ಸ್ಯಾಂಡಲ್‌ವುಡ್‌ಗೆ ಸಂಬಂಧಿಸಿದ ಎಲ್ಲಾ ಬಗೆಯ ಸುದ್ದಿಗಳ ಪ್ರಸಾರ, ಚಿತ್ರಗಳ ವಿಮರ್ಶೆ, ಚಿತ್ರೋದ್ಯಮದ ವಿಶ್ಲೇಷಣೆಗೆ ಮೀಸಲಾಗಿರುವ ಈ ತಾಣದ ನಾವಿಕರು ದೇಶಾದ್ರಿ ಹೊಸ್ಮನೆ ಮತ್ತು ವಿಜಯ್‌ ಭರಮಸಾಗರ.

ನಟನೆ ಜತೆಗೆ ಮಹಿಳಾ ಉದ್ಯಮಿ ಆಗುವ ಕನಸು ಇದೆ: ಕಾರುಣ್ಯ ರಾಮ್‌ 

ನ. 01ರ ಕನ್ನಡ ರಾಜ್ಯೋತ್ಸವದಂದೇ ಈ ನವೀನ ವೆಬ್‌ ಸೈಟ್‌ ಲಾಂಚ್‌ ಆಗಿರುವುದು ವಿಶೇಷ. ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ವೆಬ್‌ಸೈಟ್‌ ಲಾಂಚ್‌ ಮಾಡಿ ಹರಸಿದ್ದರೆ, ಆರೋಹಿ ನಾರಾಯಣ್‌, ರವಿಶಂಕರ್‌ ಗೌಡ, ಲಹರಿ ವೇಲು ಮೊದಲಾದವರು ಶುಭ ಹಾರೈಸಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌, ದುನಿಯಾ ವಿಜಯ್‌, ಸಂಚಾರಿ ವಿಜಯ್‌, ನೀತು, ಕಾರುಣ್ಯ ರಾಮ್‌ ಮೊದಲಾದ ಸ್ಟಾರ್‌ ನಟರು ‘ಸಿನಿ ಲಹರಿ’ಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

 

ಲಹರಿ ವೇಲು ಅವರು ಈ ತಂಡದ ಪ್ರೇರಕ ಶಕ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಸಿನಿರಂಗ ಸೇರಿ ಭಾರತೀಯ ಸಿನಿಮಾ ಸಂಬಂಧಿಸಿದಂತೆ ಎಲ್ಲಾ ಬಗೆಯ ಮಾಹಿತಿಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ದೇಶಾದ್ರಿ ಹೊಸ್ಮನೆ ಮತ್ತು ವಿಜಯ ಭರಮಸಾಗರ ಪ್ರಸಾರ ಮಾಡಲಿದ್ದಾರೆ.