ಸ್ಯಾಂಡಲ್‌ವುಡ್‌ ಡಿಫರೆಂಟ್ ಹಾಗೂ ಕ್ರಿಯೇಟಿವ್ ನಿರ್ದೇಶಕ ಜೋಗಿ ಪ್ರೇಮ್ ಊಟಿ ಮಳೆಯಲ್ಲಿಯೇ  ಏಕ್‌ ಲವ್‌ ಯಾ ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರತಂಡದ ಜೊತೆಯೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ರಕ್ಷಿತಾ ಇನ್‌ಸ್ಟಾಗ್ರಾಂನಲ್ಲಿ ಶುಭ ಹಾರೈಸಿದ್ದಾರೆ.

'ಕೊನೆಗೂ ಉಳಿಸಿಕೊಳ್ಳಲು ಆಗಲಿಲ್ಲ ಜೋಗಿ ಪ್ರೇಮ್‌ ಭಾವುಕ ಮಾತು! 

ಸುಂಟರಗಾಳಿ ಪೋಸ್ಟ್‌:
'ಪ್ರೇಮ್‌ ನಿಮ್ಮ ಬಗ್ಗೆ ನಾನು ಏನು ಹೇಳಲೂ ಸಾಧ್ಯವಿಲ್ಲ. ನಿಮ್ಮ ಬಗ್ಗೆ ಏನಾದರೂ ಹೇಳೋಣ ಅಂದರೆ ಪದಗಳೇ ಸಿಗುತ್ತಿಲ್ಲ. ನೀವು ನನ್ನ ಜೀವನದಲ್ಲಿರುವುದಕ್ಕೆ ನಾನು ಎಷ್ಟು ಕೃತಜ್ಞತೆ ತಿಳಿಸಿದರೂ ಸಾಲದು. ನಿಮ್ಮ ಪರಿಶುದ್ಧವಾದ ಪ್ರೀತಿ ಎಂದೆಂದಿಗೂ ವಂಡರ್‌ಫುಲ್‌. ನೀವು ನನ್ನ ಪತಿ ಎಂಬ ಕಾರಣಕ್ಕೆ ಹೇಳುತ್ತಿಲ್ಲ ಇದು ಸತ್ಯ. ನನ್ನ ಸದಾ ಆರ್ಥ ಮಾಡಿಕೊಂಡಿರುವ ವ್ಯಕ್ತಿ ನೀವು. ಹ್ಯಾಪಿ ಬರ್ತಡೇ ಪಪ್ಪಿ. ನಿಮ್ಮೆಲ್ಲಾ ಕೆಲಸಗಳಿಗೆ ಒಳ್ಳೆಯದಾಗಲಿ,' ಎಂದು ಬರೆದಿದ್ದಾರೆ.

 

ಪ್ರೇಮ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದು, ರಕ್ಷಿತಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಾಣಾ ಹಾಗೂ ರಚಿತಾ ರಾಮ್ ಜೋಡಿಯಾಗಿ ಮಿಂಚುತ್ತಿರುವ 'ಏಕ್‌ ಲವ್‌ ಯಾ' ಜೋಗಿ ಪ್ರೇಮ್ ಮುಂದಿನ ಪ್ರಾಜೆಕ್ಟ್‌. ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದ್ದು ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಈ ಚಿತ್ರವನ್ನು ರಕ್ಷಿತಾ ನಿರ್ಮಾಪಿಸುತ್ತಿದ್ದಾರೆ.

ಕೊರೋನಾ ಟೈಂ: ಮನೆಯಲ್ಲೇ ಕ್ರೇಜಿ ಕ್ವೀನ್‌ ಬರ್ತಡೇ ಆಚರಿಸಿದ 'ಜೋಗಿ'! 

ಪ್ರೇಮ್ ಮನವಿ:
ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟು ಆಚರಿಸಲಾಗದ ಕಾರಣ ಪ್ರೇಮ್ ಟ್ಟೀಟ್ ಮಾಡಿದ್ದಾರೆ. 'ನನ್ನ ಹುಟ್ಟು ಹಬ್ಬಕ್ಕೆ ಮಂಡ್ಯ ಮುತ್ತು ಅಭಿಮಾನಿ ಬಳಗದವರು ಒಂದು ಟ್ರಿಬ್ಯೂಟ್ ಸಾಂಗ್ ಮಾಡಿದ್ದಾರೆ. ಸಿನಿಮಾ ಮತ್ತು ಅಮ್ಮ ಎರಡೂ ನನ್ನ ಜೀವ ಅನ್ನೋದು ಈ ಒಂದು ಹಾಡಲ್ಲಿ ತೋರ್ಸ್ಕೊಟ್ಟಿದೀರಿ. ನಾನು ಬರಿಯಕ್ ಆಗ್ದೇ ಇರೋ ಎಷ್ಟೋ ಪದಗಳನ್ನ ನೀವ್ ಬರ್ದಿದ್ದೀರಿ. ಧನ್ಯವಾದ ಅಂತ ಹೇಳೋದು ಬಹಳ ಸಣ್ಣ ಪದ.
ತಂದೆ ತಾಯಿಯ ನಂತರ, ಅವರಷ್ಟೇ ಹೆಚ್ಚು ಪ್ರೀತಿ ತೋರೋ ನೀವುಗಳು ಅಭಿಮಾನದ ಅನ್ನದಾತರು,' ಎಂದ ಪ್ರೇಮ್ ಟ್ಟೀಟ್ ಮಾಡಿದ್ದಾರೆ.