ಶಿವರಾಜ್‌ಕುಮಾರ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ರಾಘವೇಂದ್ರ ರಾಜ್‌ಕುಮಾರ್‌ ಕ್ಯಾಮೆರಾ ಸ್ವಿಚ್‌ ಆನ್‌ ಮಾಡಿದರು. ಮುಹೂರ್ತದ ನಂತರ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ಒಟ್ಟಾರೆ ಚಿತ್ರತಂಡ ‘ಕನ್ನಡಿಗ’ ಚಿತ್ರದ ಕುರಿತು ಹೇಳಿಕೊಂಡ ಹೈಲೈಟ್‌ಗಳು ಇಲ್ಲಿವೆ.

ಗಟ್ಟಿಗಿತ್ತಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಗಿರಿರಾಜ್‌ ಅವರ ಈ ಹಿಂದಿನ ಸಿನಿಮಾಗಳಲ್ಲೂ ನಟಿಸಿದ್ದೇನೆ. ನನಗಾಗಿ ಈ ಚಿತ್ರದಲ್ಲೂ ಪಾತ್ರ ಸೃಷ್ಟಿಸಿರುವುದು ಸಂತಸ ತಂದಿದೆ.- ಪಾವನಾ, ನಟಿ

1. ಇದೊಂದು ಐತಿಹಾಸಿಕ ಕತೆ. ಸಾಮಾನ್ಯವಾಗಿ ಸಾಮ್ರಾಜ್ಯಗಳನ್ನು ಆಳಿದ ರಾಜ- ರಾಣಿಯರ ಕತೆಗಳು ದಾಖಲಾಗುತ್ತವೆ. ಆದರೆ, ಅವರ ಅಳ್ವಿಕೆಯಲ್ಲಿ ಸಾಮಾನ್ಯ ಪ್ರಜೆಗಳ ಕೊಡುಗೆಗಳು ಎಲ್ಲೂ ದಾಖಲಾಗಲ್ಲ. ಹೀಗೆ ದಾಖಲಾಗದ ಒಂದು ಮಹತ್ತರ ಕತೆಯನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.

ಕನ್ನಡ ಮಾತ್ರವಲ್ಲ, ಸಿನಿಮಾ ಪ್ರಪಂಚದ ಅದ್ಭುತ ತಂತ್ರಜ್ಞ ಎಂದರೆ ಅದು ರವಿಚಂದ್ರನ್‌. ಅವರ ತಮ್ಮನ ಪಾತ್ರ ನನಗೆ ದಕ್ಕಿರುವುದು ನನ್ನ ಹೆಮ್ಮೆ.- ಬಾಲಾಜಿ ಮನೋಹರ್‌, ನಟ

2. ನಾಡಿನ ಇತಿಹಾಸವನ್ನು ದಾಖಲಿಸುವಲ್ಲಿ ಲಿಪಿಕಾರರ ವಂಶದ ಕೊಡುಗೆ ಅಪಾರ. 1858ರ ನಂತರದ ಕಾಲಘಟ್ಟವನ್ನು ಈ ಚಿತ್ರದಲ್ಲಿ ಮರುಸೃಷ್ಟಿಸಲಾಗಿದೆ. ಇಲ್ಲಿ ರವಿಚಂದ್ರನ್‌ ಅವರು ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಪಾವನಾ ಇದ್ದಾರೆ. ಸಂಕಮ್ಮಬ್ಬೆಯಾಗಿ ಸ್ವಾತಿ ಚಂದ್ರಶೇಖರ್‌, ಕಿಟ್ಟಲ… ಪಾತ್ರಕ್ಕೆ ಜೇಮಿ ವಾಲ್ಟರ್‌ ಅವರನ್ನು ಕರೆತರಲಾಗುತ್ತಿದೆ. ಕಮರೀಲ ಭಟ್ಟನಾಗಿ ಚಿ. ಗುರುದತ್‌, ಮಲ್ಲಿನಾಥನಾಗಿ ಬಾಲಾಜಿ ಮನೋಹರ್‌, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ ಹಾಗೂ ಅಚ್ಯುತ್‌ ಕುಮಾರ್‌ ಅವರು ಹರಿಗೋಪಾಲನ ಪಾತ್ರ ನಿರ್ವಹಿಸುತ್ತಿದ್ದಾರೆ. ವಿಶೇಷ ಎಂದರೆ ರಾಣಿ ಚೆನ್ನಭೈರಾದೇವಿ ಎನ್ನುವ ಪ್ರಮುಖ ಪಾತ್ರದಲ್ಲಿ ನಟಿ ಸುಮಲತಾ ಅಂಬರೀಶ್‌ ಅಭಿನಯಿಸುತ್ತಿರುವುದು.

ದರ್ಶನ್‌ ಸಿನಿಮಾ ರಾಬರ್ಟ್‌ ಬರಲಿ: ರವಿಚಂದ್ರನ್‌ 

3. ಒಂದು ಒಳ್ಳೆಯ ಕತೆ ಸಿನಿಮಾ ಆಗಲು ಆಸಕ್ತಿ ಇರುವ ನಿರ್ಮಾಪಕರು ಬೇಕು ಎನಿಸಿದಾಗ ಎನ್‌ಎಸ್‌ ರಾಜ್‌ಕುಮಾರ್‌ ಜತೆಯಾದರು. ಈ ಹಿಂದೆ ಗಿರಿರಾಜ್‌ ಜತೆಗೆ ‘ಜಟ್ಟ’ ಹಾಗೂ ‘ಮೈತ್ರಿ’ ಚಿತ್ರಗಳನ್ನು ನಿರ್ಮಿಸಿದ್ದ ರಾಜ್‌ಕುಮಾರ್‌ ಈ ಬಾರಿ ಅಂಥದ್ದೇ ಅತ್ಯುತ್ತಮ ಕತೆಯನ್ನು ತೆರೆ ಮೇಲೆ ತರುವುದಕ್ಕೆ ಬಂಡವಾಳ ಹಾಕಲು ಮುಂದೆ ಬಂದಿದ್ದಾರೆ.

ನೂರೈವತ್ತು ವರ್ಷಗಳ ಹಿಂದಿನ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು. ಪಾತ್ರಗಳ ಜತೆಗೆ ಅಂದಿನ ಪರಿಸರ, ಕಟ್ಟಡಗಳನ್ನು ಮರುಸೃಷ್ಟಿಮಾಡುವುದು ನಿಜಕ್ಕೂ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ತಂಡ ಸಾಕಷ್ಟುಜನ ಇತಿಹಾಸಕಾರರನ್ನು ಸಂಪರ್ಕಿಸಿ, ಹಲವಾರು ಕೃತಿಗಳನ್ನು ಪರಾಮರ್ಶಿಸಿ ಸೆಟ್‌ಗಳನ್ನು ರೂಪಿಸುತ್ತಿದ್ದಾರೆ.- ಬಿಎಂ ಗಿರಿರಾಜ್‌, ನಿರ್ದೇಶಕ

4. ನವೆಂಬರ್‌ ತಿಂಗಳಲ್ಲಿ 30 ದಿನಗಳ ಚಿತ್ರೀಕರಣ ಸಾಗರ, ಚಿಕ್ಕಮಗಳರು ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ನಡೆಯಲಿದೆ. ಜಿಎಸ್‌ವಿ ಸೀತಾರಾಮ… ಛಾಯಾಗ್ರಾಹಣ, ರವಿ ಬಸ್ರೂರು ಸಂಗೀತ, ಅರ್ಜುನ್‌ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಇದೆ.

ಕನ್ನಡಿಗನಾಗಿ ಕಾಣಿಸಿಕೊಳ್ಳುತ್ತಿರುವುದು ನನಗೆ ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಆ ಪಾತ್ರಕ್ಕೆ ನಟನಾಗಿ ನಾನು ತಕ್ಕ ನ್ಯಾಯ ಸಲ್ಲಿಸುತ್ತೇನೆ. -ರವಿಚಂದ್ರನ್‌, ನಟ