ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ (97) ಆರ್‌.ಜೀವರತ್ನ ಇನ್ನಿಲ್ಲ. 

ಕನ್ನಡ ಹಾಗೂ ತಮಿಳು ಚಿತ್ರರಂಗದ ಹಿರಿಯ ನಟ, ಸಂಗೀತ ನಿರ್ದೇಶಕ ಆರ್.ಜೀವರತ್ನ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು,ಚೆನ್ನೈನಲ್ಲಿ ಕೊನೆ ಉಸಿರೆಳೆದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಡಿಂಡಿಮ ಕವಿ' ಹಿರಿಯ ಕಲಾವಿದ ಶನಿ ಮಹದೇವಪ್ಪ ಇನ್ನಿಲ್ಲ 

97 ವರ್ಷದ ಜೀವರತ್ನ ಅವರನ್ನು ಅವರ ಅಭಿಮಾನಿಗಳೇ ಬಹಳ ವರ್ಷಗಳಿಂದ ಸಾಕುತ್ತಿದ್ದರು ಎನ್ನಲಾಗಿದೆ. ಅವರ ಅಪ್ಪಟ ಅಭಿಮಾನಿ ವೆಂಕಟರಾಮಯ್ಯ ಹೆಚ್ಚಾಗಿ ಕಾಳಜಿ ವಹಿಸಿ, ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೆ.

ಖ್ಯಾತ ನಿರ್ಮಾಪಕ ಕೆ. ಬಾಲು ನಿಧನ 

ತಮಿಳಿನ 'ದಾನಶೂರ ಕರ್ಣ' ಸಿನಿಮಾದಲ್ಲಿ ಜೀವರತ್ನ ಅಭಿನಯಿಸುವ ಮೂಲಕ ನಾಯಕ ನಟರಾಗಿದ್ದರು. ಆನಂತರ 1961ರಲ್ಲಿ 'ಚಕ್ರವರ್ತಿ ತಿರುಮಗಲ' ಮೂಲಕ ಸಂಗೀತ ನಿರ್ದೇಶಕರಾದರು. ಕನ್ನಡದ 'ಮನೆ ಕಟ್ಟಿ ನೋಡು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪರಿಚಯವಾದರು.

ಈ ಜೀವಕ್ಕೆ ಸದ್ಗತಿ ಸಿಗಲಿ