ್ತಕ ಓದತ್ತಿರುತ್ತಾರೆ ಎನ್ನಲಾಗಿದೆ.