ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ತುಂಬಾನೇ ರೊಮ್ಯಾಂಟಿಕ್. ಸಾರ್ವಜನಿಕವಾಗಿ ಎಲ್ಲಿಯೋ ಹೆಚ್ಚಾಗಿ ಕಾಣಿಸಿಕೊಳ್ಳಲು ಇಷ್ಟ ಪಡದ ಪ್ರೇರಣಾ, ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಪೋಸ್ಟ್, ಫೋಟೋ ಶೇರ್ ಮಾಡುತ್ತಿರುತ್ತಾರೆ.

ಅಬ್ಬಾ! ಧ್ರುವ ಸರ್ಜಾ ಯಾವುದಕ್ಕೆ ಹೆದರುತ್ತಾರೆ ಎಂದು ರಿವೀಲ್‌ ಮಾಡಿದ ಹರಿಪ್ರಿಯಾ!

ಬಾಲ್ಯದಿಂದಲೂ ಸ್ನೇಹಿತರಾಗಿ ನಂತರ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದುಕೊಂಡು ವೈವಾಹಿಕ ಬದುಕಿಗೆ ಕಾಲಿಟ್ಟ ಈ ಪ್ರಿನ್ಸ್ ಹಾಗೂ ಪ್ರಿನ್ಸೆಸ್‌ ಸ್ಟೋರಿ ಎಲ್ಲರಿಗೂ ಸ್ಫೂರ್ತಿ! ಇವತ್ತು ವಿಶ್ವ ಫ್ರೆಂಡ್‌‌ಶಿಪ್‌ ದಿನವಾದ ಕಾರಣ ಪ್ರೇರಣಾ ಇನ್‌ಸ್ಟಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿ, ಬರೆದುಕೊಂಡ ಸಾಲುಗಳು ತುಂಬಾನೇ ವೈರಲ್ ಆಗುತ್ತಿದೆ.

'ಫ್ರೆಂಡ್ ಅಥವಾ ಗಂಡ? ನಿಮಗೆ ಹೇಗೆ ಬೇಕೋ, ಹಾಗೆ ಕರೆಯಿರಿ. ಕೆಲವೊಮ್ಮೆ ನಾವು ಮದುವೆಯಾಗಿದ್ದೀವಿ ಅನ್ನೋದೇ ಮರೆತು ಹೋಗುತ್ತದೆ. ಧ್ರುವ ನಿಮಗೆ ಗೊತ್ತು ಅಲ್ವಾ ನಾನು ಏನು ಹೇಳುತ್ತಿರುವುದೆಂದು?' ಎಂದು ಬರೆದು, ತುಂಬಾ ವರ್ಷಗಳ ಹಳೆಯ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಪ್ಲೋಡ್‌ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಕಾಮೆಂಟ್ಸ್ ಹಾಗೂ ಲೈಕ್ಸ್ ಪಡೆದುಕೊಂಡಿವೆ.

 

ಕೆಲವು ದಿನಗಳ ಹಿಂದೆ ಧ್ರುವ ಮತ್ತು ಪ್ರೇರಣಾಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢವಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಯಾವುದೇ ಲಕ್ಷಣಗಳು ಇಲ್ಲದ ಕಾರಣ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಚಿಕಿತ್ಸೆ ಪಡೆದುಕೊಂಡು ಮರು ಪರೀಕ್ಷೆ ಮಾಡಿಸಿದ ನಂತರ ನೆಗೆಟಿವ್ ಎಂದು ತಿಳಿದು ಬಂದು ಸಂತೋಷದ ವಿಚಾರವನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದರು.

ಅಣ್ಣ ಚಿರು ಆಶೀರ್ವಾದ, ಕೊರೋನಾ ಗೆದ್ದ ಆಕ್ಷನ್ ಪ್ರಿನ್ಸ್

ಜುಲೈ 1ರಂದು ಚಿರುನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಪ್ರೇರಣಾ ಟಿಕ್‌ಟಾಕ್‌ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಆನಂತರ ಯಾವುದೇ ಪೋಸ್ಟ್‌ ಮಾಡದೇ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು. ಒಟ್ಟಿನಲ್ಲಿ ಸರ್ಜಾ ಮನೆಯಲ್ಲಿ ಮತ್ತೆ ಎಲ್ಲರೂ ಸಂತೋಷವಾಗಿರುವುದನ್ನು ನೋಡಿ ಅಭಿಮಾನಿಗಳು ಕಾಮೆಂಟ್‌ನಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.