Asianet Suvarna News Asianet Suvarna News

ಫ್ರೆಂಡ್ಸ್‌ಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ ಮಂದಣ್ಣ; ವಿಡಿಯೋ ವೈರಲ್!

ಆಪ್ತ ಗೆಳೆಯರನ್ನು ಭೇಟಿ ಮಾಡಿದ ರಶ್ಮಿಕಾ ಮಂದಣ್ಣ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ.
 

kannada rashmika mandanna surprises her close friends video vcs
Author
Bangalore, First Published Oct 21, 2020, 3:49 PM IST

ಸ್ಯಾಂಡಲ್‌ವುಡ್‌ ಬಟ್ಟಲು ಕಣ್ಣಿನ ಚೆಲುವೆ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್‌ ಹಿಟ್‌ ಚಿತ್ರಗಳನ್ನು ನೀಡುತ್ತಾ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ರಶ್ಮಿಕಾ, ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತಾರೆ ಎಂದು ಅಭಿಮಾನಿಗಳಿಗೆ ಅಪ್ಡೇಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ತಮ್ಮ ಆಪ್ತ ಗೆಳೆಯರಿಗೆ ಸರ್ಪ್ರೈಸ್ ಕೊಟ್ಟ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಕಣ್ಮಚ್ಚಿಕೊಂಡೇ ರಶ್ಮಿಕಾ ಫೋಟೋ ಬಿಡಿಸಿದ ಅಭಿಮಾನಿ

ರಶ್ಮಿಕಾ ವಿಡಿಯೋ:
ವಿಡಿಯೋದಲ್ಲಿರುವ ಸ್ನೇಹಿತರು ರಶ್ಮಿಕಾ ಸ್ಕೂಲ್ ಫ್ರೆಂಡ್ಸ್‌ ಆ ಅಥವಾ ಕಾಲೇಜ್ ಫ್ರೆಂಡ್ಸ್ ಆ ಎಂಬುದು ತಿಳಿದಿಲ್ಲವಾದರೂ, ಆವರನ್ನು ಭೇಟಿ ಮಾಡಿದ ಸಂತಸ ನಟಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಬಹಳ ಸಮಯದ ನಂತರ ರಶ್ಮಿಕಾಳನ್ನು ಒಟ್ಟಾಗಿ ನೋಡಿ ಸ್ನೇಹಿತರೂ ಕೂಡ ಶಾಕ್ ಆಗಿದ್ದರು. ಅವರಿಗೆ ಜಾರ್‌ ಬಾಟಲ್‌ನಲ್ಲಿ ಕೇಕ್‌/ಪೇಸ್ಟ್ರೀಸ್‌ ಕೊಟ್ಟು ಅಪ್ಪಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 

How to surprise your friends 101.. 💃🏻🕺🏻

A post shared by Rashmika Mandanna (@rashmika_mandanna) on Oct 19, 2020 at 8:42am PDT

ಕೋಟಿ ಫಾಲೋಯರ್ಸ್ ಕ್ಲಬ್ಬಿಗೆ ರಶ್ಮಿಕಾ
ಇನ್ನು ಹೆಚ್ಚಾಗಿ ಇನ್‌ಸ್ಟಾಗ್ರಾಂ ಬಳಸುವ ರಶ್ಮಿಕಾ ಮೂರು ದಿನಗಳ ಹಿಂದೆ 10 ಮಿಲಿಯನ್ ಫಾಲೋವರ್ಸ್‌ ಪಡೆದುಕೊಂಡಿದ್ದಾರೆ. ಇದೇ ಸಂತೋಷಕ್ಕೆ ಶಾಂಪೇನ್‌ ಗ್ಲಾಸ್‌ ಚೀಯರ್ಸ್‌ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದರು.  ಹಾಗೇ ತಮ್ಮ ಮುಂದಿನ ಚಿತ್ರ 'ಜೈ ಸುಲ್ತಾನ್' ಚಿತ್ರೀಕರಣ ಮುಗಿದಿರುವುದರ ಬಗ್ಗೆಯೂ ತಿಳಿಸಿದ್ದಾರೆ. ಕಾರ್ತಿ ಪಕ್ಕ ಮಧು ಮಗಳಂತೆ ಕಂಗೊಳ್ಳಿಸುತ್ತಿರುವ ರಶ್ಮಿಕಾ 'ನನ್ನ ಮೊದಲ ತಮಿಳು ಸಿನಿಮಾ ಶೂಟಿಂಗ್ ಮುಗಿದಿದೆ.  ನಾನು ತುಂಬಾ ಇಷ್ಟ ಪಟ್ಟು ಕೆಲಸ ಮಾಡಿದ ತಂಡವಿದು,' ಎಂದು ಬರೆದುಕೊಂಡಿದ್ದರು.

ಬ್ರೇಕ್‌ಫಾಸ್ಟ್‌ ಸೀಕ್ರೆಟ್‌ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ; ಫಿಟ್ನೆಸ್‌ ಮಂತ್ರಾನೂ ಹೇಳಿದ್ದಾರೆ! 

ಎಷ್ಟೇ ಬ್ಯುಸಿ ಇದ್ದರೂ ರಶ್ಮಿಕಾ ಸ್ನೇಹಿತರಿಗೆ ಸಮಯ ಕೊಟ್ಟಿದ್ದಾರೆ. ಅವರಿಗೆ ಗೊತ್ತಿಲ್ಲದೆ ಸರ್ಪ್ರೈಸ್ ನೀಡಿದ್ದಾರೆ. You are truly down to earth ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios