ಹೇಳಿದ ಕಥೆಯನ್ನು ಕೇಳಬಹುದು ‘ಒಂದ್ ಕಥೆ ಹೇಳ್ಲಾ’!

ನಾಲ್ಕು ಉಪಕತೆಗಳುಳ್ಳ ಒಂದು ಕತೆಯನ್ನು ಕುತೂಹಲಕಾರಿಯಾಗಿ ನೋಡಿಸಿಕೊಂಡು ಹೋಗುವಂತೆ ಹೇಳಿರುವುದೇ ಈ ಸಿನಿಮಾದ ಪ್ಲಸ್ಸು. ನಿರ್ದೇಶಕ ಗಿರೀಶ್‌ ಅವರಿಗೆ ಸಮರ್ಥವಾಗಿ ಕತೆ ಹೇಳುವ ಕಲೆ ಸಿದ್ಧಿಸಿದೆ ಅನ್ನುವುದಕ್ಕೆ ಸಾಕ್ಷಿ.

Kannada movie ondu katte hella film review

ರಾಜೇಶ್ ಶೆಟ್ಟಿ

ಉಪಕತೆಯಿಂದಲೇ ಚಿತ್ರ ಶುರು. ಒಂದು ಮನೆಗೆ ಯುವ ದಂಪತಿ(ರಮಾಕಾಂತ್‌ ಮತ್ತು ಸೌಮ್ಯಾ) ಬಾಡಿಗೆಗೆ ಬರುತ್ತದೆ. ಮನೆಯ ಸಂಪ್‌ ಕ್ಲೀನ್‌ ಮಾಡಲು ಸೌಮ್ಯಾ ಹೋಗಿದ್ದಾಗ ಆ ಸಂಪ್‌ನ ಬಾಗಿಲು ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ. ಅದೇ ವೇಳೆ ಸಂಪ್‌ನಲ್ಲಿ ನೀರು ತುಂಬಿಕೊಳ್ಳತೊಡಗುತ್ತದೆ. ಆ ಉದ್ವೇಗ, ಆತಂಕ, ಅಯ್ಯೋ ಅನ್ನಿಸುವ ಭಾವ ಇಲ್ಲಿನ ಎಲ್ಲಾ ಕತೆಗಳಲ್ಲೂ ಇವೆ ಅನ್ನುವುದು ಚಿತ್ರಕತೆ ಬರೆದವರ ಶಕ್ತಿ. ಚಿತ್ರದ ಗೆಲುವು.

ನಿರೂಪಕ ರಮಾಕಾಂತ್ ಈಗ ’ಒಂದ್ ಕಥೆ ಹೇಳ್ಲಾ’ ಆ್ಯಕ್ಟರ್..!

ಸಾಮಾನ್ಯವಾಗಿ ಬಹುತೇಕ ಹಾರರ್‌ ಕತೆಗಳಲ್ಲಿ ನಾಲ್ಕೈದು ಹುಡುಗ, ಹುಡುಗಿಯರು ಹೋಮ್‌ಸ್ಟೇಗೆ ಹೊರಟಿರುತ್ತಾರೆ. ಮುಂದಿನದು ಆಯಾಯ ಕತೆಗಳಿಗೆ ಬಿಟ್ಟಿದ್ದು. ಇಲ್ಲೂ ಅದೇ ಥರ ಐದು ಮಂದಿ ಹೊರಟಿದ್ದಾರೆ. ಹೋಮ್‌ಸ್ಟೇ ತಲುಪಿದ್ದಾರೆ. ಅಷ್ಟುಹೊತ್ತಿಗೆ ಮೂರು ಉಪಕತೆಗಳು ಮುಗಿದಿರುತ್ತವೆ. ಉಳಿದಿದ್ದು ಒಂದು ಮತ್ತೊಂದು. ಸ್ವಲ್ಪ ಪ್ರಿಡಿಕ್ಟೆಬಲ್‌ ಅನ್ನಿಸುವ ಹಾಗೆ, ಕೆಲವು ಕಡೆ ಕಾಮಿಡಿಗಳು ಸಿಲ್ಲಿ ಥರ ಕೇಳಿಸಿದ ಹಾಗೆ ಅನ್ನಿಸಿದರೂ ಕಡೆಯವರೆಗೂ ಒಂದೇ ಓಘವನ್ನು ಕಾಯ್ದುಕೊಂಡಿದೆ ಸಿನಿಮಾ. ಆರಂಭದಲ್ಲಿ ಬಂದ ಕೋಳಿಯನ್ನು ಕಡೆಯ ಕತೆಗೂ ಕನೆಕ್ಟ್ ಮಾಡಿದ್ದು ನಿರ್ದೇಶಕರ ಜಾಣ್ಮೆ ತೋರಿಸುತ್ತದೆ. ಈ ಸಿನಿಮಾದ ಪ್ಯಾಟರ್ನ್‌ ಹೊಸತು ಅನ್ನಿಸುವುದಿಲ್ಲ. ಆದರೆ ಕತೆ ಹೇಳುವವರು ಬೋರ್‌ ಮಾಡಿಲ್ಲ. ಕತೆ ಕೇಳಲು ಅಡ್ಡಿಯಿಲ್ಲ.

ಚಿತ್ರ: ಒಂದ್‌ ಕಥೆ ಹೇಳ್ಲಾ

ನಿರ್ದೇಶನ: ಗಿರೀಶ್‌ ಜಿ.

ತಾರಾಗಣ: ಕಾರ್ತಿಕ್‌ ರಾವ್‌, ರಮಾಕಾಂತ್‌, ಸೌಮ್ಯಾ, ಶಕ್ತಿ ಸೋಮಣ್ಣ, ಪ್ರತೀಕ್‌, ಪ್ರಿಯಾಂಕ, ತಾರಾ

ರೇಟಿಂಗ್‌ : 3

Latest Videos
Follow Us:
Download App:
  • android
  • ios