ಕನ್ನಡ ಸಿನಿಮಾರಂಗದ ಹಿರಿಯ ನಟಿ ಶಾಂತಮ್ಮ ನಿಧನ/ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು / ಕೊರೋನಾ ಹೆಚ್ಚಾದ ಕಾರಣ ಮೈಸೂರಿನ ಮಗಳ ಮನೆಯಲ್ಲಿ ಶಾಂತಮ್ಮ ಇದ್ದರು/ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಸಾವನಪ್ಪಿದ ಹಿರಿಯ ನಟಿ 

ಮೈಸೂರು(ಜು. 19) ಕನ್ನಡ ಸಿನಿಮಾರಂಗದ ಹಿರಿಯ ನಟಿ ಶಾಂತಮ್ಮ ನಿಧನರಾಗಿದ್ದಾರೆ. ಶಾಂತಮ್ಮ ಅವರಿಗೆ 95 ವರ್ಷ ವಯಸ್ಸಾಗಿತ್ತು . ಶನಿವಾರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Add Asianetnews Kannada as a Preferred SourcegooglePreferred

ಕೊರೋನಾ ಪರಿಸ್ಥಿತಿ ಕಾರಣ ಮೈಸೂರಿನ ಮಗಳ ಮನೆಯಲ್ಲಿ ಶಾಂತಮ್ಮ ಇದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಹಿರಿಯ ನಟಿ ಸಾವನಪ್ಪಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಗಂಗಾಧರ್ ಕಳೆದುಕೊಂಡ ಚಿತ್ರರಂಗ

ಸುಮಾರು 500 ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದರು. ಕನ್ನಡ.ತಮಿಳು.ತೆಲುಗು.ಮಲೆಯಾಳಂ ಸೇರಿ ದಕ್ಷಿಣ ಭಾರತದ ಎಲ್ಲ ಭಾಷಾಚಿತ್ರರಂಗದಲ್ಲಿಯೂ ಹೆಸರು ಮಾಡಿದ್ದರು. ಗುಬ್ಬಿ ವೀರಣ್ಣ ಅವ್ರ ಪತ್ನಿ ಬಿ ಜಯಮ್ಮ ತಮ್ಮನ ಹೆಂಡತಿ ಶಾಂತಮ್ಮ. ಶಾಂತಮ್ಮ ಅವರಿಗೆ ಆರು ಜನ ಮಕ್ಕಳಿದ್ದಾರೆ. 

ಕೊರೋನಾ ಸಮಯದಲ್ಲಿಯೇ ಸ್ಯಾಂಡಲ್ ವುಡ್ ಗೆ ಒಂದರ ಮೇಲೆ ಒಂದು ಆಘಾತ ಎದುರಾಗುತ್ತಿದೆ. ನಟ ಚಿರಂಜೀವಿ ಸರ್ಜಾ, ಶ್ರೀನಗರ ಕಿಟ್ಟಿ ಸಹೋದರ ಶಿವಶಂಕರ್ ಹೃದಯಾಘಾತದಿಂದ ನಿಧನರಾಗಿದ್ದರು. ನಿರ್ದೇಶಕ ಜೋಗಿ ಪ್ರೇಮ್ ಅವರ ತಾಯಿ ಸಹ ಇಹಲೋಕದ ಪ್ರಯಾಣ ಮುಗಿಸಿದ್ದರು.