ಅಲರ್ಜಿ ಟೆಸ್ಟ್ ಮಾಡಿಸ್ಕೊಳ್ರೀ ..ಹೀಗಂತ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ರಶ್ಮಿಕಾ ಕರೆ ಕೊಟ್ಟಿದ್ದಾರೆ. ಅರೆ, ಈಕೆಯ ಬ್ಯೂಟಿ ಸೀಕ್ರೆಟ್‌ಗೂ ಅಲರ್ಜಿ ಟೆಸ್ಟ್ ಗೂ ಏನ್‌ ಸಂಬಂಧ ಅಂತ ಕೇಳ್ಬೇಡಿ. ತನಗೆ ಇರುವ ಅಲರ್ಜಿಗಳನ್ನು ಗುರುತಿಸಿ ನಿವಾರಿಸಿದ ಬಳಿಕವೇ ತಾನಿಷ್ಟು ಸುಂದರಿಯಾಗೋದು ಸಾಧ್ಯವಾಯ್ತು ಅಂತಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಟಾಲಿವುಡ್‌ನಲ್ಲಿ ಬ್ಯುಸಿಯೆಸ್ಟ್ ನಟಿ. ಆಗೊಮ್ಮೆ ಈಗೊಮ್ಮೆ ಸ್ಯಾಂಡಲ್‌ವುಡ್‌ನಲ್ಲೂ ಇವರ ಬಗ್ಗೆ ಮಾತು ಕೇಳುತ್ತಿರುತ್ತದೆ. ಕಿರಿಕ್ ಪಾರ್ಟಿ ಮೂಲಕ ಎಂಟ್ರಿಕೊಟ್ಟ ರಶ್ಮಿಕಾ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯನ್ನ ಇಷ್ಟಪಟ್ಟಿದ್ದು, ಎಂಗೇಜ್‌ಮೆಂಟ್ ಮಾಡ್ಕೊಂಡಿದ್ದು, ಆ ಬಳಿಕ ಇಬ್ಬರ ನಡುವೆ ಕ್ಲಾಶ್‌ ಬಂದು ಬೇರ್ಪಟ್ಟದ್ದು ಈಗ ಹಳೆಯ ಸುದ್ದಿ. ಒಂದು ವೇಳೆ ರಕ್ಷಿತ್ ಶೆಟ್ಟಿ ಮಾತು ಕೇಳಿ ಈಗಾಗಲೇ ಮದುವೆಯಾಗ್ತಿದ್ರೆ ರಶ್ಮಿಕಾ ಈ ಪರಿ ಮಿಂಚೋದು, ಹೆಸರು ಮಾಡೋದು ಸಾಧ್ಯವೇ ಇರುತ್ತಿರಲಿಲ್ಲ ಅನ್ನುತ್ತಿದ್ದಾರೆ ರಶ್ಮಿಕಾ ಆಪ್ತರು. ರಶ್ಮಿಕಾ ತನ್ನ ಸ್ವಾರ್ಥಕ್ಕಾಗಿ ರಕ್ಷಿತ್ ಶೆಟ್ಟರನ್ನು ಬಳಸಿಕೊಂಡರು ಅಂತ ಬೈಯ್ಯೋರು ಸಾಕಷ್ಟು ಜನ ಇದ್ದಾರೆ. ಅಫ್‌ಕೋರ್ಸ್ ಕೆಲವೊಮ್ಮೆ ತನ್ನ ಅತಿರೇಕಕ್ಕೆ ಮತ್ತೆ ಕೆಲವೊಮ್ಮೆ ತನ್ನದೇನೂ ತಪ್ಪಿಲ್ಲದಿದ್ದರೂ ರಶ್ಮಿಕಾ ಎಂಬ ಚೆಲುವೆ ಸತತವಾಗಿ ಟ್ರೋಲ್‌ಗಳಿಗೆ ಆಹಾರವಾಗುತ್ತಲೇ ಇದ್ದಾರೆ. ಈ ಹಿಂದೆ ತನ್ನ ಬಗ್ಗೆ ಕೇವಲವಾಗಿ ಬರೆದುಕೊಂಡವರನ್ನು ರಶ್ಮಿಕಾ ಸೋಷಲ್‌ ಮೀಡಿಯಾಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಟ್ರೋಲ್‌ಗಳಿಂದ ಬೇಸತ್ತು ಒಂದಿಷ್ಟು ದಿನ ಸೋಷಲ್ ಮೀಡಿಯಾಗಳಿಂದಲೂ ಹೊರಗುಳಿದಿದ್ದರು. ಈಗ ಸೋಷಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ತಿದ್ದಾರೆ. ಅಲ್ಲಲ್ಲಿ ಈಕೆಯ ಬಗ್ಗೆ ಕೆಟ್ಟದಾಗಿ ಮಾತಾಡೋದು, ಟ್ರೋಲ್ ಮಾಡೋದು ನಡೆದರೂ ಹಿಂದೆ ರಕ್ಷಿತ್ ಜೊತೆಗೆ ಬ್ರೇಕ್‌ಅಪ್ ಆದಾಗ ರೊಚ್ಚಿಗೆದ್ದಂತಾ ಸ್ಥಿತಿ ಈಗಿಲ್ಲ.

ರಶ್ಮಿಕಾ ಮಂದಣ್ಣ ಹೊಸ ಜಾಲೆಂಜ್; ಅದಿತಿ ಪ್ರಭುದೇವ್‌ ವಿಡಿಯೋ ವೈರಲ್!...
ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಮೇಲಿಂದ ರಶ್ಮಿಕಾ ಮಂದಣ್ಣ ಯಶಸ್ಸಿನ ಗ್ರಾಫ್ ಏರುತ್ತಲೇ ಹೋಯ್ತು. ಶುರು ಶುರುವಿಗೆ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಹೆಸರು ಸೇರಿಕೊಂಡಿತ್ತು. ಕ್ರಮೇಣ ಅದೂ ಮಾಸಿತು. ಕಾಲ ಕಳೆದಂತೆ ಜನ ಎಲ್ಲವನ್ನೂ ಮರೀತಾರೆ ಅನ್ನೋದಕ್ಕೆ ಇದು ಸಾಕ್ಷಿಯಂತಿದೆ. ಇರಲಿ, ಲಾಕ್‌ಡೌನ್‌ಗೂ ಮುಂಚೆ ಮಹೇಶ್ ಬಾಬು ಜೊತೆಗೆ ನಟಿಸಿದ ಸರಿಲೇರು ನೀಕೆವ್ವಾರು ಸಿನಿಮಾ, ಆ ಬಳಿಕ ನಿತಿನ್ ಜೊತೆಗೆ 'ಭೀಷ್ಮ' ದಂಥಾ ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಈ ಕೊಡವ ಹುಡುಗಿಯದು.

ಈಗ ರಶ್ಮಿಕಾ ಸುದ್ದಿಯಾಗಿರೋದು ತನ್ನ ಬ್ಯೂಟಿ ಕಾರಣಕ್ಕೆ. ಇನ್‌ಸ್ಟಾಗ್ರಾಮ್ ನಲ್ಲೀಗ ಈ ಬಟ್ಟಲು ಕಣ್ಣಿನ ಸುಂದರಿ ತನ್ನ ಬ್ಯೂಟಿ ಸೀಕ್ರೆಟ್‌ ಹಂಚಿಕೊಂಡಿದ್ದಾಳೆ. ಮೇಕಪ್ ಇಲ್ಲದ ತನ್ನದೊಂದು ಫೋಟೋವನ್ನು ಅಪ್‌ಲೋಡ್‌ ಮಾಡಿದ್ದಾರೆ. ಮೇಕಪ್ ಮಾಡ್ಕೊಂಡಿರೋ ರಶ್ಮಿಕಾಗೂ, ಇಲ್ಲಿರುವ ಮೇಕಪ್ ಇಲ್ಲದ ರಶ್ಮಿಕಾಗೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ. ಈ ಮೂಲಕ ತಾನೊಬ್ಬ ಸಹಜ ಸುಂದರಿ ಅನ್ನೋದನ್ನು ಈಕೆ ಸಾಬೀತು ಪಡಿಸಿದಂತಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮೇಕಪ್‌ಲೆಸ್‌ ಫೋಟೋ ಹಾಕ್ಕೊಂಡಿರೋದರ ಜೊತೆಗೆ ತನ್ನ ಸೌಂದರ್ಯದ ರಹಸ್ಯವನ್ನು ಚೆಲುವೆ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.

 ಕೊನೆಗೂ ಮಹೇಶ್‌ ಬಾಬು ಅವರಿಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ ಮಂದಣ್ಣ!...

ಅಲರ್ಜಿ ಟೆಸ್ಟ್ ಮಾಡಿಸ್ಕೊಳ್ರೀ..

ಹೀಗಂತ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ರಶ್ಮಿಕಾ ಕರೆ ಕೊಟ್ಟಿದ್ದಾರೆ.

View post on Instagram

ಅರೆ, ಈಕೆಯ ಬ್ಯೂಟಿ ಸೀಕ್ರೆಟ್‌ಗೂ ಅಲರ್ಜಿ ಟೆಸ್ಟ್ ಗೂ ಏನ್‌ ಸಂಬಂಧ ಅಂತ ಕೇಳ್ಬೇಡಿ. ತನಗೆ ಇರುವ ಅಲರ್ಜಿಗಳನ್ನು ಗುರುತಿಸಿ ನಿವಾರಿಸಿದ ಬಳಿಕವೇ ತಾನಿಷ್ಟು ಸುಂದರಿಯಾಗೋದು ಸಾಧ್ಯವಾಯ್ತು ಅಂತಿದ್ದಾರೆ ರಶ್ಮಿಕಾ. ಅಂದ್ರೆ ಮೊದಲು ರಶ್ಮಿಕಾ ನೋಡದಕ್ಕೆ ಚೆನ್ನಾಗಿರಲಿಲ್ವಾ ಅಂತೆಲ್ಲ ಕೇಳ್ಬೇಡಿ. ಈಕೆ ಅಂಥಾ ತರಲೆ ಪ್ರಶ್ನೆಗಳಿಗೆಲ್ಲ ಉತ್ತರಿಸೋದಿಲ್ಲ. ಮೊದಲಿಗೆ ಈಕೆಗೆ ಅನೇಕ ತರಕಾರಿಗಳಿಂದ ಅಲರ್ಜಿ ಆಗುತ್ತಿತ್ತಂತೆ. ಆ ಅಲರ್ಜಿಯನ್ನು ಗುರುತಿಸಿ ಅಂಥಾ ತರಕಾರಿಗಳ ಸೇವನೆ ಬಿಟ್ಟ ಮೇಲೆ ಸ್ಕಿನ್ ಹೊಳೆಯೋ ಜೊತೆಗೆ ಸಾಕಷ್ಟು ಸಾಫ್ಟ್ ಚೆಂದವೂ ಆಯ್ತು ಅಂತ ಇನ್‌ಸ್ಟಾದಲ್ಲಿ ಈಕೆ ವಿಚಾರ ಹಂಚ್ಕೊಂಡಿದ್ದಾರೆ. ನೀವೂ ಅಲರ್ಜಿ ಟೆಸ್ಟ್ ಮಾಡಿಸಿ, ಅಲರ್ಜಿಯಿಂದ ನಿಮ್ಮ ಸ್ಕಿನ್‌ ಹಾಳಾಗಿದ್ರೆ ಸರಿ ಮಾಡ್ಕೊಳ್ರೀ ಅಂತ ಸಲಹೆಯನ್ನೂ ಕೊಟ್ಟಿದ್ದಾರೆ ರಶ್ಮಿಕಾ.