ವರಮಹಾ ಲಕ್ಷ್ಮಿ ಹಬ್ಬದ ಪ್ರಯುಕ್ತ ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಮುಂದಿನ ಬಹು ನಿರೀಕ್ಷಿತ 'ಯುವರತ್ನ' ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಬರೆದಿರುವ ಸಾಲುಗಳು ಎಲ್ಲರ ಗಮನ ಸೆಳೆದಿದೆ.

ಪವರ್ ಸ್ಟಾರ್ ವರ್ಕೌಟ್‌ ನೋಡಿ ಪರಭಾಷಾ ಸ್ಟಾರ್‌ಗಳು ಫುಲ್ ಥ್ರಿಲ್..!

ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪವರ್ ಕಾಂಬಿನೇಷನ್‌ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾದ ಕೆಲವೊಂದು ಸನ್ನಿವೇಶ ಚಿತ್ರೀಕರಣ ಬಾಕಿ ಉಳಿದಿದೆ.

ಪೋಸ್ಟರ್‌:
ಪೋಸ್ಟರ್‌ ನೀಲಿ ಬಣ್ಣವಿದ್ದು, ಪುನೀತ್‌ ಸಿಗ್ನೇಚರ್‌ ಸ್ಟೆಪ್‌ನಲ್ಲಿ ಪೋಸ್ ನೀಡಿದ್ದಾರೆ. 'ನಾವ್ ಯಾವತ್ತೂ ಬೇರೆಯವರ Routeನಲ್ಲಿ Travel ಮಾಡಲ್ಲ! ನಮ್ದೇ ದಾರಿ- ನಮ್ದೇ ಸವಾರಿ...ಪಕ್ಕದಲ್ಲಿ Ferrari ಹೋದ್ರೂ ತಲೆ ಕೆಡಿಸಿಕೊಳ್ಳೋಲ್ಲ,' ಎಂದು ಬರೆಯಲಾಗಿದೆ.

 

ಇತ್ತೀಚಿಗೆ ಅನ್‌ಲಾಕ್‌ ನಂತರ ಪುನೀತ್‌ ಯುವರತ್ನ ಡಬ್ಬಿಂಗ್‌ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದರಲ್ಲೂ ಶಿವರಾಜ್‌ಕುಮಾರ್ ಅಭಿನಯದ ಓಂ ಚಿತ್ರದ 'ಐ ಲವ್ ಯೂ...' ಸಾಲುಗಳು ಕೇಳಿ ಅಭಿಮಾನಿಗಳು ಅಣ್ಣ-ತಮ್ಮ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ಆನಂತರ ಈ ಸಾಲುಗಳನ್ನು ಚಿತ್ರದ ಹಾಡೊಂದರಲ್ಲಿ ಬಳಸಲಾಗಿದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿತ್ತು.