-ಹೀಗೆ ಹೇಳುವ ಮೂಲಕ ಸರ್ಪೆ್ರೖಸ್‌ ಕೊಟ್ಟಿರುವುದು ಸ್ವತಃ ಸಂಜಯ್‌ ದತ್‌. ಸಂಜು ಬಾಬಾ ಅಧೀರನ ಗೆಟಪ್‌ನಲ್ಲಿ ‘ಕೆಜಿಎಫ್‌ 2’ ಅಡ್ಡೆಗೆ ನವೆಂಬರ್‌ ತಿಂಗಳಿಂದ ಎಂಟ್ರಿ ಆಗುತ್ತಿದ್ದಾರೆ. ಯಶ್‌ ಎದುರು ನಿಲ್ಲಲು ಏನೆಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದುನ್ನು ಅವರೇ ಒಂದು ವಿಡಿಯೋ ಮಾಡಿದ್ದು, ಅದು ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಲ್ಲಿಗೆ ಸಂಜು ಬಾಬಾ ಮತ್ತೆ ‘ಕೆಜಿಎಫ್‌ 2’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎನ್ನುವ ಅನುಮಾನದ ಮಾತುಗಳಿಗೆ ತೆರೆ ಬಿದ್ದಿದೆ.

ಚಿಕಿತ್ಸೆಯ ಗುರುತು ತೋರಿಸಿದ ಸಂಜಯ್ ದತ್: ಕ್ಯಾನ್ಸರ್‌ನಿಂದ ಬೇಗ ಹೊರ ಬರ್ತೀನಿ ಎಂದ KGF ನಟ 

ಈಗಾಗಲೇ ಚಿತ್ರಕ್ಕೆ ಮಂಗಳೂರಿನ ಬೀಚ್‌ನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಯಶ್‌, ಶ್ರೀನಿಧಿ ಶೆಟ್ಟಿಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಇರುವ ಚಿತ್ರೀಕರಣದ ಫೋಟೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಸಂಜಯ್‌ ದತ್‌ ಸಿದ್ಧತೆಯ ಮಾತುಕತೆ

- ಶಸ್ತ್ರ ಚಿಕಿತ್ಸೆ ನಂತರ ರೆಗ್ಯುಲರ್‌ ದಿನಚರಿಗೆ ತೊಂದರೆ ಆಗುತ್ತಿಲ್ಲ. ಹೀಗಾಗಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ.

ಕೆಜಿಎಫ್‌ ಅಖಾಡಕ್ಕೆ ಸಂಜು ಸಿದ್ಧ, ಬಾಕಿ ಉಳಿದಿರುವ ಆ ದೃಶ್ಯ ಯಾವುದು?

- ಅಧೀರನ ಪಾತ್ರಕ್ಕಾಗಿ ಗಡ್ಡ, ಕೂದಲು ಬಿಟ್ಟಿದ್ದೆ. ಹೀಗೆ ಅದೇ ರೀತಿ ಹೇರ್‌ ಸ್ಟೈಲ್‌ ಮಾಡಿಕೊಳ್ಳುತ್ತಿದ್ದೇನೆ. ಗಡ್ಡವನ್ನು ಸಾಕಷ್ಟುರಫ್‌ ಮಾಡಿಕೊಳ್ಳುತ್ತಿದ್ದೇನೆ.

- ಕಣ್ಣಿನ ಹುಬ್ಬಿನ ಮೇಲೆ ಇರುವ ಮಾರ್ಕ್ ಕೂಡ ಈ ಚಿತ್ರದ ಒಂದು ಬಾಗ. ಹೀಗಾಗಿ ಅದು ಕೂಡ ಮುಂದುವರಿಯಲಿದೆ.

- ನವೆಂಬರ್‌ ಮೊದಲ ವಾರದಲ್ಲಿ ‘ಕೆಜಿಎಫ್‌ 2’ ಶೂಟಿಂಗ್‌ ಸೆಟ್‌ಗೆ ಹಾಜರಾಗುತ್ತಿದ್ದೇನೆ.

"