ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೂರು ತಿಂಗಳು ಕಳೆದಿವೆ. ಇವರಿಬ್ಬರ ಪರಿಚಯವಾಗಿ ಆರು ತಿಂಗಳಾಗಿವೆ.  ಕಾಲ ಎಷ್ಟು ಬೇಗ ಕಳೆದು ಹೋಗುತ್ತಿದೆ, ಎಂದು ನಿಖಿಲ್‌ ತಮಗೆ ತಾವೇ ಪ್ರಶ್ನಿಸಿಕೊಂಡಿದ್ದಾರೆ.

ಪತ್ನಿ ಜೊತೆ 'ನೆಮ್ಮದಿ' ಪೋಟೋ ಶೇರ್ ಮಾಡಿಕೊಂಡ ನಿಖಿಲ್‌ ಕುಮಾರಸ್ವಾಮಿ!

ರೋಮ್ಯಾಂಟಿಕ್‌ ಫೋಟೋ:
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಪತ್ನಿ ರೇವತಿ ಜೊತೆ ಶೇರ್ ಮಾಡಿಕೊಂಡಿರುವ ಫೋಟೋ ಒಂದಕ್ಕಿಂತ ಒಂದು ಅದ್ಭುತವಾಗಿರುತ್ತವೆ. ಅದರಲ್ಲೂ ಇಂದು ಶೇರ್ ಮಾಡಿರುವ ಫೋಟೋ ಎಲ್ಲದಕ್ಕಿಂತಲೂ ಸೂಪರ್ ರೋಮ್ಯಾಂಟಿಕ್. ಅಲ್ಲದೇ ತುಸು ಬೇರೆ ರೀತಿ ಫೋಸ್ ನೀಡಿದ್ದು, ಅಭಿಮಾನಿಗಳಿಂದ ಮತ್ತಷ್ಟು ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದ್ದಾರೆ.

'ನಾವಿಬ್ಬರು ಪರಿಚಯವಾಗಿ 6 ತಿಂಗಳಾಗಿವೆ, ಮದುವೆಯಾಗಿ 3 ತಿಂಗಳು ಕಳೆದವು. ಅಫೀಶಿಯಲ್‌ ಆಗಿ Mr&Mrs ಆದ್ವಿ. ಕಾಲ ಎಷ್ಟು ಬೇಗ ಮಂದೆ ಹೋಗುತ್ತೆ. ನೀನು ತುಂಬಾ ವರ್ಷಗಳಿಂದ ಪರಿಚಯ ಎಂಬ ಭಾವನೆ ಹುಟ್ಟುತ್ತಿದೆ #SoulConnect' ಎಂದು ಬರೆದುಕೊಂಡಿದ್ದಾರೆ ನಿಖಿಲ್.

 

ಏಪ್ರಿಲ್ 17ರಂದು ಲಾಕ್‌ಡೌನ್‌ ಇದ್ದ ಕಾರಣ ನಿಖಿಲ್‌ ತಮ್ಮ ಬಿಡದಿ ಫಾರ್ಮ್‌ಹೌಸ್‌ನಲ್ಲಿ ಹಸೆಮಣೆ ಏರಿದ್ದರು. ಆಪ್ತರು, ಕುಟುಂಬಸ್ಥರು ಮಾತ್ರ ಈ ಸಂಭ್ರಮದಲ್ಲಿ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದ್ದರು. ಸರಳ ವಿವಾಹವಾದರೂ ರೇವತಿ ವಸ್ತ್ರ ಮತ್ತು ಮೇಕಪ್‌ ನೋಡುಗರನ್ನು ಆಕರ್ಷಿಸಿದ್ದು ಸುಳ್ಳಲ್ಲ.

ಮದುವೆಯಾದ ನಂತರ ತಮ್ಮ ಸಮಯವನ್ನು ಬಿಡದಿಯಲ್ಲಿಯೇ ಕಳೆಯುತ್ತಿದ್ದು, ಆಗಾಗ ಹಲವು ಫೋಟೋಗಳನ್ನು ನಿಖಿಲ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೀಗ ಮಡದಿ ಮತ್ತಷ್ಟು ಹತ್ತಿರವಾಗಿದ್ದಾಳೆ ಎನ್ನುವ ಮೂಲಕ ನಿಖಿಲ್ ಪತ್ನಿಯೊಂದಿಗೆ ಕಳೆಯುತ್ತಿರುವ ವಂಡರ್‌ಫುಲ್ ಕ್ಷಣಗಳ ಬಗ್ಗೆ ಮತ್ತಷ್ಟು ಮುಕ್ತವಾಗಿ ಹೇಳಿಕೊಂಡಿದ್ದಾರೆ.