Asianet Suvarna News Asianet Suvarna News

ಶ್ವಾನಗಳಿಗೆ 'ನಾನು ಮತ್ತು ಗುಂಡ' ಚಿತ್ರ ಪ್ರದರ್ಶನ!

ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಇದು ಮೊದಲ ಪ್ರಯೋಗ ಎನಿಸುತ್ತದೆ. ಇಂಥ ಪ್ರಯೋಗಕ್ಕೆ ಸಾಕ್ಷಿ ಆಗಿರುವುದು ‘ನಾನು ಮತ್ತು ಗುಂಡ’ ಎನ್ನುವ ಸಿನಿಮಾ.

Kannada movie naanu matthu gunda premier show for Dogs
Author
Bangalore, First Published Jan 18, 2020, 10:04 AM IST
  • Facebook
  • Twitter
  • Whatsapp

ಶಿವರಾಜ್‌ ಕೆ ಆರ್‌ ಪೇಟೆ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಸಿಂಬಾ ಹೆಸರಿನ ನಾಯಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಹೀಗೆ ನಾಯಿ ಮುಖ್ಯ ಪಾತ್ರ ಮಾಡಿರುವುದು, ಹಾಗೆ ಪ್ರಾಣಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಹೇಳುವ ಕತೆಯಾಗಿರುವ ಕಾರಣ ಶ್ವಾನಗಳಿಗಾಗಿ ‘ನಾನು ಮತ್ತು ಗುಂಡ’ ಚಿತ್ರದ ಪ್ರಿಮಿಯರ್‌ ಶೋ ಆಯೋಜಿಸಲಾಗಿದೆ. ಡಾಗ್‌ ಶೋ ಹೆಸರಿನಲ್ಲಿ ಹೀಗಾಗಿ ಶ್ವಾನಗಳಿಗಾಗಿಯೇ ಸಿನಿಮಾ ಪ್ರದರ್ಶನ ಆಯೋಜಿಸುತ್ತಿರುವುದು ಇದೇ ಮೊದಲು ಎನಿಸುತ್ತದೆ.

‘ನಾನು ಮತ್ತು ಗುಂಡ’ನ ಜೊತೆ ಸಂಯುಕ್ತಾ ಹೊರನಾಡು

ಮನುಷ್ಯ ಮತ್ತು ಪ್ರಾಣಿ ಪ್ರೀತಿಯನ್ನು ಹೇಳುವ ಈ ಚಿತ್ರವನ್ನು ಶ್ವಾನಗಳಿಗಾಗಿಯೇ ವಿಶೇಷವಾದ ಪ್ರದರ್ಶನವನ್ನು ಆಯೋಜಿಸಲು ನಿರ್ಮಾಪಕರು ತಯಾರಿ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಟ್ರೇಲರ್‌ ಬಿಡುಗಡೆ ಮಾಡಿಕೊಳ್ಳುವ ಈ ಚಿತ್ರ ಮತ್ತೊಂದು ಸಾಹಸ ಮಾಡುವುದಕ್ಕೆ ಹೊರಟಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜ.23ರಂದು ಬೆಂಗಳೂರಿನ ಶಾರದ ಚಿತ್ರಮಂದಿರದಲ್ಲಿ ಶ್ವಾನಗಳಿಗಾಗಿ ಸಿನಿಮಾ ಪ್ರದರ್ಶನ ನಡೆಯಲಿದೆ.

ಮುಖ್ಯ ಪಾತ್ರ ಮಾಡಿರುವ ಈ ಸಿಂಬಾನಿಂದಲೇ ತನ್ನ ಪಾತ್ರಕ್ಕೆ ಡಬ್ಬಿಂಗ್‌ ಮಾಡಿಸಿದ್ದಾರೆ. ಪ್ರಾಣಿ ಪಾತ್ರ ಅದರಿಂದಲೇ ಡಬ್ಬಿಂಗ್‌ ಮಾಡಿಸಿರುವುದು ಇದೇ ಮೊದಲು ಎನಿಸುತ್ತದೆ. ತೆರೆ ಮೇಲೂ ಮೋಡಿ ಮಾಡುವ ಸಿಂಬಾ, ಡಬ್ಬಿಂಗ್‌ ಸ್ಟುಡಿಯೋದಲ್ಲಿ ಸದ್ದು ಮಾಡಿದೆ.

ನಾಯಿನಾ ದುರುಗುಟ್ಟಿ ನೋಡ್ತೀರಾ? ಹಾಗಿದ್ರೆ ಕಾದಿದೆ ನಿಮಗೆ ಗ್ರಹಚಾರ!

ಶ್ರೀನಿವಾಸ್‌ ತಮ್ಮಯ್ಯ ನಿರ್ದೇಶಿಸಿ, ರಘು ಹಾಸನ್‌ ನಿರ್ಮಾಣದ ಈ ಸಿನಿಮಾ ಇದೇ ಜ.24ರಂದು ತೆರೆ ಮೇಲೆ ಬರುತ್ತಿದೆ. ಸಂಯುಕ್ತಾ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಶ್ವಾನ ಮತ್ತು ಮನುಷ್ಯನ ನಡುವಿನ ಭಾವುಕತೆಯಾಗಿದೆ. ಹೀಗಾಗಿ ನಾಯಿ ಪಾತ್ರಕ್ಕೆ ಅಂದರಿಂದಲೇ ಡಬ್ಬಿಂಗ್‌ ಮಾಡಿಸಿದ್ದಾರಂತೆ. ಸಿಂಬಾ ಡಬ್ಬಿಂಗ್‌ ಮಾಡುತ್ತಿರುವ ದೃಶ್ಯ ಚಿತ್ರತಂಡ ರಿಲೀಸ್‌ ಮಾಡಿದೆ. ಈ ವಿಡಿಯೋ ಸೋಷಿಯಲ… ಮಿಡಿಯಾದಲ್ಲಿ ವೈರಲ… ಆಗುತ್ತಿದೆ. ಇದೊಂದು ವಿಡಿಯೋ ನಾನು ಮತ್ತು ಗುಂಡ ಚಿತ್ರದ ಮೇಲಿನ ಕುತೂಹಲವನ್ನ ಹೆಚ್ಚಿಸ್ತಿದೆ. ಶರತ್‌ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್‌ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

Follow Us:
Download App:
  • android
  • ios