Asianet Suvarna News Asianet Suvarna News

ದುಬಾರಿ ಸಿನಿಮಾ ಸದ್ಯಕ್ಕಿಲ್ಲ; ಹೊಸ ನಿರ್ದೇಶಕನ ಜತೆ ಧ್ರುವ ಚಿತ್ರ

ಪೊಗರು ಚಿತ್ರದ ನಂತರ ನಟ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ‘ದುಬಾರಿ’ ಎನ್ನಲಾಗುತ್ತಿತ್ತು. ಹೀಗಾಗಿ ಚಿತ್ರಕ್ಕೆ ಮುಹೂರ್ತ ಕೂಡ ನಡೆಸಲಾಯಿತು. ಶ್ರೀಲೀಲಾ ನಾಯಕಿ, ನಂದ ಕಿಶೋರ್ ನಿರ್ದೇಶನ, ಉದಯ್ ಕೆ ಮಹ್ತಾ ನಿರ್ಮಾಣದ ಸಿನಿಮಾ ಇದು. ಆದರೆ, ‘ದುಬಾರಿ’ ಸಿನಿಮಾ ಸದ್ಯಕ್ಕೆ ಸೆಟ್ಟೇರುತ್ತಿಲ್ಲ.

Kannada producer Uday clarifies rumours about Dhruva sarja Dubaari film vcs
Author
Bangalore, First Published Jun 14, 2021, 10:53 AM IST
  • Facebook
  • Twitter
  • Whatsapp

ಈ ಚಿತ್ರಕ್ಕೂ ಮೊದಲೇ ಮತ್ತೊಂದು ಸಿನಿಮಾ ಮೂಡಿ ಬರುತ್ತಿದೆ. ಆ ಚಿತ್ರಕ್ಕೆ ಹೊಸ ನಿರ್ದೇಶಕರು ಆಗಮಿಸಲಿದ್ದು, ಕತೆ ಆಯ್ಕೆ ಮುಕ್ತಾಯಗೊಂಡು ಚಿತ್ರಕಥೆ ನಡೆಯುತ್ತಿದೆ ಎಂಬುದು ಹೊಸ ಸುದ್ದಿ. ಇದನ್ನ ನಿರ್ಮಾಪಕ ಉದಯ್ ಮೆಹ್ತಾ ಅವರೇ ಹೇಳುತ್ತಾರೆ.

ದುಬಾರಿ ಸಿನಿಮಾ ಬಹುತೇಕ ಚಿತ್ರೀಕರಣ ವಿದೇಶಗಳಲ್ಲೇ ನಡೆಯಬೇಕಿದೆ. ಹೀಗಾಗಿ ಅದರ ಚಿತ್ರೀಕರಣಕ್ಕೆ ಈಗ ಸೂಕ್ತ ಸಮಯ ಅಲ್ಲ. ತಡವಾಗಿ ಈ ಸಿನಿಮಾ ಸೆಟ್ಟೇರುತ್ತದೆ. ಇದಕ್ಕೂ ಮೊದಲೇ ಒಂದು ಸಿನಿಮಾ ಶುರು ಮಾಡುತ್ತಿದ್ದು, ಇದರ ಚಿತ್ರಕತೆ ನಡೆಯುತ್ತಿದೆ. ದುಬಾರಿ ಸೆಟ್ಟೇರಿದ ಮೇಲೆ ನಂದ ಕಿಶೋರ್ ಅವರು ಜತೆಯಾಗಲಿದ್ದಾರೆ. - ಉದಯ್ ಕೆ ಮಹ್ತಾ, ನಿರ್ಮಾಪಕ

ಧ್ರುವ ಸರ್ಜಾ 'ದುಬಾರಿ' ಸಿನಿಮಾ ತಂಡದಿಂದ ಹೊರ ಬಂದ ನಂದಕಿಶೋರ್! 

ಅಲ್ಲದೆ ‘ದುಬಾರಿ’ ಸಿನಿಮಾ ನಿಂತಿದೆ. ನಂದ ಕಿಶೋರ್, ಧ್ರುವ ಸರ್ಜಾ ಅವರ ಚಿತ್ರದಿಂದ ಹೊರಗೆ ಬಂದಿದ್ದಾರೆ. ಹೀಗಾಗಿ ಆ ಸಿನಿಮಾ ಸೆಟ್ಟೇರಲ್ಲ ಎನ್ನುವ ಮಾತುಗಳೂ ಇವೆ. ಆದರೆ, ಇದಕ್ಕೆ ನಿರ್ಮಾಪಕರು ಹೇಳುವುದೇ ಬೇರೆ. ‘ನಮ್ಮ ದುಬಾರಿ ಸಿನಿಮಾ ನಿಂತಿಲ್ಲ. ನಂದ ಕಿಶೋರ್ ಅವರನ್ನು ನಾನು ಹೊರಗಿಟ್ಟಿಲ್ಲ. ಈಗಾಗಲೇ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ಮಾಡಿದ್ದೇವೆ. ಹೀಗಾಗಿ ಚಿತ್ರವನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಆದರೆ, ಅದು ಅದ್ದೂರಿ ಮೇಕಿಂಗ್ ಸಿನಿಮಾ. ವಿದೇಶಗಳಲ್ಲೇ ಹೆಚ್ಚಿನ ಪ್ರಮಾಣದ ಚಿತ್ರೀಕರಣ ನಡೆಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಈ ಕಾರಣಕ್ಕೆ ದುಬಾರಿ ಬದಲು ಬೇರೊಂದು ಕತೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದರ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಇದನ್ನು ಹೊಸ ನಿರ್ದೇಶಕನಿಂದ ಮಾಡಿಸುತ್ತೇವೆ. ಆ ಬಗ್ಗೆ ಸದ್ಯದಲ್ಲೇ ಹೇಳುತ್ತೇನೆ’ ಎನ್ನುತ್ತಾರೆ ಉದಯ್ ಮೆಹ್ತಾ ಅವರು.

Follow Us:
Download App:
  • android
  • ios