Asianet Suvarna News Asianet Suvarna News

ಸಿನಿರಸಿಕರಿಂದ 'ಪ್ರೇಮಂ ಪೂಜ್ಯಂ' ದೃಶ್ಯ ಕಾವ್ಯ ಟ್ರೇಲರ್‌ಗೆ ಮೆಚ್ಚುಗೆ

'ಪ್ರೇಮಂ ಪೂಜ್ಯಂ' ಚಿತ್ರದ ಟ್ರೇಲರ್‌ಗೆ ನೋಡುಗರಿಂದ ಒಳ್ಳೆಯ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದು, ತಮ್ಮ ಜೀವನದಲ್ಲಿ ಆಗು-ಹೋಗುವ ಘಟನೆಗಳನ್ನು ಟ್ರೈಲರ್‌ನಲ್ಲಿ ವಿವರಿಸಿದ್ದಾರೆ. 

Kannada Movie Premam Poojyam hit theatres on November 12th
Author
Bangalore, First Published Nov 4, 2021, 6:44 PM IST
  • Facebook
  • Twitter
  • Whatsapp

'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರದ ಟ್ರೇಲರ್‌ಗೆ (Trailer) ನೋಡುಗರಿಂದ ಒಳ್ಳೆಯ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದು, ತಮ್ಮ ಜೀವನದಲ್ಲಿ ಆಗು-ಹೋಗುವ ಘಟನೆಗಳನ್ನು ಟ್ರೈಲರ್‌ನಲ್ಲಿ ವಿವರಿಸಿದ್ದಾರೆ. ಮೇಕಿಂಗ್‌, ಹೊಸತನದಿಂದ ಕೂಡಿದ ದೃಶ್ಯಗಳು, ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪ್ರೇಮ್‌ ಅವರನ್ನು ನೋಡಿ 'ಈ ಸಿನಿಮಾ ದೃಶ್ಯ ಕಾವ್ಯ' ಆಗಲಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಇತ್ತಿಚೆಗಷ್ಟೇ  ಸೆನ್ಸಾರ್ ಮಂಡಳಿಯವರು ಚಿತ್ರವನ್ನು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ.

ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಳ್ಳುತ್ತಿರುವ ಈ ಚಿತ್ರವನ್ನು ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ (Dr. Raghavendra BS) ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಸಹ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ.  ಇನ್ನು 'ಲೈಫ್ ಜತೆ ಒಂದ್ ಸೆಲ್ಫಿ' (Life Jothe Ond Selfie) ಸಿನಿಮಾದ ನಂತರ ಪ್ರೇಮ್ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ ಈ ಚಿತ್ರದ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ್ದಾರೆ. 

Master Anand ಕಮ್‌ಬ್ಯಾಕ್: ಪ್ರೀತಿಯಷ್ಟೇ ಸ್ನೇಹಾನೂ ಮುಖ್ಯ ಎಂದ ನಟ

ಇನ್ನು ಪ್ರೇಮ್ ದೀಪಾವಳಿ ಹಬ್ಬದ ಪ್ರಯುಕ್ತ ಇನ್‌ಸ್ಟಾಗ್ರಾಮ್‌ನಲ್ಲಿ 'ಪ್ರೇಮಂ ಪೂಜ್ಯಂ ತಂಡದ ವತಿಯಿಂದ ಹಾಗೂ ವೈಯಕ್ತಿಕವಾಗಿ ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು' ಎಂದು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ಈ  ಚಿತ್ರದ ಮತ್ತೊಂದು ವಿಶೇಷ ಪ್ರೇಮ್ ಹಾಗೂ  ಐಂದ್ರಿತಾ ರೇ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಮೊದಲು "ಅತಿರೂಪ' (Atiroopa) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ 'ಚೌಕ' (Chowka) ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ "ಪ್ರೇಮಂ ಪೂಜ್ಯಂ'ನಲ್ಲಿ ಮತ್ತೆ ಒಂದಾಗಿದ್ದಾರೆ. ಐಂದ್ರಿತಾ ರೈ ಮದುವೆ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ. ಅಲ್ಲದೇ ಮುಖ್ಯವಾಗಿ ತಾಯಿಯಾದ ಬಳಿಕ ಮಗಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದ, ನಟಿ ಅನುಪ್ರಭಾಕರ್ ಕೂಡಾ ಈ ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಕೊನೆಯಲ್ಲಿ ಇವರು ಎಂಟ್ರಿ ಕೊಡಲಿದ್ದಾರೆ. 
 


'ಪ್ರೇಮಂ ಪೂಜ್ಯಂ'  ಚಿತ್ರಕ್ಕೆ ಹರಿಹರನ್ , ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್ ಮತ್ತು ಅರ್ಮಾನ್ ಮಲಿಕ್ ಸೇರಿದಂತೆ ಹಲವು  ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ  ಒಂದು ಹಾಡಿಗೆ ದನಿಯಾಗಿದ್ದಾರೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿ ಡಾ.ರಾಜ್‌ಕುಮಾರ್ (Dr.Rajkumar) ಅವರ ಬಗ್ಗೆ ಹಾಡೊಂದಿದ್ದು ಅದನ್ನು ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹಾಡಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ಅವರೇ ಪ್ರೇಮ್‌ರನ್ನು ಕರೆದು ತಮ್ಮ ಸೆಲ್ಫಿ ತೆಗೆದುಕೊಂಡಿದ್ದು "I am really blessed, ನಿಜಕ್ಕೂ ನೀವು ತಂದೆಗೆ ತಕ್ಕ ಮಗ' ಎಂದಿದ್ದಾರೆ ಪ್ರೇಮ್. ದೇವರು ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಹಾಗೂ ಯಶಸ್ಸು ಕೊಟ್ಟು ಕಾಪಾಡಲಿ ಎಂದು ವೈಯಕ್ತಿಕವಾಗಿ ಹಾಗೂ 'ಪ್ರೇಮಂ ಪೂಜ್ಯಂ' ತಂಡದ ಪರವಾಗಿ ಪ್ರೇಮ್ ಪ್ರಾರ್ಥಿಸಿದ್ದಾರೆ.

'ಪ್ರೇಮಂ ಪೂಜ್ಯಂ' ಟೀಸರ್ ಮೆಚ್ಚಿದ ಚಿತ್ರರಂಗದ ಗಣ್ಯರು!

ಚಿತ್ರದಲ್ಲಿ ಪ್ರೇಮ್ ಎದುರಿಗೆ ನಾಯಕಿಯಾಗಿ ಶೃಂಗೇರಿ ಹುಡುಗಿ ಬೃಂದಾ ಆಚಾರ್ಯ (Brunda Acharya) ನಟಿಸಿದ್ದು,  ಐಂದ್ರಿತಾ ರೇ (Aindrita Ray), ಸುಮನ್ (Suman), ಮಾಸ್ಟರ್ ಆನಂದ್ (Master Anand), ಸಾಧು ಕೋಕಿಲಾ (Sadhu Kokila), ಅನು ಪ್ರಭಾಕರ್ (Anu Prabhakar, ತಪಸ್ವಿನಿ (Tapaswini) ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ (T.S.Nagabharana) ಸಹ ತೆರೆ ಹಂಚಿಕೊಂಡಿದ್ದಾರೆ. ನವೆಂಬರ್ 12ರಂದು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.
 

Follow Us:
Download App:
  • android
  • ios