ಕರ್ನಾಟಕ ರಾಜ್ಯ ಸರ್ಕಾರ ಆಯೋಜಿಸಿದ್ದ 'ಮಾಸ್ಕ್‌ ದಿನ'ವಾದ ಗುರುವಾರದಂದು ಸಾರ್ವಜನಿಕರು ಹಾಗೂ ಸೆಲೆಬ್ರಿಟಿಗಳು ಮಾಸ್ಕ್‌ ಧರಿಸುವ ಮೂಲಕ  ಜಾಗೃತಿ ಮೂಡಿಸಿದರು. ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ವಿತ್ ಸ್ಟಾರ್ ಕಿಡ್ ಐರಾ ಪಾಲ್ಗೊಂಡಿದ್ದಾರೆ.

18 ತಿಂಗಳು ಐರಾ ಬೇಬಿಗೆ ರಾಧಿಕಾ ಕೊಟ್ಟ 'Yellow' ಸರ್ಪ್ರೈಸ್‌; ಏನಿದು?

ರಾಧಿಕಾ ಫೋಟೋ:
ಮಾಸ್ಕ್ ದಿನದ ಪ್ರಯುಕ್ತ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಮಗಳೊಂದಿಗೆ ಮಾಸ್ಕ್ ಧರಿಸಿ, ಫೋಟೋ ಶೇರ್ ಮಾಡಿದ್ದಾರೆ. 'ನಮ್ಮ ಹೋರಾಟ ಇನ್ನೂ ಅಂತ್ಯಗೊಂಡಿಲ್ಲ, ಈ ಕಷ್ಟದ ಕಾಲವನ್ನು ನಾವು ಸುಲಭವಾಗಿ ಎದುರಿಸಬಹುದು. ಅಲ್ಲೀವರೆಗೂ ಮನೆಯಿಂದ ಹೊರಡುವ ಮುನ್ನ ಮಾಸ್ಕ್‌ ಧರಿಸಿ ಹಾಗೂ ದಯವಿಟ್ಟು ಸೋಷಿಯಲ್ ಡಿಸ್ಟೆನ್ಸ್‌ ಫಾಲೋ ಮಾಡಿ. ಜಾಗೃತರಾಗಿರಿ ಹಾಗೂ ಖುಷಿಯಾಗಿರಿ' ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

 

ನಟಿ ರಾಧಿಕಾ ಪಂಡಿತ್ ಮಾಡಿರುವ ಮನವಿಗೆ ಸಾಕಷ್ಟು ಅಭಿಮಾನಿಗಳು ಸ್ಪಂದಿಸಿದ್ದಾರೆ ಹಾಗೂ ವಿಂಟರ್‌ ವೇರ್‌ನಲ್ಲಿ, ಮಾಸ್ಕ್‌ನೊಂದಿಗಿರುವ ಐರಾಳನ್ನು ನೋಡಿ ಫಿದಾ ಆಗಿದ್ದಾರೆ. 

ವರ್ಷದ ಹಿಂದೆ ರಾಧಿಕಾ ಪೋಟೋಗೆ ಚಿರು ಮಾಡಿದ್ದ ಕಮೆಂಟ್ ವೈರಲ್ 

ಮಕ್ಕಳ ಬಗ್ಗೆ ಅಪ್ಡೇಟ್:
ಲಾಕ್‌ಡೌನ್‌ ಪ್ರಾರಂಭದಿಂದಲ್ಲೂ ಮಕ್ಕಳ ಜೊತೆಯಲ್ಲಿ ಕಾಲ ಕಳೆಯುತ್ತಿರುವ ರಾಕಿಂಗ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡುತ್ತಲೇ ಇದ್ದಾರೆ. ಲಾಕ್‌ಡೌನ್‌ ಪ್ರರಂಭದಲ್ಲಿ ತಮ್ಮ ಪುತ್ರನ ಫೋಟೋ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಗಳನ್ನು ನೀಡಿದ್ದಾರೆ. ಮಗಳ ಕೈಯಾರೆ ಊಟ ಮಾಡಿಸಿಕೊಳ್ಳುತ್ತಿರುವ ಯಶ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಮೆಚ್ಚುಗೆ ಪಡೆದುಕೊಂಡಿತ್ತು ಹಾಗೂ ಇತ್ತೀಚಿಗೆ ಐರಾ 18 ತಿಂಗಳುಗಳಿಗೆ ಕಾಲಿಟ್ಟ ಪ್ರಯುಕ್ತ ರಾಧಿಕಾ ಮನೆಯಲ್ಲಿ ಮ್ಯಾಂಗೋ ಚೀಸ್‌ ಕೇಕ್  ತಯಾರಿಸಿದ್ದರು. ಅಷ್ಟೇ ಅಲ್ಲದೆ ಜೂನಿಯರ್ Yಗೆ ತನ್ನ ತಾತನ ಶೈಲಿಯಲ್ಲಿ ಲಾಲಿ ಹಾಡು ಹೇಳುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡು ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದರು.

 

ಕೆಜಿಎಪ್2 ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಅಂತಿಮ ಹಂತದ ಶೂಟಿಂಗ್ ಹಾಗೂ ಇತರೆ ಕಾರ್ಯಗಳು ಬಾಕಿ ಇವೆ. ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಕೆಜಿಎಫ್1 ತನ್ನದೇ ಛಾಪು ಮೂಡಿಸಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಎರಡನೇ ಭಾಗ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 

 

ಕರ್ನಾಟಕದ ವಿವಿಧೆಡೆ ಜೂ.18ರಂದು ಮಾಸ್ಕ್ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟರ್ ಅನಿಲ್ ಕುಂಬ್ಳೆ, ನಟರಾದ ಪುನೀತ್ ರಾಜ್‌ಕುಮಾರ್, ರಾಗಿಣಿ ದ್ವಿವೇದಿ ಮುಂತಾದವರು ಪಾಲ್ಗೊಂಡು, ಆರೋಗ್ಯ ಕಾಪಾಡಲು ಮಾಸ್ಕ್ ಧರಿಸುವ ಸಂಬಂಧ ಜಾಗೃತಿ ಮೂಡಿಸಿದರು. ಅವರವರ ಸೋಷಿಯಲ್ ಮೀಡಿಯಾಗಳಲ್ಲೂ ಈ ಸಂಬಂಧ ವೀಡಿಯೋ ಪೋಸ್ಟ್ ಮಾಡಿದ್ದು, ಮಾಸ್ಕ್ ಮಹತ್ವವನ್ನು ಸಾರಿ ಸಾರಿ ಹೇಳಲಾಗಿದೆ. ಇದೀಗ ಈ ರೋಗಕ್ಕೆ ಹೆದರಿ ಮನೆಯಲ್ಲಿಯೇ ಕುಳಿತರೆ ಆಗೋಲ್ಲ. ರೋಗದ ವಿರುದ್ಧ ಹೋರಾಡಬೇಕು. ಸೂಕ್ತ ಮಾಸ್ಕ್ ಧರಿಸಿ, ಕೈಯನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳುತ್ತೀರಿ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದು, ಈ ವೀಡಿಯೋ ಸಹ ವೈರಲ್ ಆಗುತ್ತಿದೆ. 

ಮನೆಯಿಂದ ಹೊರ ಹೋಗುವ ಅನಿವಾರ್ಯತೆ ಬಂದಲ್ಲಿ ದಯವಿಟ್ಟು ಮಾಸ್ಕ್ ಹಾಗೂ ಸ್ಯಾನಿಟೈಸರ್ ಇಟ್ಟುಕೊಂಡು ಹೋಗುವುದನ್ನು ಮರೆಯಬೇಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂಬುವುದು ಮರೆಯಬೇಡಿ. ಇದು ಸುವರ್ಣನ್ಯೂಸ್.ಕಾಮ್ ಕಳಕಳಿಯ ಮನವಿ.