ಅತ್ತಿಗೆ ಜೊತೆ ಫೋಟೋ ಎಲ್ಲಿ?: ನಿಖಿಲ್ ಕುಮಾರಸ್ವಾಮಿ ಫ್ಯಾನ್ಸ್
ಸೋಷಿಯಲ್ ಮೀಡಿಯಾದಿಂದ ದೂರ ಉಳಿದ ರೇವತಿ ಮತ್ತು ನಿಖಿಲ್ ಕುಮಾರಸ್ವಾಮಿ? ಅಣ್ಣ-ಅತ್ತಿಗೆ ಫೋಟೋ ನೋಡದೇ ಅಭಿಮಾನಿಗಳು ಬೇಸರ.
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ರೇವತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದರು. ಪ್ರತಿ ಹಬ್ಬ, ಸಂಭ್ರಮದ ದಿನದಿಂದ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೀಗ ನಿಖಿಲ್ ಪ್ರಕೃತಿ ಹಾಗೂ ಪ್ರಾಣಿಗಳ ಜೊತೆ ಹೆಚ್ಚಾಗಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ರೇವತಿ ಜೊತೆ ಯಾವುದೇ ಫೋಟೋ ಶೇರ್ ಮಾಡಿ ಕೊಳ್ಳುತ್ತಿಲ್ಲ. ಮದುವೆ ನಿಶ್ಚಯ ಆದಾಗಿನಿಂದ ಸದಾ ರೇವತಿಯೊಂದಿಗೆ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದು ನಿಖಿಲ್, ಸಡನ್ ಆಗಿ ಸುಮ್ಮನಾಗಿದ್ದೇಕೆ ಎಂಬುವುದು ಫ್ಯಾನ್ಸ್ ಪ್ರಶ್ನೆ.
ಕುತೂಹಲ ಮೂಡಿಸಿದ ಎಚ್‌ಡಿಕೆ ಪುತ್ರ ನಿಖಿಲ್ ನಡೆ
ಕ್ಯಾಂಡಿಡ್ ಮೊಮೆಂಟ್ಸ್:
ಸೆಪ್ಟೆಂಬರ್ 19ರಂದು ಪತ್ನಿ ಜೊತೆ ಕ್ಯಾಂಡಿಡ್ ವಿಡಿಯೋ ಶೇರ್ ಮಾಡಿಕೊಂಡ ನಂತರ ನಿಖಿಲ್, ಹೆಚ್ಚಾಗಿ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾಹಿತಿ ಹಂಚಿ ಕೊಳ್ಳುತ್ತಿದ್ದಾರೆ. ಹಾಗೂ ಹಬ್ಬಗಳ ದಿನದಂದು ಪೋಸ್ಟರ್ ಮೂಲಕ ಶುಭ ಹಾರೈಸುತ್ತಿದ್ದಾರೆ. ಕುರಿ ಮರಿ ಹಾಗೂ ಶ್ರಮಜೀವಿ ರೈತರ ಜೊತೆ ತಮ್ಮ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿದ್ದು, ಇತ್ತೀಚೆಗೆ ಇದರ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು.
ಚಿತ್ರರಂಗದ ನಾಯಕತ್ವ ಕೊರತೆ ನೀಗಿಸಿದ ಶಿವಣ್ಣ: ನಿಖಿಲ್ ಕುಮಾರ್
ಅಭಿಮಾನಿಗಳ ಡಿಮ್ಯಾಂಡ್:
ಶಿವ-ಪಾರ್ವತಿ, ರಾಮ ಸೀತೆಗೆ ಈ ಜೋಡಿಯನ್ನು ಹೊಲಿಸುತ್ತಿದ್ದ ಅಭಿಮಾನಿಗಳು, ಅವರಿಬ್ಬರನ್ನು ಒಟ್ಟಾಗಿ ನೋಡದೆ ಬೇಸರ ವ್ಯಕ್ತ ಪಡಿಸಿದ್ದಾರೆ. ಅಣ್ಣ ಅತ್ತಿಗೆ ಜೊತೆ ಫೋಟೋ ಯಾಕೆ ಶೇರ್ ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವು ಫ್ಯಾನ್ಸ್ ಪೇಜ್‌ಗಳಲ್ಲಿ ಅವರದ್ದೇ ಹಳೇ ಫೋಟೋಗಳನ್ನು ಪದೇ ಪದೇ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಪತ್ನಿ ಕೈ ರುಚಿ ಸವಿದಿಲ್ಲ ಎಂದ ನಿಖಿಲ್ ಕುಮಾರಸ್ವಾಮಿಗೆ ರೇವತಿ ಮಾಡಿಕೊಟ್ಟೇಬಿಟ್ರು ಚಿಕನ್?
ರೈಡರ್‌ನಲ್ಲಿ ಬ್ಯುಸಿ?
ನಿಖಿಲ್ ತಮ್ಮ ಮುಂದಿನ ಸಿನಿಮಾ ರೈಡರ್ ಪೋಸ್ಟರ್ ಲುಕ್ ರಿಲೀಸ್ ಮಾಡಿದ ನಂತರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ಅನುಶ್ರೀ ಯುಟ್ಯೂಬ್ ಚಾನಲ್‌ನಲ್ಲಿ ಸಂದರ್ಶನ ನೀಡಿದ ನಂತರ ನಿಖಿಲ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಲ್ಲದೆ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷರಾಗಿದ್ದರೂ ಕರ್ನಾಟಕ ಉಪ ಚುನಾವಣೆ ಪ್ರಚಾರದಲ್ಲಿಯೂ ಭಾಗಿಯಾಗಿಲ್ಲ. ಶಿರಾದಲ್ಲಿ ಪ್ರಜ್ವಲ್ ರೇವಣ್ಣ ಪ್ರಚಾರದಲ್ಲಿ ಬ್ಯುಸಿ ಆಗಿರುವುದರಿಂದ ನಿಖಿಲ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆನ್ನಬಹುದು. ಆದರೆ, ಆರ್‌ಆರ್ ನಗರ ಜೆಡಿಎಸ್ ಅಭ್ಯರ್ಥಿ ಪರ ಚುನಾವಣೆ ಪ್ರಚಾರಕ್ಕೆ ಬರಲೇನು ಅಡ್ಡಿ ಎಂಬುವುದು ಕಾರ್ಯಕರ್ತರ ಪ್ರಶ್ನೆ. ಆದರೆ, ಅಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಿನಿ ನಿರ್ಮಾಪಕರೂ ಆಗಿರುವುದರಿಂದ ತಮ್ಮ ಮುಂದಿನ ಸಿನಿ ಭವಿಷ್ಯದ ಬಗ್ಗೆ ಯೋಚಿಸಿ, ನಿಖಿಲ್ ಸುಮ್ಮನಿರಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ರಾಜಕೀಯಕ್ಕಿಂತಲೂ ನಿಖಿಲ್ ಒಂದೆಡೆ ಸಿನಿಮಾ, ಮತ್ತೊಂದೆಡೆ ಕೃಷಿ ಕಡೆಗೆ ಹೆಚ್ಚಿನ ಒಲವು ತೋರುತ್ತಿರುವಂತೆ ಕಾಣುತ್ತಿರುವುದು ಸುಳ್ಳಲ್ಲ.