Asianet Suvarna News Asianet Suvarna News

ಕನ್ನಡ ಚಿತ್ರರಂಗ ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ನಿಧನ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಡರಾತ್ರಿ ಹಿರಿಯ ನಿರ್ಮಾಪಕ ಕೆ.ಸಿ.ಎಸ್‌ ಚಂದ್ರಶೇಖರ್(69)  ಕೊನೆ ಉಸಿರೆಳೆದಿದ್ದಾರೆ. 

Kannada Producer KCN Chandrashekar passes away at 69 vcs
Author
Bangalore, First Published Jun 14, 2021, 9:19 AM IST

ಬೆಂಗಳೂರು(ಜೂ.14) ಕನ್ನಡ ಚಿತ್ರರಂಗದ ನಿರ್ಮಾಪಕ ಕೆ.ಸಿ.ಎಸ್‌ ಚಂದ್ರಶೇಖರ್(69) ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. 

ಹುಲಿಯ ಹಾಲಿನ ಮೇವು, ಭಕ್ತ ಜ್ಞಾನದೇವ, ಧರ್ಮ ಯುದ್ಧ, ತಾಯಿ  ಸೇರಿದಂತೆ ಅನೇಕ ಸಿನಿಮಾಗಳನ್ನು ಚಂದ್ರಶೇಖರ್ ನಿರ್ಮಿಸಿದ್ದಾರೆ. ತಮ್ಮ ಬ್ಯಾನರ್ ಮೂಲಕ ತೆಲುಗು, ತಮಿಳು ಮತ್ತು ಬಂಗಾಲಿ  ಸಿನಿಮಾಗಳನ್ನು ನಿರ್ಮಿಸಿದ್ದರು. 

ಎರಡು ಬಾರಿ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಚಂದ್ರಶೇಖರ್ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಹಾಗೂ ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕರಾಗಿ ಮೂರು ಬಾರಿ ಆಯ್ಕೆ ಆಗಿದ್ದರು. ಸಹಾಯಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಚಂದ್ರಶೇಖರ್ ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡರು. ಚಂದ್ರಶೇಖರ್ ಅವರ ತಂದೆ ಕೆಸಿಎನ್‌ ಗೌಡ್ರು ಬಬ್ರುವಾಹನ, ದಾರಿ ತಪ್ಪಿದ ಮಗ, ಸತ್ಯ ಹರಿಶ್ಚಂದ್ರ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಸಾಹಿತ್ಯ ಲೋಕ ಅಗಲಿದ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ಇನ್ನು ನೆನಪು ಮಾತ್ರ 

ಕೆ.ಸಿ.ಎಸ್‌ ಚಂದ್ರಶೇಖರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಕೆ.ಸಿ.ಎನ್.ಚಂದ್ರು ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆ.ಸಿ.ಎನ್ ಚಂದ್ರು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತ, ಚೆಲುವಿನ ಚಿತ್ತಾರ ಖ್ಯಾತಿಯ ಸುರೇಶ್ ಚಂದ್ರ ಕೊರೋನಾಕ್ಕೆ ಬಲಿ 

ಅವರ ತಂದೆ ಕೆ.ಸಿ. ನಂಜುಂಡೇಗೌಡ ಅವರಿಂದ ಪ್ರಭಾವಿತರಾಗಿ  50ಕ್ಕೂ ಹೆಚ್ಚು ಜನಪ್ರಿಯ  ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದ ಅವರು  ‘ಹುಲಿಯ ಹಾಲಿನ ಮೇವು’, ‘ಬಬ್ರುವಾಹನ’ ಮುಂತಾದ ಅತ್ಯುತ್ತಮ  ಚಿತ್ರಗಳನ್ನು ನಿರ್ಮಿಸಿದ್ದರು.  ಮೂರು ಅವಧಿಗೆ  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದರು. ಸಿನಿಮಾಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದರು. 

 

ಅವರ ನಿಧನದಿಂದ ಅತ್ಯುತ್ತಮ ನಿರ್ಮಾಪಕರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಂತಾಗಿದೆ.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ

Follow Us:
Download App:
  • android
  • ios