ರಚಿತಾ ರಾಮ್ ಜೊತೆಗೆ ‘ಲಕಲಕ ಲ್ಯಾಂಬೋರ್ಗಿನಿ’ ರ್ಯಾಪ್ ಸಾಂಗ್ ಮೂಲಕ ಹವಾ ಎಬ್ಬಿಸಿದ ಚಂದನ್ ಶೆಟ್ಟಿ ಇದೀಗ ಚಿತ್ರವೊಂದರ ನಾಯಕನಾಗಲು ಹೊರಟಿದ್ದಾರೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ನಿರ್ದೇಶಿಸಿದ್ದ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ಹೆಸರು ಇನ್ನಷ್ಟೇ ರಿವೀಲ್ ಆಗಬೇಕಿದೆ. ಚಿತ್ರದ ಬಗ್ಗೆ ಚಂದನ್ ಮಾತುಗಳಿವು.
ಕೆಲವು ದಿನಗಳಿಂದ ಸಾಕಷ್ಟು ಸಿನಿಮಾ ಕತೆ ಕೇಳೋದು, ನಿರ್ದೇಶಕರು ಬಂದು ಮಾತಾಡಿಸೋದು ನಡೆಯುತ್ತಲೇ ಇತ್ತು. ‘ರಾಜ ರಾಣಿ’ ರಿಯಾಲಿಟಿ ಶೋನಲ್ಲಿ ನಿರ್ದೇಶಕ ಸುಜಯ್ ಶಾಸ್ತ್ರಿ ನಾಲ್ಕು ಲೈನಲ್ಲಿ ಈ ಸಿನಿಮಾದ ಕತೆ ಹೇಳಿದರು. ಬಹಳ ಇಂಪ್ರೆಸ್ ಆದೆ.
80 - 90ರ ದಶಕದ ಕಥೆ ಈ ಚಿತ್ರದ್ದು. ಈ ಸಿನಿಮಾಕ್ಕಾಗಿ ಸಂಪೂರ್ಣ ಗೆಟಪ್ ಚೇಂಜ್ ಮಾಡ್ಕೊಂಡಿದ್ದೀನಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಇದೇ ರೆಟೊ್ರೀ ಸ್ಟೈಲ್‌ನಲ್ಲೇ ಕಾಣಿಸಿಕೊಳ್ಳುತ್ತೀನಿ. ಡಿಗ್ರಿ ಓದಿರುವ ಹುಡುಗನಾಗಿರುವ ಕಾರಣ ಹಳ್ಳಿ ಭಾಷೆ ಏನೂ ಇರಲ್ಲ. ಸಿಟಿ ಹುಡುಗನಾಗಿಯೇ ಕಾಣಿಸಿಕೊಂಡಿದ್ದೀನಿ.
ಪತಿ Chandan ಜತೆ ವಿಡಿಯೋ; ಹಾಗಲಕಾಯಿ ತಿಂದು ಟ್ರೋಲ್ ಆದ Niveditha Gowda
ನನ್ನ ಹೊಸ ಗೆಟಪ್ ನೋಡಿದವರು ‘ಇದು ನಿಜಕ್ಕೂ ನೀವೇನಾ’ ಅಂತ ಉದ್ಗಾರ ತೆಗೀತಿರುತ್ತಾರೆ. ಇದ್ಯಾಕೆ ಹೀಗಿದ್ದೀರಿ ಅಂತ ಕುತೂಹಲದಿಂದ ವಿಚಾರಿಸ್ತಾರೆ. ಆ ಕುತೂಹಲವೇ ನನಗೂ ಬೇಕಿದ್ದಿದ್ದು. ನನ್ನ ರ್ಯಾಪ್‌ಗಳಲ್ಲಿ ಬಹಳ ಹೈಫೈ ಲುಕ್‌ನಲ್ಲೇ ಕಾಣಿಸಿಕೊಂಡಿದ್ದೇನೆ. ಸ್ವತಃ ನನಗೇ ಇದೊಂದು ಹೊಸ ಅನುಭವ.
ಕೆಲವೊಂದು ಜಾಗಗಳು ವಿಚಿತ್ರವಾಗಿರುತ್ತವೆ. ಆ ಜಾಗಗಳನ್ನು ಸೈಂಟಿಫಿಕ್ ಆಗಿ ನೋಡಿದ್ರೆ ಏನೂ ಗೊತ್ತಾಗಲ್ಲ. ಅಂಥಾ ಮಿಸ್ಟೀರಿಯಸ್ ಸಬ್ಜೆಕ್‌ಟ್ ಜೊತೆಗೆ ಫನ್ ಸಹ ಚಿತ್ರದಲ್ಲಿ ಅಡಕವಾಗಿದೆ.
![]()
ಫೆಬ್ರವರಿಯಿಂದ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಶೂಟಿಂಗ್ ನಡೆಯುತ್ತೆ. ಇದಾದ ಬಳಿಕ ನನ್ನ ಪತ್ನಿ ನಿವೇದಿತಾ ಜೊತೆಗೆ ಪಾರ್ಟಿ ರ್ಯಾಪ್ ಮಾಡುವ ಐಡಿಯಾ ಇದೆ.
