ಸಿಂಪಲ್ ಸುನಿ ಎಂದು ಖ್ಯಾತರಾಗಲು ಈ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರವೇ ಕಾರಣ. ಮಾರ್ಚ್ 8, 2013 ರಂದು ಈ ಚಿತ್ರ ರಿಲೀಸಾಗಿತ್ತು.

ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಅಭಿನಯದ ಸೂಪರ್ ಹಿಟ್ ಚಿತ್ರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಈ ಸಿನಿಮಾ 2013 ರಲ್ಲಿ ಹೊಸದೊಂದು ಸಂಚಲನ ಮೂಡಿಸಿತ್ತು. ಡಬಲ್ ಮೀನಿಂಗ್ ಡೈಲಾಗ್ ಮೂಲಕ ಕ್ರಿಯೇಟಿವ್ ಟ್ರೆಂಡ್ ಹುಟ್ಟು ಹಾಕಿತ್ತು. 30 ರಿಂದ 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಇದಾಗಿದ್ದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

'ಯಜಮಾನ'ನಿಗೆ ಸಿಂಪಲ್ ಸುನಿ ನೀಡಿದ ಸಂದೇಶವಿದು!

ಇದರ ಬಗ್ಗೆ ಸ್ವತಃ ಸಿಂಪಲ್ ಸುನಿ ಟ್ಟೀಟ್ ಮಾಡಿದ್ದಾರೆ. ‘ಮಾರ್ಚ್ 8, 2013 ರಂದು ನನ್ನ ಜನ್ಮವಾಗಿತ್ತು. ಇಡೀ ಕರುನಾಡು ಬಿಗಿದಪ್ಪಿಕೊಂಡಿತ್ತು. ಇಂದಿಗೆ 6ನೇ ವರ್ಷದ ನೆನಪಿನ ರೂವಾರಿ ಈ ಸಿಂಪಲ್ಲಾಗ್ ಒಂದ್ Love story ’ ಎಂದು ಬರೆದುಕೊಂಡಿದ್ದಾರೆ.