Asianet Suvarna News Asianet Suvarna News

ಫಾರ್ಮ್‌ಹೌಸ್‌ ಡೈರೀಸ್‌; ಪುತ್ರಿ ಐರಾ ಜೊತೆ ರಾಕಿಂಗ್ ಸ್ಟಾರ್ ಪೋಟೋ ವೈರಲ್!

ಹಾಸದಲ್ಲಿರುವ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ರಾಕಿಂಗ್ ಸ್ಟಾರ್ ಫ್ಯಾಮಿಲಿ. ಐರಾ ಏನ್ಮಾಡುತ್ತಿದ್ದಾಳೆ ನೋಡಿ.....
 

Kannada radhika pandit share Ayra and yash Hassan farmhouse diaries
Author
Bangalore, First Published Sep 12, 2020, 12:04 PM IST

ಇತ್ತೀಚಿಗೆ ಹಾಸನದ ತೋಟದ ಮನೆಯಲ್ಲಿ ಪುತ್ರ ಯಥರ್ವ್ ನಾಮಕರಣ ಮಾಡಿದ ರಾಕಿಂಗ್ ಸ್ಟಾರ್ ಯಶ್‌ ದಂಪತಿ, ಕೆಲವು ದಿನಗಳ ಕಾಲ ಪರಿಸರದ ನಡುವೆ ಸಮಯ ಕಳೆದಿದ್ದಾರೆ. 

ಯಶ್‌ ಮಗನ ಹೆಸರು 'YATHARV'ಯಶ್‌;ಹೆಸರಿನೊಳಗೆ ಹೆಸರಿದೆ!

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ರಾಧಿಕಾ ಪಂಡಿತ್, ಯಶ್ ಮತ್ತು ಐರಾ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 'Farmhouse Diaries' ಎಂದು ಬರೆದುಕೊಂಡಿದ್ದಾರೆ. ಯಶ್‌ ಮತ್ತು ಐರಾ ಇಬ್ಬರೂ ಹಸುವಿಗೆ ಬಾಳೆಹಣ್ಣು ತಿನ್ನಿಸುತ್ತಿದ್ದಾರೆ.  'ಹಸುವಿಗೆ ಹೆದರಬೇಡ ಐರಾ, ನಿನ್ನಹಿಂದೆ ಶಕ್ತಿಶಾಲಿ ವ್ಯಕ್ತಿ ಇದ್ದಾರೆ,' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಅದಲ್ಲರದೇ ಭಾರತಕ್ಕೆ ಕರಾಟೆಯಲ್ಲಿ ಗೋಲ್ಡ್‌ ಮೆಡಲ್‌ ತಂದ ಸಲೀಂ 'ಮುದ್ದಾಗಿದೆ' ಎಂದು ಬರೆದಿದ್ದಾರೆ. 

 

 
 
 
 
 
 
 
 
 
 
 
 
 

Farmhouse diaries 😊 #radhikapandit #nimmaRP

A post shared by Radhika Pandit (@iamradhikapandit) on Sep 10, 2020 at 11:08pm PDT

ಕೆಲವು ದಿನಗಳ ಹಿಂದೆ ಚಿತ್ರೀರಂಗ ನಟ, ನಟಿಯರು, ನಿರ್ದೇಶಕರು ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸ್ಯಾಂಡಲ್‌ವುಡ್‌ ಎದರಿಸುತ್ತಿರುವ ಸಂಕಷ್ಟದ ಬಗ್ಗೆ ಚರ್ಚೆಸಿದ್ದಾರೆ. ಈ ಸಮಯದಲ್ಲಿ ಯಶ್ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಡ್ರಗ್ಸ್ ವ್ಯಸನಿಗಳಿಗೆ ಜೀವನದ ಪಾಠ ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಜೂನಿಯರ್ ಯಶ್ ನಾಮಕರಣ ಸಂಭ್ರಮ: ಇಲ್ಲಿವೆ ಫೋಟೋಸ್

Kannada radhika pandit share Ayra and yash Hassan farmhouse diaries

ಸಿನಿಮಾರಂಗಕ್ಕೆ ಯಶೋಮಾರ್ಗ:
ಒಂದು ವಿಶ್ವವಿದ್ಯಾಲಯ ಕಟ್ಟಿ, ಇವನ್ನೆಲ್ಲ ಚೆನ್ನಾಗಿ ಕಲಿಸಿಕೊಟ್ಟರೆ ಚಿತ್ರರಂಗ ಯಾವ ಎತ್ತರಕ್ಕೆ ಹೋಗಬಹುದು ಎಂದೆಲ್ಲ ಯಶ್ ಯೋಚಿಸುತ್ತಿದ್ದು, ಚಿತ್ರರಂಗದ ಗಣ್ಯರು ಸಿಎಂ ಅವರನ್ನು ಭೇಟಿಯಾದಾಗ ತಮ್ಮ ಕನಸಿನ ಕಲ್ಪನೆಯ ಚಿತ್ರೋದ್ಯಮದ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದಾರೆ. ಆ ಮೂಲಕ ಕನ್ನಡ ಚಿತ್ರಾಭಿಮಾನಿಗಳಲ್ಲಿ ಯಶ್ ಅವರು ವಿಶೇಷ ಅಕ್ಕರೆ ಗಳಿಸುವಂತಾಗಿದೆ. 

"

ನಮ್ಮಲ್ಲಿ ಎಸ್‌ಜೆಪಿ ಇನ್‌ಸ್ಟಿಟ್ಯೂಟ್‌ ಅಂತ ಇದೆ. ಅಲ್ಲಿಂದ ಅತ್ಯುತ್ತಮವಾದ ಕೆಮರಾಮೆನ್‌ ಬಂದಿದ್ದಾರೆ. ಲೆಕ್ಕ ಹಾಕಿದರೆ ಏಳೆಂಟು ಮಂದಿ ಬಹಳ ಒಳ್ಳೆಯ ಛಾಯಾಗ್ರಾಹಕರು ಸಿಗುತ್ತಾರೆ. ಅದೇ ಥರ ಕಥಾ ವಿಭಾಗದಲ್ಲೂ, ನಿರ್ದೇಶನ ವಿಭಾಗದಲ್ಲೂ, ಎಡಿಟಿಂಗ್‌ ಮತ್ತಿತರ ವಿಭಾಗಗಳಲ್ಲೂ ಕಲಿತು ಬಂದ ತಂತ್ರಜ್ಞರು ಸಿಗುವಂತಾದರೆ ಚಿತ್ರರಂಗಕ್ಕೆ ಬಹಳ ಅನುಕೂಲವಾಗುತ್ತದೆ. ಒಬ್ಬ ನಿರ್ಮಾಪಕನಿಗೆ ಪ್ರತಿಭಾವಂತರು ಎಲ್ಲಿದ್ದಾರೆ, ಎಲ್ಲಿಂದ ಅವರನ್ನು ಹುಡುಕಿ ಹಾಕಿಕೊಳ್ಳಬೇಕು ಅನ್ನುವುದು ಗೊತ್ತಾಗುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಚಿತ್ರರಂಗಕ್ಕೆ ಇಂಥದ್ದನ್ನೆಲ್ಲ ಕಲಿಸುವ ಒಂದು ಡೆಡಿಕೇಟೆಡ್‌ ಸಂಸ್ಥೆ ಬೇಕೆನ್ನುವ ಅಭಿಪ್ರಾಯ ರಾಕಿಂಗ್ ಸ್ಟಾರ್ ಯಶ್ ಅವರದ್ದು.

ಚಿತ್ರರಂಗ ತನ್ನನ್ನು ತಾನು ಅಭಿವೃದ್ಧಿಪಡಿಸಿಕೊಳ್ಳುತ್ತಾ, ದಿನದಿಂದ ದಿನಕ್ಕೆ ಹೊಸದಾಗುತ್ತಾ ಹೋಗಬೇಕು. ಹೊಸಬರು ಬರುತ್ತಿರಬೇಕು. ಅವರಿಗೆ ಸರಿಯಾದ ಶಿಕ್ಷಣ ಸಿಕ್ಕು, ಚಿತ್ರರಂಗದಲ್ಲಿ ಅವರ ಕಾಂಟ್ರಿಬ್ಯೂಷನ್‌ ಸ್ಪಷ್ಟವಾಗಿ ಗೊತ್ತಾಗುತ್ತಾ ಹೋಗಬೇಕು, ಎನ್ನುತ್ತಾರೆ..

Follow Us:
Download App:
  • android
  • ios