ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ 6 ಪ್ಯಾಕ್ ಲುಕ್ ರಿವೀಲ್ ಆದ ಕೆಲ ತಿಂಗಳುಗಳ ಕಾಲ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚನ ಪ್ಯಾಕ್ ಹವಾ ಶುರು ಆಗಿತ್ತು! ಆದರೆ ಎಂದೂ ಎಲ್ಲೂ ನಾಯಕಿಯ ಬಗ್ಗೆ ಮಾತನಾಡದ ಚಿತ್ರತಂಡ ಈಗ ನಾಯಕಿಯ ವಿಚಾರ ತೆರೆದಿಟ್ಟಿದೆ.

 

’ಪೈಲ್ವಾನ್’ ಚಿತ್ರದ ನಾಯಕಿ ಆಕಾಂಕ್ಷ ಸಿಂಗ್ ಮೂಲತಃ ಜೈಪುರದ ಹುಡುಗಿ. ಈ ಹಿಂದೆ ಹಿಂದಿ ಧಾರವಾಹಿಯಲ್ಲಿ ನಟನೆ ಮಾಡಿದ್ದು ಸಿನಿ ಜರ್ನಿಯನ್ನು ಟಾಲಿವುಡ್ ಹಾಗೂ ಬಾಲಿವುಡ್ ಮೂಲಕ ಶುರುಮಾಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ಗೆ ಪೈಲ್ವಾನ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಆಕಾಂಕ್ಷ ಸಿಂಗ್ ನಟನೆಯಲ್ಲಿ ಮಾತ್ರವಲ್ಲ ರೈಟರ್ ಅಗಿಯೂ ಗುರುತಿಸಿಕೊಂಡಿದ್ದಾರೆ.