ಕನ್ನಡ ಚಿತ್ರರಂಗದ ಸ್ಟಾರ್‌ಗಳಿಗೆ ಮೇಕಪ್‌ ಮಾಡುತ್ತಿದ್ದ ಸೀನಣ್ಣ(40) ಉಸಿರಾಟದ ತೊಂದರೆಯಿಂದ ಇಹಲೋಕ ತ್ಯಜಿಸಿದ್ದಾರೆ. 

ಕನ್ನಡ ಚಿತ್ರರಂಗ ಟಾಪ್‌ ಸ್ಟಾರ್‌ಗಳಿಗೆ ಮೇಕಪ್ ಮಾಡಿ ಸೀನಣ್ಣ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿವಾಸ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಕೊನೆಯುಸಿರೆಳೆದಿದ್ದಾರೆ.

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಸೀನಣ್ಣ ಪುನೀತ್ ರಾಜ್‌ಕುಮಾರ್ ಹಾಗೂ ಶ್ರೀಮುರಳಿಗೆ ಮೇಕಪ್ ಮ್ಯಾನ್ ಆಗಿದ್ದರು. ಸೀನಣ್ಣ ಇನ್ನಿಲ್ಲ ಎಂಬ ವಿಚಾರವನ್ನು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. 'ನಮ್ಮ 'ಬಹದ್ದೂರ್','ಭರ್ಜರಿ' ಹಾಗೂ 'ಜೇಮ್ಸ್' ಚಿತ್ರಗಳಿಕೆ ಹಾಗೂ ಕನ್ನಡ ಬಹಳಷ್ಟು ಚಿತ್ರಗಳಿಗೆ ಕಂಪನಿ ಮೇಕಪ್‌ಮ್ಯಾನ್‌ ಆಗಿ ಕಾರ್ಯನಿರ್ವಹಿಸಿದ ಮೇಕಪ್ ಸೀನಣ್ಣ (ಶ್ರೀನಿವಾಸ್‌)ರವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಅಣ್ಣ. RIP' ಎಂದು ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರರಂದ ಖ್ಯಾತ ನಿರ್ಮಾಪಕ ಎಂ.ಚಂದ್ರಶೇಖರ್‌ ಕೊರೋನಾಗೆ ಬಲಿ 

ಸೀನಣ್ಣ ವರ್ಣಾಲಂಕಾರ ಹಾಗೂ ಕೇಶಲಂಕಾರ ಸಂಘದ ಉಪಾಧ್ಯಕ್ಷರಾಗಿದ್ದರು. ನಿರ್ದೇಶಕ ಎಪಿ ಅರ್ಜುನ್‌ ಕೂಡ ಟ್ಟೀಟ್ ಮಾಡಿದ್ದಾರೆ. 'ನನ್ನ ಎಲ್ಲಾ ಸಿನಿಮಾಗಳಿಗೆ ಮೇಕಪ್ ಕಲಾವಿದರಾಗಿ ಕೆಲಸ ನಿರ್ವಹಿಸುತ್ತಿದ್ದ ಸೀನಣ್ಣ ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ. ಒಂದು ವಾರದ ಹಿಂದೆ ನಗುನಗುತ್ತಾ ಬಂದು ಭೇಟಿಯಾಗಿದ್ದ ವ್ಯಕ್ತಿ ಇಂದು ಇಲ್ಲವೆಂದರೆ ನಿಜವಾಗಿಯೂ ನಂಬಲಾಗತ್ತಿಲ್ಲ.' ಎಂದು ಬರೆದುಕೊಂಡಿದ್ದಾರೆ.

ಸೀನಣ್ಣ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.

Scroll to load tweet…