ವೈರಲ್ ಅಗುತ್ತಿದೆ ನಟಿ ರಮ್ಯಾ ಫೋಟೋ. ಹಾರ್ಟ್‌ ಎಮೋಜಿ ಹಾಕಿರುವುದು ಯಾಕೆ ಎಂದು ಪ್ರಶ್ನಿಸಿದ ನೆಟ್ಟಿಗರು...

ಕನ್ನಡ ಚಿತ್ರರಂಗ (Sandalwood) ಅಂದ ತಕ್ಷಣ 90ರ ದಶಕದ ಪಡ್ಡೆ ಹುಡುಗರಿಗೆ ಮೊದಲು ನೆನಪಾಗುವುದು ಮೋಹಕ ತಾರೆ, ಓನ್ ಅಂಡ್ ಓನ್ಲಿ ಬ್ಯೂಟಿ ಕ್ವೀನ್ ರಮ್ಯಾ (Ramya). ಶ್ರೀ ವಜ್ರೇಶ್ವರಿ ಕಂಬೈನ್ಸ್ (Sri Vajreshwari Combines) ಮೂಲಕ ಸಿನಿ ಜರ್ನಿ ಅರಂಭಿಸಿದ ದಿವ್ಯಾ ಸ್ಪಂದನ (Divya Spandana) ಆನ್‌ ಸ್ಕೀನ್‌ ಹೆಸರನ್ನು ರಮ್ಯಾ ಎಂದು ಬಲಾಯಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಜೊತೆ ಕೆಲಸ ಮಾಡಿದ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಿನಿಮಾ ಕೈ ಬಿಟ್ಟರು. ಕೆಲವು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ (Congress) ರಮ್ಯಾ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಬಿಟ್ಟರು. 

ರಮ್ಯಾ ಎಲ್ಲಿದ್ದಾರೆ? ಮದುವೆ ಆಗಿದ್ದಾರಾ? ಏನು ಕೆಲಸ ಮಾಡುತ್ತಿದ್ದಾರೆ? ಕರ್ನಾಟಕದಲ್ಲಿ ಕಾಣಿಸಿಕೊಂಡರಂತೆ ಹೌದಾ? ಹೀಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ. ಯಾರನ್ನೇ ನೋಡಿದರು ರಮ್ಯಾರನ್ನು ನೋಡಿದಂತೆ ಆಗುತ್ತದೆ ಎಂದು ಸಿನಿ ರಸಿಕರು ಹೇಳುತ್ತಿದ್ದರು. ಒಟ್ಟಿಲ್ಲಿ ರಮ್ಯಾ ಕಣ್ಣು ಮುಂದೆ ಬಂದ್ರೆ ಸಾಕು ಅನಿಸುತ್ತಿತ್ತು ಅಷ್ಟರಲ್ಲಿ ಇನ್‌ಸ್ಟಾಗ್ರಾಂಗೆ (Instagram) ಎಂಟ್ರಿ ಕೊಟ್ಟರು. 

ಆರಂಭದಲ್ಲಿ ಸಾಕು ಪ್ರಾಣಿಗಳು, ಪ್ರಕೃತಿ ಮತ್ತು ಆಹಾರದ ಬಗ್ಗೆ ಹಂಚಿಕೊಳ್ಳುತ್ತಿದ್ದ ರಮ್ಯಾ ಈ ಮೂಲಕ ಹೊಸ ಕಲಾವಿದರಿಗೆ ಕನೆಕ್ಟ್‌ ಆಗುತ್ತಿದ್ದರು. ಅವರ ಫೋಟೋಗಳಿಗೆ, ವಿಡಿಯೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಹೊಸಬರ ತಂಡ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರಿಗೆ ಸಪೋರ್ಟ್ ಮಾಡಿ ಲಿಂಕ್ ಹಾಕುತ್ತಾರೆ. ಇತ್ತೀಚಿಗೆ ಅವಾರ್ಡ್‌ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರುವ ರಮ್ಯಾ ಒಂದು ಸೆಲ್ಫಿ ಹಂಚಿಕೊಂಡು ಪಡ್ಡೆ ಹುಡುಗರ ಹಾರ್ಟ್‌ ಬ್ರೇಕ್ ಮಾಡಿದ್ದಾರೆ. 

ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಮನೆಯಲ್ಲಿ ಕನ್ನಡದ ಕ್ಯೂಟ್ ಹೀರೋಯಿನ್ಸ್ ಪಾರ್ಟಿ!

ಹೌದು! ರಮ್ಯಾ ಯುವಕನೊಬ್ಬನನ್ನು ತಬ್ಬಿಕೊಂಡಿರುವ ಸೆಲ್ಫಿಯನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಹಾರ್ಟ್‌ ಸಿಂಬಲ್‌ ಕೂಡ ಹಾಕಿದ್ದಾರೆ. ಹುಡುಗ ನೋಡಲು ತುಂಬಾ ಸ್ಮಾರ್ಟ್‌ ಆಗಿದ್ದಾನೆ ಬಾಯ್‌ಫ್ರೆಂಡ್‌ ಇರಬಹುದು ಎಂದು ಕೆಲವರು, ಇಲ್ಲ ಇಲ್ಲ ಒಂದೇ ರೀತಿ ಇದ್ದಾರೆ ನೋಡಲು ಬಹುಷ ಸಹೋದರ ಇರಬಹುದು. ಬೆಸ್ಟ್‌ ಫ್ರೆಂಡ್‌ಗೂ ಕೂಡ ಹಾರ್ಟ್‌ ಸಿಂಬಲ್ ಹಾಕುತ್ತಾರೆ ತಪ್ಪಾಗಿ ನೋಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ರಮ್ಯಾ ಕಮ್ ಬ್ಯಾಕ್:

ನಟಿ ರಮ್ಯಾ ಅವರು ಪುನೀತ್ ರಾಜ್‌ಕುಮಾರ್ ಅಗಲಿದ್ದಾಗ ಬೆಂಗಳೂರಿಗೆ ಬಂದಿದ್ದರು. ದ್ವಿತ್ವ ಸಿನಿಮಾದಲ್ಲಿ ಅಪ್ಪು ಜೊತೆ ಅಭಿನಯಿಸಬೇಕಿತ್ತು ಕಥೆ ಕೇಳಿದೆ ಮಾತುಕತೆ ನಡೆಯುತ್ತಿತ್ತು ಅಷ್ಟರಲ್ಲಿ ಅಪ್ಪು ಅಗಲಿದರು ಎಂದು ಮಾಧ್ಯಮಗಳಲ್ಲಿ ಮಾತನಾಡಿದರು. ರಮ್ಯಾ ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡುತ್ತಿದ್ದಾರೆ ಎಂಬ ಸಣ್ಣ ಸುಳಿವು ಜನರಿಗೆ ಸಿಕ್ಕಿದೆ. 

Divyaspandana ರಮ್ಯಾ ಮತ್ತೆ ಸಿನಿಮಾಗೆ ಬಂದಾಯ್ತಂತೆ, ನಿಜನಾ?

ರಮ್ಯಾ ಸಿನಿಮಾದಲ್ಲಿ ಇದ್ದಾಗ ಇದ್ದ ಸೆಲೆಬ್ರಿಟಿಗಳು ಮಾತ್ರವಲ್ಲ ಈಗೀಗ ಚಿತ್ರರಂಗಕ್ಕೆ ಬರುವವರನ್ನೂ ತುಂಬಾನೇ ಆತ್ಮೀಯವಾಗಿ ಮಾತನಾಡಿಸುತ್ತಿದ್ದಾರೆ. ಅಮೂಲ್ಯ ಸೀಮಂತ ಕಾರ್ಯಕ್ರಮದಲ್ಲಿ ಕೂಡ ರಮ್ಯಾ ಕಾಣಿಸಿಕೊಂಡಿದ್ದಾರೆ. ರಮ್ಯಾ ಯಾವುದೇ ಫೋಟೋ ಅಪ್ಲೋಡ್ ಮಾಡಿದರು ಆ ಸ್ಥಳ ಯಾವುದು ಎಂದು ಗೆಸ್ ಮಾಡಲು ಶುರ ಮಾಡಿದ್ದಾರೆ. 

ಒಟ್ಟಿನಲ್ಲಿ ಜೂನ್‌ ತಿಂಗಳಿನಲ್ಲಿ ರಮ್ಯಾ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದಷ್ಟು ಬೇಗ ಗುಡ್ ನ್ಯೂಸ್ ಕೊಟ್ಟಿ ಎನ್ನುತ್ತಿದ್ದಾರೆ ಅಭಿಮಾನಿಗಳು.