Asianet Suvarna News Asianet Suvarna News

ವಿಜಯಲಕ್ಷ್ಮಿ ಡಿಪ್ರೆಸ್‌ ಆಗಿರ್ತಾಳೆ ಅಂದ್ಕೊಂಡೆ ಆದ್ರ ಆಕೆ ಗಟ್ಟಿಗಿತ್ತು, ಈ ಕಾರಣಕ್ಕೆ ಸಪೋರ್ಟ್ ಮಾಡ್ತಿದ್ದಾಳೆ: ಶಮಿತಾ ಮಲ್ನಾಡ್

 ವಿಜಯಲಕ್ಷ್ಮಿ ತುಂಬಾನೇ ಫ್ಯಾಮಿಲಿ ವ್ಯಕ್ತಿ ಆಕೆಗೆ ಮಗನೇ ತುಂಬಾನೇ ಮುಖ್ಯ ಅಂತ ಖ್ಯಾತ ಗಾಯಕಿ ಶಮಿತಾ ಮಲ್ನಾಡ್....

Kannada singer Shamitha Malnad talks about Vijayalakshmi darshan in Renukaswamy case vcs
Author
First Published Jul 2, 2024, 1:14 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಸೇರಿದಂತೆ 17 ಮಂದಿ ಜೆಸಿ ಸೇರಿದ್ದಾರೆ. ಕೆಲವು ದಿನಗಳಿಂದ ಕೆಲವು ಸೆಲೆಬ್ರಿಟಿಗಳು ಭೇಟಿ ಮಾಡಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ಖ್ಯಾತ ಗಾಯಕಿ ಶಮಿತಾ ಮಲ್ನಾಡ್‌ ತಮ್ಮ ಸ್ನೇಹಿತೆ ವಿಜಯಲಕ್ಷ್ಮಿ ಎಷ್ಟು ಸ್ಟ್ರಾಂಗ್‌ ಎಂದು ಹಂಚಿಕೊಂಡಿದ್ದಾರೆ. 

'ಈ ಘಟನೆಯಿಂದ ವಿಜಯಲಕ್ಷ್ಮಿ ಡಿಪ್ರೆಶನ್‌ ಆಗಿರುತ್ತಾಳೆ ಈ ಸಮಯದಲ್ಲಿ ಏನು ಮಾತನಾಡುವುದು ಎಂದು ಯೋಚನೆ ನಮಗಿದ್ದರೆ ಆಕೆ ಹಾಗಲ್ಲ ನಮಗೆ ಸಮಾಧಾನ ಮಾಡುತ್ತಿದ್ದಾಳೆ. ತಲೆ ಕೆಡಿಸಿಕೊಳ್ಳಬೇಡಿ ಏನೂ ಆಗಲ್ಲ ನಮಗೆ ಹಾಗೂ ಅಭಿಮಾನಿಗಳಿಗೆ ಧಯರ್ಯ ಹೇಳಿದ್ದಾರೆ ವಿಜಯಲಕ್ಷ್ಮಿ. ಈ ರೀತಿ ಆಗುತ್ತಿರುವುದಕ್ಕೆ ಬೇಸರ ಇದೆ ಅಲ್ಲಿ ಇರುವುದಕ್ಕೆ ಬೇಸರ ಇದೆ ಆದರೆ ತಪ್ಪು ಮಾಡಿಲ್ಲ ಅಂದ್ಮೇಲೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ವಿಜಯಲಕ್ಷ್ಮಿ ಹೇಳ್ತಾರೆ..ಆಕೆ ತುಂಬಾನೇ ಸ್ಟ್ರಾಂಗ್ ವ್ಯಕ್ತಿ. ವಿಜಯಲಕ್ಷ್ಮಿ ಬ್ಯುಸಿನೆಸ್ ನಡೆಸುತ್ತಾರೆ ಫ್ಯಾಮಿಲಿ ಮ್ಯಾನೇಜ್ ಮಾಡುತ್ತಾರೆ...ಇದುವರೆಗೂ ನಾನು ನೋಡಿರುವ ಮಹಿಳೆಯರಲ್ಲಿ ಆಕೆ ಇರುವಷ್ಟು ಸ್ಟ್ರಾಂಗ್ ಯಾರೂ ಇಲ್ಲ' ಎಂದು ಶಮಿತಾ ಮಲ್ನಾಡ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಹೊರ ಬಿತ್ತು ಯಶ್ 'ಟಾಕ್ಸಿಕ್' ಚಿತ್ರದ ಮತ್ತೊಂದು ಗುಟ್ಟು; ಯಾರು ಆ ಮತ್ತೊಬ್ಬ ನಟ?

'ಬುದ್ಧಿಯನ್ನು ಸ್ಥಿಮಿತದಲ್ಲಿ ಇಟ್ಟುಕೊಂಡು ಕೆಲಸ ಮಾಡುವ ಮಹಿಳೆ...ಈ ಸಮಯದಲ್ಲಿ ಮಗನನ್ನು ಹೇಗೆ ನೋಡಿಕೊಳ್ಳಬೇಕು ಅಲ್ಲದೆ ದರ್ಶನ್‌ಗೆ ಹೇಗೆ ಸಮಾಧಾನ ಮಾಡಬೇಕು ಅನ್ನೋದು ಆಕೆಗೆ ಗೊತ್ತಿದೆ. ಸ್ಟ್ರಾಂಗ್ ಆಗಿ ನಿಂತಿರುವ ಅಪರೂಪದ ಹೆಣ್ಣು ಮಗಳು ಅಂದ್ರೆ ವಿಜಯಲಕ್ಷ್ಮಿ. ನಾವು ಏನು ಕೆಲಸ ಮಾಡುತ್ತಿದ್ದೀನಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೀವಿ ಅನ್ನೋದು ಮುಖ್ಯವಾಗುತ್ತದೆ ಅಲ್ಲದೆ ವಿಜಯಲಕ್ಷ್ಮಿ ಮತ್ತು ದರ್ಶನ್ ತುಂಬಾನೇ ಚೆನ್ನಾಗಿದ್ದಾರೆ' ಎಂದು ಶಮಿತಾ ಹೇಳಿದ್ದಾರೆ.

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ; ಅಕ್ಟೋಬರ್‌ಗೆ ಕಾಯುತ್ತಿರುವ ಎಂದ ಪತಿ ಭುವನ್!

'ಒಂದು ವಾಹಿನಿಯಲ್ಲಿ ವಿಜಿ ಮತ್ತು ನಾನು ಆಂಕರ್ ಆಗಿ ಕೆಲಸ ಮಾಡುತ್ತಿದ್ವಿ ಆಕೆ ಇನ್ನೂ ಇಂಜಿನಿಯರಿಂಗ್ ಮಾಡುತ್ತಿದ್ದಳು...ಇದು ಸುಮಾರು 20 ವರ್ಷಗಳ ಹಳೆ ಸ್ನೇಹ. ವಿಜಯಲಕ್ಷ್ಮಿ ಸಾಮಾನ್ಯ ಹುಡುಗಿ ಅಲ್ಲ ಒಳ್ಳೆ ಕುಟುಂಬದಿಂದ ಬಂದವಳು ತುಂಬಾ ಓದಿಕೊಂಡಿದ್ದಾಳೆ. ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗುವ ಮುನ್ನವೇ ವಿಜಯಲಕ್ಷ್ಮಿನ ಇಷ್ಟ ಪಡುತ್ತಿದ್ದರು ಆ ಪ್ರೀತಿ ಗಟ್ಟಿ ಇರುವುದಕ್ಕೆ ವಿಜಿ ಗಟ್ಟಿಯಾಗಿ ನಿಂತಿದ್ದಾಳೆ. ಯಾವ ಹೆಂಡತಿಗೂ ಇಷ್ಟೋಂದು ದೊಡ್ಡ ಚಾಲೆಂಜ್ ಎದುರಿಸಿರುವುದಿಲ್ಲ. ಮಗ ಆದ ಮೇಲೆ ವಿಜಯಲಕ್ಷ್ಮಿ ಕೆಲಸ ಮಾಡಲು ಹೋಗಲಿಲ್ಲ ಆಕೆಗೆ ಮಗ ಮತ್ತು ಗಂಡ ತುಂಬಾನೇ ಮುಖ್ಯವಾಗಿತ್ತು, ಆ ಸಮಯದಲ್ಲಿ ಆಕೆಗೆ ದೊಡ್ಡ ದೊಡ್ಡ ಕಂಪನಿಗಳಿಂದ ಕೆಲಸ ಬಂದಿತ್ತು ಅದೆಲ್ಲಾ ಬಿಟ್ಟು ಫ್ಯಾಮಿಲಿ ಕಡೆ ಗಮನ ಕೊಟ್ಟಳು' ಎಂದಿದ್ದಾರೆ ಶಮಿತಾ ಮಲ್ನಾಡ್. 

Latest Videos
Follow Us:
Download App:
  • android
  • ios