ಸ್ಯಾಂಡಲ್‌ವುಡ್‌ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಕೈ ತುಂಬಾ ಆಫರ್‌‌ಗಳಿದ್ದು, ತುಂಬಾನೇ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ತೆರೆ ಕಂಡು, ಅದ್ಭುತ ಪ್ರತಿಕ್ರಿಯೆ ಪಡೆದ 'ಲವ್‌ ಮಾಕ್ಟೇಲ್‌' ನಂತರ ಕೃಷ್ಣ ಅವರ ಇಮೇಜ್‌ ಬದಲಾಗಿದೆ. ಟಾಪ್‌ ನಟರಿಗೆ ಈ ನಟ ಕಾಂಪಿಟೇಷನ್‌ ಕೊಡುವುದರಲ್ಲಿ ಅನುಮಾವಿಲ್ಲ.

ಕೃಷ್ಣ ಸಿನಿಮಾಗಳು:

'ಶ್ರೀ ಕೃಷ್ಣ . ಕಾಂ' ನಿರ್ದೇಶನ ಮಾಡುತ್ತಿರುವ ನಾಗಶೇಖರ್. ಚಿತ್ರಕ್ಕೆ ನಟನಾಗಿ ಡಾರ್ಲಿಂಗ್ ಕೃಷ್ಣರನ್ನು ಆಯ್ಕೆ ಮಾಡಿದ್ದಾರೆ. ನಾಯಕಿ ಪಾತ್ರ ತುಂಬಾನೇ ಗಂಭೀರವಾಗಿರುವ ಕಾರಣ ರಾಧಿಕಾ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ರಾಧಿಕಾ ಈ ಕಥೆ ಕೇಳಿ ನೋ ಎಂದು ಹೇಳೀದ್ದಾರಂತೆ. ಇದರ ಬಗ್ಗೆ ನಿರ್ದೇಶಕ ನಾಗಶೇಖರ್ ಸ್ಪಷ್ಟನೆ ನೀಡಿದ್ದಾರೆ.

ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾಗಿ ನಟಿ ಭಾವನಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿ ಲಾಯರ್ ಆಗಿದ್ದು, ತುಂಬಾನೇ ಗಂಭೀರ ಪಾತ್ರ ನಿರ್ವಹಿಸಬೇಕಾಗಿದೆ. ರಾಧಿಕಾ ಸಿನಿಮಾ ರೆಜೆಕ್ಟ್ ಮಾಡಿದ ಕಾರಣ ಭಾವನಾ ಅವರನ್ನು ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಮಾಡಲಾಗಿದೆ ಎಂದು ನಾಗಶೇಖರ್ ಹೇಳಿದ್ದಾರೆ.

ಕೊನೆಗೂ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ಸ್ಯಾಂಡಲ್‌ವುಡ್‌ 'ಸ್ವೀಟಿ'! 

ರಾಧಿಕಾ ಡೇಟ್ಸ್:

ಶ್ರೀಕೃಷ್ಣ.ಕಾಂ ಸಿನಿಮಾ ತುಂಬಾನೇ ಫನ್ನಿ ಸಬ್ಜೆಕ್ಟ್‌ ಹೊಂದಿದೆ. ಲೀವಿಂಗ್ ಟುಗೆದರ್‌ನಂಥ ವಿಷಯದ ಸುತ್ತ ಕಥೆ ಹೆಣೆಯಲಾಗಿದ್ದು. ತಮಾಷೆಯಿಂದ ಕಥೆ ತುಂಬಿರುತ್ತದೆ.  ರಾಧಿಕಾ ಅವರ ಡೇಟ್ಸ್‌ ಸಮಸ್ಯೆಯಿಂದಾಗಿ ಈ ಚಿತ್ರವನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಒಟ್ಟಾಗಿ 6 ಕಲಾವಿದರು ಅಭಿನಯಿಸುತ್ತಿರುವ ಸಿನಿಮಾ ಇದಾಗಿದ್ದು ಸೆಪ್ಟೆಂಬರ್‌ 1ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 

ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿಯ ಲವ್ ಮಾಕ್‌ಟೈಲ್ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಓಟಿಟಿಯಲ್ಲಂತೂ ಜನ ವಿಪರೀತ ಮೆಚ್ಚಿಕೊಂಡಿದ್ದಾರೆ.