Asianet Suvarna News Asianet Suvarna News

'ಟಾಮ್‌ ಅಂಡ್‌ ಜೆರ್ರಿ' ಟ್ರೇಲರ್ ರಿಲೀಸ್: ನವೆಂಬರ್ 12ಕ್ಕೆ ಚಿತ್ರ ಬಿಡುಗಡೆ

ಇಂದಿನ ಜನರೇಶನ್‌ಗೆ ಇಷ್ಟವಾಗುವಂಥ ಸಿನಿಮಾ. ಇಲ್ಲಿ ಲವ್‌, ಎಮೋಶನ್ಸ್‌, ಬದುಕಿನ ರೀತಿ, ಸಂಬಂಧ, ಕನಸು ಹೀಗೆ ಹತ್ತಾರು ಸಂಗತಿಗಳನ್ನು ಹೇಳಿದ್ದೇವೆ. ಸಿನಿಮಾದಲ್ಲೊಂದು ಆಧ್ಯಾತ್ಮವಿದೆ. ಅದನ್ನು ಸಿನಿಮ್ಯಾಟಿಕ್‌ ಆಗಿಯೇ ಹೇಳಿದ್ದೇವೆ. 

Kannada Movie Tom And Jerry Trailer out Starrer Nischith Korodi
Author
Bangalore, First Published Nov 7, 2021, 3:28 PM IST
  • Facebook
  • Twitter
  • Whatsapp

ತನ್ನ ಟೈಟಲ್‌ ಮತ್ತು ಸಬ್ಜೆಕ್ಟ್ ಮೂಲಕ ಸಿನಿರಸಿಕರ ಗಮನ ಸೆಳೆದಿರುವ 'ಟಾಮ್‌ ಅಂಡ್‌ ಜೆರ್ರಿ' (Tom and Jerry) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. 'ಕೆಜಿಎಫ್' (KGF) ಚಿತ್ರದ ಮೂಲಕ ಸಂಭಾಷಣೆಕಾರರಾಗಿ ಗುರುತಿಸಿಕೊಂಡ ರಾಘವ್ ವಿನಯ್ ಶಿವಗಂಗೆ (Raaghav Vinay) ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಿತ್ತಾಟ, ಪ್ರೀತಿ ಇದೆಲ್ಲವೂ 'ಟಾಮ್‌ ಅಂಡ್‌ ಜೆರ್ರಿ'ಯಲ್ಲಿದೆಯಂತೆ. ಅದರ ಮೇಲೆಯೇ ಕಥೆ ಹೆಣೆಯಲಾಗಿದೆ. ಯುವ ಪೀಳಿಗೆಯನ್ನ ಸೆಳೆಯುವ ಇಬ್ಬರು ಸ್ನೇಹಿತರ ಕಥೆ. ಮುನಿಸು, ಕೋಪ, ಪ್ರೀತಿ, ಕಾಳಜಿ ಎಲ್ಲವೂ ತುಂಬಿರುವ ಕಥೆಯನ್ನ ಈಗಿನ ಪೀಳಿಗೆಗೆ ಇಷ್ಟವಾಗುವಂತೆ ರೆಡಿ ಮಾಡಿದ್ದೇವೆ ಎನ್ನುತ್ತದೆ ಚಿತ್ರತಂಡ.

ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್‌ನಡಿ ರಾಜು ಶೇರಿಗಾರ್ (Raju Sheregar) ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ವಿನಯ್ ಚಂದ್ರ ಸಾಥ್ ನೀಡಿದ್ದಾರೆ. ಈಗಾಗಲೇ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ನವೆಂಬರ್ 12ಕ್ಕೆ ತೆರೆ ಮೇಲೆ ಬರೋದಕ್ಕೆ ಸಜ್ಜಾಗಿದೆ. 'ಗಂಟು ಮೂಟೆ' (GantuMoote) ಸಿನಿಮಾದಲ್ಲಿ ನಟನೆಯಿಂದಲೇ ಎಲ್ಲರನ್ನು ಸೆಳೆದಿದ್ದ ನಿಶ್ಚಿತ್ ಕೊರೋಡಿ (Nischith Korodi) ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. 'ಜೋಡಿಹಕ್ಕಿ' (JodiHakki) ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ (Chaithra Rao) ನಿಶ್ಚಿತ್‌ಗೆ ಜೋಡಿಯಾಗಿದ್ದಾರೆ. ಸೂರ್ಯ ಶೇಖರ್ (Surya Shekar) ವಿಲನ್ ಆಗಿ ಅಬ್ಬರಿಸಿದ್ದು ಉಳಿದಂತೆ, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್‌ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ.

ಟಾಮ್‌ ಆಂಡ್‌ ಜೆರ್ರಿ ಚಿತ್ರಕ್ಕೆ ಹಾಡಿದ ಸಿದ್‌ ಶ್ರೀರಾಮ್‌

ಇದು ಇಂದಿನ ಜನರೇಶನ್‌ಗೆ ಇಷ್ಟವಾಗುವಂಥ ಸಿನಿಮಾ. ಇಲ್ಲಿ ಲವ್‌, ಎಮೋಶನ್ಸ್‌, ಬದುಕಿನ ರೀತಿ, ಸಂಬಂಧ, ಕನಸು ಹೀಗೆ ಹತ್ತಾರು ಸಂಗತಿಗಳನ್ನು ಹೇಳಿದ್ದೇವೆ. ಸಿನಿಮಾದಲ್ಲೊಂದು ಆಧ್ಯಾತ್ಮವಿದೆ. ಅದನ್ನು ಸಿನಿಮ್ಯಾಟಿಕ್‌ ಆಗಿಯೇ ಹೇಳಿದ್ದೇವೆ. ಸಿನಿಮಾದ ಟೈಟಲ್‌ 'ಟಾಮ್‌ ಅಂಡ್‌ ಜರ್ರಿ' ಅಂತಿದ್ದರೂ, ಇಲ್ಲೊಂದು ಗಂಭೀರ ವಿಷಯವಿದೆ. ಅದನ್ನ ಸ್ಕ್ರೀನ್‌ ಮೇಲೇ ನೋಡಬೇಕು ಎಂದು ಚಿತ್ರದ ನಿರ್ದೇಶಕ ರಾಘವ ವಿನಯ್‌ ಶಿವಗಂಗೆ ಹೇಳಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಸಂಕೇತ್ ಎಂವೈಎಸ್ ಕ್ಯಾಮೆರಾ ಕೈಚಳಕ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಹಾಡಲ್ಲೇ ಮೋಡಿ‌ ಮಾಡಿದ್ದ ‘ಟಾಮ್ ಅಂಡ್ ಜೆರ್ರಿ’ ನವೆಂಬರ್ 12ಕ್ಕೆ ರಿಲೀಸ್

ಇನ್ನು, ಈ ಹಿಂದೆ ಚಿತ್ರದ 'ಹಾಯಾಗಿದೆ ಎದೆಯೊಳಗೆ' (Haayagide) ಹಾಡು ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ (YouTube) ಭರ್ಜರಿ ವೀವ್ಸ್ ಪಡೆದಿತ್ತು. ಸಂಗೀತ ಆರಾಧಕರು ಹಾಡಿಗೆ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದರು. ಹಾಡಿಗೆ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು (Mathews Manu) ಅವರೇ ಸಾಹಿತ್ಯ ಬರೆದಿದ್ದು, ದಕ್ಷಿಣ ಭಾರತದ ಹೆಸರಾಂತ ಗಾಯಕ ಸಿದ್ ಶ್ರೀರಾಂ (Sid Sriram) ಹಾಡಿದ್ದಾರೆ. ವಿಶೇಷವಾಗಿ ಅವರು ಹಾಡಿರುವ ಮೊದಲ ಕನ್ನಡ ಹಾಡು. ಅಂದಹಾಗೆ 'ಕೆಜಿಎಫ್' ಪಾತ್ರದಿಂದಲೇ ಸುದ್ದಿಯಾಗಿದ್ದ ಸಂಪತ್ ಕುಮಾರ್ (Sampat Kumar) ಅವರು ಕೂಡ ಚಿತ್ರದಲ್ಲಿ ಒಬ್ಬ ಹುಚ್ಚನ ಪಾತ್ರ ಮಾಡಿದ್ದಾರೆ. ಅವರು ಟಾಮ್ ಆಂಡ್ ಜೆರ್ರಿ ಪಾತ್ರಗಳ‌ ನಡುವೆ ಬಂದು ದಿಢೀರನೆ ಆಡುವ ಮಾತುಗಳು ಟ್ರೇಲರ್‌ನಲ್ಲಿ ಕಾಣಬಹುದಾಗಿದೆ.
 

Follow Us:
Download App:
  • android
  • ios