Asianet Suvarna News Asianet Suvarna News

ಕನ್ನಡಕ್ಕೆ ಬರ್ತಿದ್ದಾನೆ ರಾಬಿನ್ ಹುಡ್;ಪುಷ್ಕರ್-ಸುನಿ ಹೊಸ ಸಿನಿಮಾ!

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ.

kannada producer Pushkara Mallikarjunaiah simple suni new film robin hood vcs
Author
Bangalore, First Published Oct 14, 2020, 10:29 AM IST
  • Facebook
  • Twitter
  • Whatsapp

ಚಿತ್ರದ ಹೆಸರು 'ರಾಬಿನ್ ಹುಡ್‌' ಎಂಬುದು. ಈ ಚಿತ್ರದ ಮೂಲಕ ಹೊಸ ನಾಯಕ ನಟನನ್ನು ಕನ್ನಡಕ್ಕೆ ಪರಿಚಯಿಸುವ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. ಆಕ್ಷನ್ ಹಾಗೂ ಆಡ್ವೆಂಜರ್ ಹಿನ್ನಲೆಯಲ್ಲಿ ಈ ಚಿತ್ರದ ಕತೆ ನಡೆಯಲಿದ್ದು, ಈಗಾಗಲೆ  ಚಿತ್ರಕಥೆ ಪೂರ್ತಿ ಮಾಡಿಕೊಂಡಿದ್ದಾರೆ.

kannada producer Pushkara Mallikarjunaiah simple suni new film robin hood vcs

ಈ ಆಕ್ಷನ್ ಚಿತ್ರದಲ್ಲಿ ಮನರಂಜನೆಯೂ ಇರುವುದು ವಿಶೇಷ.ಈಗಾಗಲೆ ಇದೇ ಕಾಂಬಿನೇಷನ್‌ನಲ್ಲಿ ಶರಣ್ ನಟನೆಯಲ್ಲಿ ಅವತಾರ ಪುರುಷ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಮುಗಿಸುವ ಹಂತಕ್ಕೆ ಬಂದಿದೆ. ಈ ಚಿತ್ರದ ನಂತರ ಸುನಿ ಅವರು ನಟ ಗಣೇಶ್ ಅಭಿನಯಸ 'ಸಕತ್' ಚಿತ್ರದ ಶೂಟಿಂಗ್‌ಗೆ ಮುಗಿಸಿ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ   'ರಾಬಿನ್ ಹುಡ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 

ಸಿನಿಮಾ ವಿತರಣೆ ಆರಂಭಿಸಿದ ಪುಷ್ಕರ್!
 

'ನಮ್ಮ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಅವರ ಹುಟ್ಟುಹಬ್ಬ. ಹೀಗಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ. ಸದ್ಯದಲ್ಲೇ ಚಿತ್ರದ ನಾಯಕ ಸೇರಿದಂತೆ  ಇಡೀ ಚಿತ್ರತಂಡವನ್ನು ರಿವೀಲ್ ಮಾಡಲಿದ್ದೇವೆ. ಮತ್ತೊಮ್ಮೆ ನಮ್ಮ ನಿರ್ಮಾಣದ ಸಂಸ್ಥೆಯಲ್ಲಿ ಸಿಂಪಲ್ ಸುನಿ ಸಿನಿಮಾ ನಿರ್ದೇಶಕ ಮಾಡುತ್ತಿದ್ದಾರೆ' ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

Follow Us:
Download App:
  • android
  • ios