Asianet Suvarna News Asianet Suvarna News

ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಭೇಟಿ ಮಾಡಿದ ನಿಖಿಲ್!

ರೈಡರ್ ಸಿನಿಮಾ ರಿಲೀಸ್‌ಗೂ ಮುನ್ನವೇ ರಾಘಣ್ಣ ಕುಟುಂಬದವರನ್ನು ಭೇಟಿ ಮಾಡಿದ ಯುವರಾಜ ನಿಖಿಲ್ ಕುಮಾರಸ್ವಾಮಿ. 

Kannada Nikhil Kumaraswamy meets Raghavendra Rajkumar family vcs
Author
Bangalore, First Published Oct 25, 2021, 10:46 AM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಮ್ಮ ಮುಂದಿನ ಸಿನಿಮಾ ರೈಡಲ್ (Rider) ಬಿಡುಗಡೆಗೆ ಕಾಯುತ್ತಿದ್ದಾರೆ. ಸಿನಿಮಾ ಸುದ್ದಿಗೋಷ್ಠಿ ಮತ್ತು ಪ್ರಚಾರದಲ್ಲಿ (Publicity) ಬ್ಯುಸಿಯಾಗಿರುವ ನಿಖಿಲ್, ಕೆಲವು ದಿನಗಳ ಹಿಂದೆ ಡಾ. ರಾಜ್‌ಕುಮಾರ್ (Dr.Rajkumar) ಅವರ ದ್ವಿತಿಯ ಪುತ್ರ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರ ನಿವಾಸಕ್ಕೆ ತೆರಳಿದ್ದಾರೆ. ಇಡೀ ಕುಟುಂಬದ ಜೊತೆ ಸಮಯ ಕಳೆದು ಬಂದಿರುವುದಾಗಿ, ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್ ಬರೆದುಕೊಂಡಿದ್ದಾರೆ. 

'ರಾಘಣ್ಣ, ಅಮ್ಮ, ಗುರು ಮತ್ತು ವಿನಯ್‌ ಅವರನ್ನು ಭೇಟಿ ಮಾಡಿ ಒಳ್ಳೆಯ ಸಮಯ ಕಳೆದಿರುವೆ.  ಇಡೀ ಕುಟುಂಬ ತೋರಿಸಿದ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು.  ನಾನು ಅಣ್ಣಾವ್ರ ಕುಟುಂಬದ ದೊಡ್ಡ ಅಭಿಮಾನಿ,' ಎಂದು ನಿಖಿಲ್ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋದಲ್ಲಿ ರಾಘಣ್ಣ ಅವರ ಪ್ರೀತಿಯ ನಾಯಿ ಫೋಟೋ ಬಾಂಬ್ (Photo Bomb) ಫೋಸ್ ನೀಡಿದೆ. 

ನವೆಂಬರ್‌ ತಿಂಗಳಲ್ಲಿ ನಿಖಿಲ್ ಕುಮಾರಸ್ವಾಮಿ 'ರೈಡರ್' ರಿಲೀಸ್!

ನಿಖಿಲ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಭೇಟಿ ಮಾಡಲು ಕಾರಣವೇನು ಎಂದು ತಿಳಿದು ಬಂದಿಲ್ಲ. ಆದರೆ ಇದರ ಹಿಂದೆ ಜೊಚೆಯಾಗಿ ಸಿನಿಮಾ ಮಾಡುವ ಉದ್ದೇಶ ಇದೆ ಎನ್ನಲಾಗಿದೆ. ವಿನಯ್ (Vinay) ಮತ್ತು ಗುರು (Guru) ಜೊತೆ ಸಿನಿಮಾ ಮಾಡುತ್ತಿದ್ದಾರಾ ಅಥವಾ ರಾಘವೇಂದ್ರ ರಾಜ್‌ಕುಮಾರ್ ಅವರೇ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಲುತ್ತಿರುವ ಕಾರಣ ನಿಖಿಲ್‌ಗೆ ಆನ್‌ಸ್ಕ್ರೀನ್ ತಂದೆ (Father) ಆಗಲಿದ್ದಾರಾ ಎಂದು ಅಭಿಮಾನಿಗಳು ಸಾಧ್ಯತೆಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ಮೈಸೂರು ಚಾಮುಂಡೇಶ್ವರಿ (Mysore Chamundeshwari) ಆಶೀರ್ವಾದ ಪಡೆದು ಬಂದಿರುವ ನಿಖಿಲ್ ನಡೆ ತುಕೂಹಲ ಹೆಚ್ಚಿಸುತ್ತಿದೆ. ತಂದೆಯಾಗಿ ಬಡ್ತಿ ಪಡೆದ ನಂತರ ಎಲ್ಲಿ ನೋಡಿದರೂ ನಿಖಿಲ್ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಸಖತ್ ಬ್ಯುಸಿಯಾಗಿದ್ದಾರೆ. ನಿಮ್ಮ ಕುಟುಂಬಕ್ಕೆ ವಾರಸುದಾರ ಬರಲಿದ್ದಾನೆ ಎಂದು ಹಲವು ತಿಂಗಳ ಹಿಂದೆ ವಿನಯ್ ಗುರೂಜಿ (Vinay Guruji) ಹೇಳಿದ್ದರು. ಇತ್ತೀಚೆಗೆ ನಿಖಿಲ್ ಮತ್ತು ತಂಡ ಗುರೂಜಿ ಅವರನ್ನು ಭೇಟಿ ಮಾಡಿರುವ ಫೋಟೋ ಕೂಡ ಹಂಚಿಕೊಂಡಿದ್ದಾರೆ.

 

Follow Us:
Download App:
  • android
  • ios