ಈ ಚಿತ್ರವನ್ನು ಒಂದೇ ಜಾಗದಲ್ಲಿ 45 ದಿನಗಳ ಕಾಲ ಶೂಟ್‌ ಮಾಡುವ ಪ್ಲಾನ್‌ ಹಾಕಿಕೊಂಡಿದ್ದಾರೆ. ‘777 ಚಾರ್ಲಿ’, ‘ಸಪ್ತಸಾಗರದಾಚೆ ಎಲ್ಲೋ’ ಹಾಗೂ ‘ರಿಚ್ಚಿ’ ಚಿತ್ರಗಳನ್ನು ಮುಗಿಸಿಕೊಂಡ ಮೇಲೆ ‘ಮಿಡ್‌ವೈಟ್‌ ಮೋಕ್ಷ’ ಚಿತ್ರಕ್ಕೆ ಚಾಲನೆ ಕೊಡುವ ಯೋಜನೆ ಹಾಕಿಕೊಂಡಿದ್ದಾರೆ.

ಈಗಾಗಲೇ ಕತೆ ಬರೆದು ಮುಗಿಸಿದ್ದಾರೆ. ಸದ್ಯಕ್ಕೆ ಚಿತ್ರದ ಹೆಸರನ್ನು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿರುವ ರಕ್ಷಿತ್‌ ಶೆಟ್ಟಿ, ವಿಶೇಷವಾಗಿ ಈ ಚಿತ್ರವನ್ನು ಓಟಿಟಿಗಾಗಿಯೇ ಮಾಡಲು ಹೊರಟಿದ್ದಾರೆ.

ಗೋವಾದಲ್ಲಿ ರಕ್ಷಿತ್‌ ಶೆಟ್ಟಿ; ಉಳಿದವರು ಕಂಡಂತೆ ಅಭಿಮಾನಿಗಳೇ ರೆಡಿಯಾಗಿ, ರಿಚ್ಚಿ ಬರ್ತಿದಾನೆ

10 ಕಂತುಗಳ ವೆಬ್‌ ಸರಣಿ

ಈ ನಡುವೆ ರಕ್ಷಿತ್‌ ಶೆಟ್ಟಿ10 ಕಂತುಗಳ ಒಂದು ವೆಬ್‌ ಸರಣಿಗೂ ಪ್ಲಾನ್‌ ಮಾಡಿಕೊಂಡಿದ್ದಾರೆ. ಇದಕ್ಕೆ ‘ಏಕಂ’ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ಯಾವ ಓಟಿಟಿಗೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

"