Asianet Suvarna News

ಸಂತೆಯಲ್ಲಿ ಸೀರೆ ಬಿಚ್ಚಿದ ಮೇಲೆ ಮಾನ ಉಳಿಸಿಕೊಳ್ಳುವುದೇನಿದೆ?: ನಿರ್ಮಾಪಕ ಉಮಾಪತಿ

ಸುದ್ದಿ ಘೋಷ್ಠಿಯಲ್ಲಿ 25 ಕೋಟಿ ರೂ. ಹಗರಣಕ್ಕೆ ಟ್ವಿಸ್ಟ್‌ ಕೊಟ್ಟ ನಿರ್ಮಾಪಕ ಉಮಾಪತಿ. ಬೆಂಗಳೂರು ಪೊಲೀಸರಿಗಿಂತ ಮೈಸೂರು ಪೊಲೀಸರು ಸ್ಟ್ರಾಂಗ್‌ ಆ? 

Kannada Producer Umapathy clarifies 25 crore fraud case allegation vcs
Author
Bangalore, First Published Jul 13, 2021, 10:31 AM IST
  • Facebook
  • Twitter
  • Whatsapp

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹೆಸರಿನಲ್ಲಿ 25 ಕೋಟಿ ರೂ. ಪೋರ್ಜರಿ ಮಾಡುವ ಪ್ರಯತ್ನ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಿನ್ನೆ ಸುದ್ದಿ ಘೋಷ್ಠಿಯಲ್ಲಿ ಪ್ರಕರಣದ ಬಗ್ಗೆ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ಇಂದು ನಿರ್ಮಾಪಕ ಉಮಾಪತಿ ಸುದ್ದಿ ಘೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಮತ್ತಷ್ಟು ಕ್ಲಾರಿಟಿ ನೀಡಿದ್ದಾರೆ.
 
ನಿರ್ಮಾಪಕ ಉಮಾಪತಿ ಮತ್ತು ಅರುಣಾ ಕುಮಾರಿ ವಾಟ್ಸಪ್ ಚಾಟ್‌ ಎಲ್ಲೆಡೆ ವೈರಲ್ ಆಗುತ್ತಿವೆ. ಚಾಟ್‌ನಲ್ಲಿ ಉಮಾಪತಿ ಅವರು ಸ್ಯಾಂಡಲ್‌ವುಡ್ ಚಾಲೆಂಟಿಂಗ್ ಸ್ಟಾರ್ ದರ್ಶನ್ ಅವರ ಆಧಾರ್‌ಕಾರ್ಡ್‌ ಪೋಟೋ ಹಂಚಿ ಕೊಂಡಿದ್ದಾರೆ. ಅರುಣಾ ಕುಮಾರಿ ಕೈವಾದಡದ ಹಿಂದೆ ಉಮಾಪತಿ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

'ಪ್ರಾಪರ್ಟಿ ವಿಚಾರವಾಗಿ ಅರುಣಾ ಕುಮಾರಿ ನನ್ನ ಜೊತೆ ಏಪ್ರಿಲ್‌ನಿಂದ ಸಂಪರ್ಕದಲ್ಲಿದ್ದಾರೆ. ಮೇ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ನನ್ನನ್ನು ಸಂಪರ್ಕಿಸಿ, ದರ್ಶನ್ ಹಾಗೂ ನಿಮ್ಮ ವಿಚಾರದಲ್ಲಿ ಏನೋ ನಡೆಯುತ್ತಿದೆ ಎಂದು ಹೇಳಿದ್ದರು.  ನೀವು ಲೋನ್‌ಗೆ ಅಪ್ಲೈ ಮಾಡುತ್ತಿದ್ದೀರಾ? ಯಾರಿಗಾದರೂ ಸಿಹಿ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ನಾನು ಬುದ್ಧಿವಂತ ಅಲ್ಲ, ದಡ್ಡ. ಕ್ರಿಮಿನಲ್ ಆಗಿದ್ದರೆ ಕ್ರಿಮಿನಲ್‌ ರೀತಿಯಲ್ಲಿ ಚಿಂತೆ ಮಾಡುತ್ತಿದ್ದೆ. ಆದರೆ, ನಾನು ದರ್ಶನ್‌ ಅವರನ್ನು ಸಂಪರ್ಕಿಸಿದೆ. ಅವರು ನಿರ್ಮಾಪಕರೇ ಈ ವಿಚಾರವನ್ನು ಇಲ್ಲಿಗೇ ಬಿಡುವುದು ಬೇಡವಂದರು. ಈ ವಿಚಾರವಾಗಿ ಯಾರ ಮೇಲೂ ರಿಯಾಕ್ಟ್ ಮಾಡಬೇಡಿ ಅಂತ ದರ್ಶನ್ ಸರ್‌ನ ನಾನು ರಿಕ್ವೆಸ್ಟ್ ಮಾಡಿಕೊಳ್ಳುವೆ. ನಾವಿಬ್ಬರೂ ಯಾರನ್ನೂ ಕಳೆದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ,' ಎಂದು ಉಮಾಪತಿ ಮಾತನಾಡಿದ್ದಾರೆ.

ವೈರಲ್ ಆಗುತ್ತಿರುವ ಆಡಿಯೋ ಚಾಟ್‌ ಬಗ್ಗೆ ಸ್ಪಷ್ಟನೆ ನೀಡಿದ ರಾಬರ್ಟ್ ನಿರ್ಮಾಪಕರಾದ ಉಮಾಪತಿ, 'ಅರುಣಾ ಕುಮಾರಿ ಹಾಗೂ ನನ್ನ ಆಡಿಯೋ ಚಾಟ್ ವೈರಲ್ ಆಗುತ್ತಿದೆ. ಅದರಲ್ಲಿ ನಾನು ಏನೂ ತಪ್ಪಾಗಿ ಮಾತನಾಡಿಲ್ಲ. ಅಶ್ಲೀಲವಾಗಿ ಮೆಸೇಜ್ ಮಾಡಿಲ್ಲ, ಮಾತನಾಡಿಲ್ಲ. ಉಮಾಪತಿಯೇ ಆಧಾರ್‌ ಕಾರ್ಡ್‌ ಪ್ರತಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್‌ ಸರ್ ಕಾನ್‌ ಕಾಲ್‌ನಲ್ಲಿ ಪ್ರಶ್ನೆ ಮಾಡಿದ್ದಾಗ, ಆಕೆ ನಿಮ್ಮ ಕರೆಂಟ್ ಬಿಲ್ ಎಲ್ಲಾ ಇದೆ ಅಂತ ಹೇಳುತ್ತಾಳೆ. ನಾನು ಆ ಡಾಕ್ಯುಮೆಂಟ್ ಬಗ್ಗೆ ಹೆಚ್ಚಿನ ವಿಚಾರಣೆ ಆಗಬೇಕು. ಆಧಾರ್‌ಕಾರ್ಡ್ ನಂಬರ್ ಹಂಚಿಕೊಳ್ಳುವೆ. ನೀವು ಆ ಚಾಟ್‌ನ ಸರಿಯಾಗಿ ನೋಡಿ. ಎಲ್ಲಾ ರೀತಿಯಲ್ಲಿಯೂ ತನಿಖೆ ನಡೆಯುತ್ತಿರುವಾಗ ಈ ಹುಡುಗಿಯನ್ನು ಹೇಗೆ ಬಿಟ್ಟು ಕಳುಹಿಸಿದ್ದೀರಾ? ಸಂತೆಯಲ್ಲಿ ಸೀರೆ ಬಿಚ್ಚಿದ ಮೇಲೆ ಮಾನ ಉಳಿಸಿಕೊಳ್ಳುವುದು ಏನಿದೆ? ಆರೋಪ ಬಂದ ಮೇಲೆ ತನಿಖೆ ಮುಂದುವೆಸಲಿ. ಅಲ್ಲದೆ ಮೈಸೂರು ಪೊಲೀಸರು ಬೆಂಗಳೂರು ಪೊಲೀಸರಿಗಿಂತ ಸ್ಟ್ರಾಂಗ್ ಅಂತ ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಯಾಕೆ ತಪ್ಪು ನಂಬರ್ ಕೊಟ್ಟಿದ್ದಾರೆ. ಅದು ಪೊಲೀಸರು ಗಮನಕ್ಕೇಕೆ ಬಂದಿಲ್ಲ, ' ಎಂದು ಪ್ರಶ್ನಿಸಿದ್ದಾರೆ.

ಫೋರ್ಜರಿ ಬಗ್ಗೆ ದರ್ಶನ್‌ಗೆ ಮೊದಲೇ ಗೊತ್ತಿತ್ತು; ಕೇಸ್‌ಗೆ ಟ್ವಿಸ್ಟ್ ಕೊಟ್ಟ ನಿರ್ಮಾಪಕ ಉಮಾಪತಿ 

ನಟ ದರ್ಶನ್‌ ಅವರ ಆಸ್ತಿ ದಾಖಲಾತಿಗಳನ್ನು ನಕಲು ಮಾಡಿ 25 ಕೋಟಿ ರೂ. ಬ್ಯಾಂಕಿನ ಸಾಲಕ್ಕೆ ಅರ್ಜಿ ಸಲ್ಲಿಸಿ ವಂಚನೆಗೆ ಯತ್ನಿಸಿರುವ ಪ್ರಕರಣದ ಆರೋಪಿ ಅರುಣಕುಮಾರಿ ಮತ್ತು ಚಿತ್ರ ನಿರ್ಮಾಪಕ ಉಮಾಪತಿ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ವಾಯ್ಸ್ ಚಾಟ್ಸ್ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಸದ್ದು ಮಾಡುತ್ತಿವೆ. 

‘ನನ್ನ ವಾಟ್ಸಪ್‌ ಚಾಟ್‌, ವಾಟ್ಸಪ್‌ ಕಾಲ್‌ ಇತ್ಯಾದಿ ಎಲ್ಲದರ ಕುರಿತೂ ದರ್ಶನ್‌ ಅವರಿಗೆ ತಿಳಿದಿದೆ. ದರ್ಶನ್‌ ಅವರು ಸಮಚಿತ್ತದಿಂದ ವರ್ತಿಸುತ್ತಿದ್ದಾರೆ. ಈಗ ಎದ್ದಿರುವ ಅನೇಕ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕು. ನನ್ನ ಬಳಿ ಇರುವ ಮೂರು ವಿಚಾರಗಳನ್ನು ಹೇಳಿದರೆ ಅ ಸುದ್ದಿ ಮಂಡ್ಯ ರಾಜಕೀಯಕ್ಕಿಂತ ದೊಡ್ಡದಾಗುತ್ತದೆ,’ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಉಮಾಪತಿ ಅವರು ನಡೆಸಿದ ಸುದ್ಧಿಘೋಷ್ಠಿ ಸಾಕಷ್ಟು ಕುತೂಹಲ ಮೂಡಿಸಿತ್ತು.

ಒಟ್ಟಿನಲ್ಲಿ ಈ ವಿವಾದ ಸರಳವಾಗಿಲ್ಲ ಎಂಬುವುದು ಅರ್ಥವಾಗುತ್ತದೆ. ‘ಅರುಣಾ ಕುಮಾರಿ ಮಾರ್ಚ‌್‌ನಿಂದಲೇ ನನಗೆ ಪರಿಚಯ. ಹರಾಜಿಗೆ ಬಂದ ಜಮೀನು ಕೊಳ್ಳುವ ಪ್ರಕ್ರಿಯೆಯಲ್ಲಿದ್ದಾಗ ಆಕೆ ಸಾಮಾಜಿಕ ಜಾಲತಾಣ ಮೂಲಕ ಪರಿಚಯ ಆಗಿದ್ದರು. ನಂತರ ಒಂದು ಸಾಲಕ್ಕೆ ನಾನು ಮತ್ತು ದರ್ಶನ್‌ ಶೂರಿಟಿ ಹಾಕಿದ್ದೇವೆ, ಎಂಬ ಸಂಗತಿ ವಿಚಾರಿಸಲು ಬಂದಿದ್ದರು. ಅದನ್ನು ನಾನು ದರ್ಶನ್‌ ಅವರಿಗೆ ತಿಳಿಸಿದ್ದೆ. ಅವರೂ ಅರುಣಾ ಕುಮಾರಿ ಬಳಿ ಮಾತನಾಡಿದ್ದರು. ನಾನು ಆಕೆಯ ಬಳಿ ನಡೆಸಿರುವ ವಾಟ್ಸಪ್‌ ಚಾಟ್‌ನಲ್ಲಿ ಯಾವುದೇ ಅಶ್ಲೀಲತೆ ಇಲ್ಲ,’ ಎಂದೂ ಉಮಾಪತಿ ಹೇಳಿದ್ದರು. 

Follow Us:
Download App:
  • android
  • ios