Asianet Suvarna News Asianet Suvarna News

Tagaru-Salaga ಒಂದಾಗಿ ರೆಡಿ ಅಯ್ತು 'ಸೋಮು ಸೌಂಡ್ ಎಂಜಿನಿಯರ್'!

ಎರಡು ಸ್ಟಾರ್ ಸಿನಿಮಾ ತಂಡಗಳು ಒಂದಾಯ್ತು ಸೂಪರ್ ಹಿಟ್ ಸಿನಿಮಾ ನೀಡಲು.  ಟೈಟಲ್ ಸಖತ್ ಡಿಫರೆಂಟ್ ಎಂದ ನೆಟ್ಟಿಗರು...

Kannada Tagaru and Salaga technicians units for Somu sound engineer film vcs
Author
Bangalore, First Published Jan 28, 2022, 5:23 PM IST

ಕನ್ನಡ ಚಿತ್ರಂಗದಲ್ಲಿ ದೊಡ್ಡ ಬಜೆಟ್ ಕಲೆಕ್ಷನ್ ಮಾಡಿ ದೊಡ್ಡ ಅಲೆ ಸೃಷ್ಟಿಸಿರುವ ಸಿನಿಮಾಗಳೆಂದರೆ ಟಗರು (Tagaru) ಮತ್ತು ಸಲಗ (Salaga). ಮಾಸ್ ಎಲಿಮೆಂಟ್‌ ಕೊಟ್ಟು ಕರ್ಮಷಿಯಲ್ ಸಿನಿಮಾ ಮಾಡಿ, ಕೋಟಿಯಲ್ಲಿ ಕಲೆಕ್ಷನ್ ಮಾಡಬಹುದು, ಎನ್ನುವುದಕ್ಕೆ ಸಾಕ್ಷಿಯಾದ ಸಿನಿಮಾಗಳಿವು.ಈ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು, ಪ್ರತಿಭೆಗಳು ಒಟ್ಟಾಗಿ ಸೇರಿಕೊಂಡು ಒಂದು ಸಿನಿಮಾ ಮಾಡುತ್ತಿದ್ದಾರೆ. ಈ ಹೊಸ ತಂಡಕ್ಕೆ ದುನಿಯಾ ಸೂರಿ ಸಾಥ್ ನೀಡಿದ್ದಾರೆ. 

ಹೌದು! ಚಿತ್ರಕ್ಕೆ ಸೂರಿ ಸಾಥ್ ಕೊಟ್ಟಿರುವುದು ಒಂದಾದರೆ, ಮತ್ತೊಂದು ವಿಶೇಷತೆಯೇ ಮಾಸ್ತಿ (Masthi.) ಸಂಭಾಷಣೆ ಬರೆಯುತ್ತಿರುವುದು. ಈ ಚಿತ್ರಕ್ಕೆ ಅಭಿ (Director Abhi) ನಿರ್ದೆಶನ ಮಾಡುತ್ತಿದ್ದಾರೆ. ಅಭಿ ಅವರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು, ಅದರಲ್ಲೂ ನಿರ್ದೆಶನಕನಾಗಬೇಕು ಎಂದು ಬೆಂಗಳೂರಿಗೆ ಬಂದವರು. ಅಭಿ ಅವರ ಬಗ್ಗೆ ಮಾಸ್ತಿ ಬರೆದಿರುವ ಸಾಲುಗಳು ಇಲ್ಲಿವೆ.

'ಸಲಗ' ಡೈಲಾಗ್ ಹಿಂದಿನ ಮಾಸ್ಟರ್ ಮೈಂಡ್ 'ಮಾಸ್ತಿ'!

'ಏಳೆಂಟು ವರುಷಗಳ ಹಿಂದೆ ಪರಿಚಿತನೊಬ್ಬನ ಮೂಲಕ ಭೇಟಿಯಾದವನೇ ' ಅಭಿ '. ಸಿನಿಮಾದಲ್ಲಿ ಅದರಲ್ಲೂ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡ್ಬೇಕು ಅನ್ನೋ ಮಹದಾಸೆ ಇಟ್ಕೊಂಡು ಬೆಂಗಳೂರೆಂಬ ಬಾಡಿಗೆಯೂರಿಗೆ ಬಂದಂತಹ ಉತ್ತರ ಕರ್ನಾಟಕದ ಹುಡುಗ.

Kannada Tagaru and Salaga technicians units for Somu sound engineer film vcs

ಆಗ ನಮ್ಮದು ಕಡ್ಡೀಪುಡಿ ಸಿನಿಮಾ ಶುರುವಾಗೋ ಹಂತದಲ್ಲಿತ್ತು. ಸರಿ ಬಾ ಅಂತ ಕರ್ಕೊಂಡು ಸೀದಾ ಸೂರಿಯವರ ಆಫೀಸಿಗೆ ಹೋದೆ . ಅವರಿಗೂ ಅಸಿಸ್ಟೆಂಟ್ ಡೈರೆಕ್ಟರ್ಸ್ ಬೇಕಿತ್ತು . ಮುಂದೆ ನಿಂತಿದ್ದವನನ್ನು.... ಸರಿ ಏನು ಓದಿದೀಯಾ ಅಂತ ಕೇಳಿದ್ರು, ಅಭಿ ವಿಶ್ವಾಸದಲ್ಲಿ ಡಿಎಡ್ ಅಂತ ಹೇಳಿದ , 'ಮೇಷ್ಟ್ರಂತೆ' ಅಂತ ನಾನು ಉದ್ಘರಿಸಿದೆ! ಸೂರಿ ನನ್ನ ಕಡೆ ಒಂದು ವಿಲಕ್ಷಣ ನೋಟ ಬೀರಿದ್ರು. ಪಾಠ ಹೇಳ್ಕೊಡೋ ಗುರೂನೇ ಶಿಷ್ಯನಾಗಿ ಇಟ್ಕೋ ಅಂತಿದೀಯಲ್ಲ! ಅನ್ನೋ ಭಾವಾರ್ಥ ಆ ಲುಕ್ಕಲ್ಲಿತ್ತು.

ಅಸಲಿಗೆ ಸೂರಿ ಜೊತೆ ಖುದ್ದು ಸೂರೀನೇ ಹತ್ತು ನಿಮಿಷ ಇರಲ್ಲ. ಅಂತಾದ್ರಲ್ಲಿ ಅಭಿ ಬರೋಬ್ಬರೀ ಹತ್ತು ವರುಷಗಳ ಕಾಲ ಸೂರಿ ಜೊತೆಗಿದ್ದಿದ್ದು ನಿಜಕ್ಕೂ ಸೋಜಿಗವೇ ಸರಿ.
ಸಿನಿಮಾ ಆಫೀಸಿನಲ್ಲಿ ಅಭಿ ಎಂದೂ ಕಾಲಕ್ಷೇಪ ಮಾಡಲಿಲ್ಲ. ಬದಲಾಗಿ ಸಿನಿಮಾ ಎಂಬ ನಿಕ್ಷೇಪದ ಹುಡುಕಾಟದಲ್ಲಿದ್ದ. . ತಾನು ಇಂದು ನಿಲ್ಲಬೇಕು ಎಂದರೆ, ಓದನ್ನು ಎಂದಿಗೂ ನಿಲ್ಲಿಸಬಾರದು ಎಂದು ಮನಗಂಡಿದ್ದ. ಆಫೀಸಿನ ಅಲೆಮಾರಿನಲ್ಲಿದ್ದ ಪುಸ್ತಕಗಳನ್ನು, ಜೊತೆಗೆ ಸೂರಿ ಬರೆದಿಡುತ್ತಿದ್ದ ಚಿತ್ರ ಕತೆಯನ್ನು, ನನ್ನ ಸಂಭಾಷಣೆಯ ಪ್ರತಿಗಳನ್ನೂ ತಪ್ಪದೇ ಓದುತ್ತಿದ್ದ. ಬಿಸಿಲ ನಾಡಿನವನಾಗಿದ್ದರಿಂದ ಇವನೊಳಗೆ ಬೆಂದ ಅಕ್ಷರಗಳಿದ್ದವು. ಬಿಡುವಿದ್ದಾಗಲೆಲ್ಲಾ ಪುಟಗಟ್ಟಲೇ ಬರೆಯುತ್ತಿದ್ದ. 'ನಾಳೆಗಳ ಕನಸುಗಳನ್ನು ಹಾಳೆಗಳಲ್ಲಿ ಬರೆದಿಡುತ್ತಿದ್ದಂತಹ ಹುಡುಗ '. ಒಮ್ಮೊಮ್ಮೆ ನಮ್ಮ ಕಣ್ಣಿಗೆ 'ಕಲಿಕೆ ಉದ್ದೇಶ ಗುರಿ' ಯೆಂಬ ಮೂರು ವಿಕೆಟ್ಟುಗಳ ಮುಂದೆ ನಿಂತ ಯುವ ಧಾಂಡಿಗನಂತೆ ಭಾಸವಾಗುತ್ತಿದ್ದ.

ನಿಂಗೇನೋ ಬಂದಿರೋದು ದೊಡ್ ರೋಗ?; ಮಿಲನಾ-ಕೃಷ್ಣ ನಡುವೆ ದೊಡ್ಡ ಜಗಳ

'ಕಥೆ ಚರ್ಚೆ ಮಾಡ್ತಿದ್ದ ಸೂರಿಗೆ ಟೀ ತಂದು ಕೊಡೋದ್ರಿಂದ ಹಿಡಿದು, ಮುಂದೊಂದು ದಿನ ಅದೇ ಸೂರಿ ಜೊತೆ ಕಥೆ ಚರ್ಚೆ ಮಾಡ್ಕೊಂಡು ಟೀ ಕುಡಿಯೋವರೆಗೂ' ಬೆಳೆದಿದ್ದ . ಕಡ್ಡೀಪುಡಿ, ಕೆಂಡ ಸಂಪಿಗೆ, ದೊಡ್ಮನೆ ಹುಡುಗ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ, ಟಗರು ಸಲಗ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾನೆ. ಸಿನಿಮಾದ ಒಳ ಹೊರಗನ್ನು ಅರಿತಿದ್ದಾನೆ. ದುನಿಯಾ ವಿಜಯ್‌ಗಂತೂ ಇವನೆಂದರೆ ಪಂಚಪ್ರಾಣ. ಬಾಯ್ತುಂಬ ಮೇಷ್ಟ್ರೇ ಅಂತ ಕರೆಯುತ್ತಾರೆ.

ಸಂಗೀತದಿಂದ ಯುವ ಹೃದಯಗಳಲ್ಲಿ ಸಂಚಲನ ಸೃಷ್ಟಿ ಮಾಡಿದ ಈ ಕಾಲದ ರಿ'ಧಮ್' ಇರುವಂತಹ ಸಂಗೀತ ನಿರ್ದೇಶಕ ಚರಣ್ ರಾಜ್. ಮೊನಚು ಸಂಕಲನಕ್ಕೆ ಹೊಸ ವ್ಯಾಖ್ಯ ಬರೆದ ದೀಪು ಎಸ್ ಕುಮಾರ್, ಸಲಗದ ಕಣ್ಣು ಅಂತೆನಿಸಿಕೊಳ್ಳೋ ಶಿವಸೇನ, ಧಣಿವರಿಯದ ನಟರಾಜ ಮೋಹನ್ ಮಾಸ್ಟರ್, ಸದ್ದು ಗುದ್ದುಗಳ ಸಾಹಸಿಗರಾದ ವಿನೋದ್, ಜಾಲಿಬಾಸ್ಟಿನ್ ಮತ್ತು ನನ್ನ ಸಂಭಾಷಣೆ ಅಭಿ ಚಿತ್ರಕ್ಕಿರುತ್ತದೆ.

ಈ ಗಟ್ಟೀ ತಂಡವನ್ನು ಬೆನ್ನಿಗೆ ಕಟ್ಟಿಕೊಂಡು, ಹೊಸ ಕತೆಯನ್ನು ಪೆನ್ನಿಗೆ ಕಟ್ಟಿಕೊಂಡು, ನಿರ್ದೇಶನಕ್ಕೆ ಚಿತ್ರ ಕತೆಯೊಂದಿಗೆ ಸಿದ್ದವಾಗಿದ್ದಾನೆ. 'ಸೋಮು ಸೌಂಡ್ ಇಂಜಿನಿಯರ್' ಎಂಬ ಶೀರ್ಷಿಕೆಯನ್ನಿಟ್ಟಿದ್ದಾನೆ. ಸೂರಿ ಆ ಶೀರ್ಷಿಕೆ ಬರೆದು ಕೊಡುವುದರ ಮೂಲಕ ಶಿಷ್ಯನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ 'ಅಭಿ'ಮಾನ ಈ ಹುಡುಗನ ಮೇಲಿರಲಿ. ಅವನ ಸಿನಿಮಾ ಹೇಗಿರಬಹುದು ಎಂಬುದರ ಸಣ್ಣ ಊಹೆ ಇಲ್ಲಿದೆ.....ನೋಡಿ ಹರಸಿ,' ಎಂದು ಮಾಸ್ತಿ ಹೇಳಿದ್ದಾರೆ.

ಸೋಮು ಸೌಂಡ್ ಎಂಜಿನಿಯರ್ ಚಿತ್ರಕ್ಕೆ ಚರಣ್ ರಾಜ್ (Charan Raj) ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ, ದೀಪು ಎಸ್‌ ಅವರು ಸಂಕಲನ ಬರೆದಯುತ್ತಿದ್ದಾರೆ, ಸಲಗ ಕಣ್ಣು ಅಂತೆನಿಸಿಕೊಳ್ಳುವ ಶಿವಸೇನ, ದಣಿವರಿಯದ ನಟರಾಜ ಮೋಹನ್ ಮಾಸ್ಟರ್, ಸಾಹಸಿಗರಾದ ವಿನೋದ್, ಜಾಲಿಬಾಸ್ಟಿಇನ್ ಸಂಭಾಷಣೆ ಈ ಚಿತ್ರಕ್ಕೆ ಇರಲಿದೆ.

 

Follow Us:
Download App:
  • android
  • ios