ಪ್ರಿಯಾ ಕೆರ್ವಾಶೆ

ಸಿಟ್ಟು ಮಾಡಿಕೊಂಡ ಹಾಗಿದೆ?

ನಮ್ಮ ಮೇಲೆ ಅಧಿಕಾರ ಚಲಾಯಿಸಲು ಬಂದರೆ, ಅತಿಯಾಗಿ ಆಡಿದರೆ ಸಿಟ್ಟು ಬರತ್ತಲ್ವಾ?

ಕೇವಲ 20 ದಿನಗಳಲ್ಲಿ 'ಕಸ್ತೂರಿ ಮಹಲ್' ಚಿತ್ರೀಕರಣ ಕಂಪ್ಲೀಟ್ ಮಾಡಿದ ಶಾನ್ವಿ!

ಸೈಬರ್‌ ಬುಲ್ಲಿಂಗ್‌ ಅಂತ ಬರೆದುಕೊಂಡಿದ್ದೀರಿ. ಏನಾಯ್ತು?

ನಮ್ಮ ಪೋಸ್ಟ್‌ಗಳಿಗೆಲ್ಲ ಕೆಲವರು ಅಭಿಮಾನಿಗಳ ಹೆಸರಲ್ಲಿ ಏನೇನೆಲ್ಲ ಕಮೆಂಟ್‌ ಮಾಡ್ತಾರೆ. ಸಿನಿಮಾ ರಂಗದಲ್ಲಿರುವ ನಾವು ವೆಸ್ಟರ್ನ್‌ ಉಡುಗೆ ಹಾಕ್ಕೊಳ್ಳಬೇಕಾಗುತ್ತೆ. ಧರಿಸ್ತೀವಿ. ಅದಕ್ಕೆಲ್ಲ ಕಮೆಂಟ್‌ ಮಾಡುತ್ತಾ, ನೀವು ಭಾರತೀಯ ಉಡುಗೆಗಳನ್ನೇ ತೊಡಬೇಕು ಅಂತೆಲ್ಲ ಸೋಷಿಯಲ್‌ ಮೀಡಿಯಾಗಳಲ್ಲಿ ಕಮೆಂಟ್‌ ಮಾಡುತ್ತಾರೆ. ನಾನು ಸಿನಿಮಾ ರಂಗದಲ್ಲಿರಲಿ, ಹೊರಗೇ ಇರಲಿ, ನನ್ನಿಷ್ಟದ ಉಡುಗೆಯನ್ನು ನಾನು ಧರಿಸುತ್ತೇನೆ. ಅದು ನನ್ನ ಹಕ್ಕು. ಅದನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡುವ ಅಧಿಕಾರವೂ ನನಗಿದೆ. ನನ್ನ ಉಡುಗೆ ಇಷ್ಟವಾದಲ್ಲಿ ಚೆನ್ನಾಗಿದೆ ಅಂತ ಕಮೆಂಟ್‌ ಮಾಡಲಿ. ಇಷ್ಟವಾಗದಿದ್ದರೆ ನೋಡೋದೇ ಬೇಡ. ಅದು ಬಿಟ್ಟು ನೀನು ಆ ಥರ ಬಟ್ಟೆಯನ್ನೇ ಹಾಕ್ಬೇಕು, ಸೀರೆಯನ್ನೇ ಉಡಬೇಕು ಅನ್ನೋ ಅಧಿಕಾರ ಇವರಿಗ್ಯಾರು ಕೊಟ್ಟರು..

ಸೆಲೆಬ್ರಿಟಿ ಹೆಣ್ಣುಮಕ್ಕಳ ಮೇಲೆ ಕೆಟ್ಟದಾಗಿ ಕಮೆಂಟ್‌ ಮಾಡೋ ಚಾಳಿ ಬೆಳೆಯುತ್ತಿದೆ ಅನಿಸ್ತಿದೆಯಾ?

ನನಗೆ ಅಂಥಾ ಮನಸ್ಥಿತಿ ಇಷ್ಟಆಗಲ್ಲ. ಅಫ್‌ಕೋರ್ಸ್‌ ಯಾರಿಗೂ ಆಗಲ್ಲ. ಸಾಮರ್ಥ್ಯ ಇದ್ದರೆ ಬದುಕಿನಲ್ಲಿ ಏನಾದ್ರೂ ಒಳ್ಳೆಯ ಕೆಲಸ ಮಾಡಬೇಕು. ಇಂಥಾ ಕೆಟ್ಟಚಾಳಿಗಳನ್ನೆಲ್ಲ ಬಿಡಬೇಕು. ಆಕೆ ಸೆಲೆಬ್ರಿಟಿ ಆಗಿರಬಹುದು, ಸಿನಿಮಾ ನಟಿ ಆಗಿರಬಹುದು. ಅವಳಿಗೂ ಮನಸ್ಥಿತಿ ಅನ್ನೋದಿರುತ್ತೆ, ಸ್ವಾಭಿಮಾನ ಅನ್ನೋದಿರುತ್ತೆ. ಅದಕ್ಕೆ ಧಕ್ಕೆ ತರೋ ಕೆಲಸ ಮಾಡಬಾರದು.

ಕುಮರಿ ಖಂಡಂ ಥೀಮ್‌ನಲ್ಲಿ ಶಾನ್ವಿ; ವೈರಲ್ ಆಯ್ತು ಫೋಟೋ ಶೋಟ್ 

ಕಸ್ತೂರಿ ಮಹಲ್‌ ಶೂಟಿಂಗ್‌ ಇಪ್ಪತ್ತೇ ದಿನದಲ್ಲಿ ಮುಗಿಸಿದ್ದೀರಿ?

ದಿನೇಶ್‌ ಬಾಬು ಅವರ ಪ್ಲ್ಯಾನಿಂಗ್‌ ಹಾಗಿರುತ್ತೆ. ಅವರು ಸ್ವಲ್ಪವೂ ಸಮಯ ವ್ಯರ್ಥ ಮಾಡಲ್ಲ. ಎಲ್ಲವನ್ನೂ ಚೆನ್ನಾಗಿ ಪ್ಲ್ಯಾನ್‌ ಮಾಡಿ ಮಾಡುತ್ತಾರೆ. ಹೀಗಾಗಿ ಅಂದುಕೊಂಡ ಸಮಯಕ್ಕೆ ಸರಿಯಾಗಿ ಶೂಟಿಂಗ್‌ ಮುಗಿಯಿತು. ಕೊಟ್ಟಿಗೆ ಹಾರದ ಚಂದದ ಪರಿಸರದಲ್ಲಿ ಶೂಟಿಂಗ್‌ ಮಾಡಿದ ಅನುಭವ ಬಹಳ ಚೆನ್ನಾಗಿತ್ತು.

ಹೇಗಿತ್ತು ದಿನೇಶ್‌ ಬಾಬು ಅಂಥವರೊಡನೆ ಕೆಲಸ ಮಾಡಿದ ಅನುಭವ?

ಬಹಳ ಚೆನ್ನಾಗಿತ್ತು. ಅಂಥವರೊಡನೆ ಕೆಲಸ ಮಾಡೋದರಿಂದ ನಾವೂ ಸಾಕಷ್ಟುಕಲೀತೀವಿ.