‘ಮುನಿಯನ ಮಾದರಿ’ ಸಿನಿಮಾದ ಟ್ರೇಲರ್‌ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡವು. ಈ ಸಂದರ್ಭ ಮಾತನಾಡಿದ ನಿರ್ದೇಶಕ ಮಹೇಶ್‌ ಮರಿಯಪ್ಪ, ‘ಪಾವಗಡ ಬರಪೀಡಿತ ಪ್ರದೇಶ. ಅಲ್ಲಿನ ರೈತರ ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದ್ದೇವೆ. ಮಧುಗಿರಿ ತಾಲೂಕಿನ ನೀರ್ಕಲ್ಲಿನಲ್ಲಿ 28 ದಿನಗಳ ಕಾಲ ಚಿತ್ರೀಕರಣ ನಡೆದಿದೆ’ ಎಂದರು.

ಸೆಪ್ಟೆಂಬರ್‌ 10 ಚಿತ್ರದ ಟೀಸರ್‌ ಬಿಡುಗಡೆ; ಆತ್ಮಹತ್ಯೆ ಕುರಿತು ಅರಿವು ಮೂಡಿಸುವ ಚಿತ್ರ! 

ಮುಖ್ಯ ಪಾತ್ರದಲ್ಲಿ ನಟಿಸಿರುವ ನಾಗರಾಜ್‌ ಮಾತನಾಡಿ, ‘ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಈ ಚಿತ್ರದಲ್ಲಿ ನಟನೆಗೆ ಸಾಕಷ್ಟುಅವಕಾಶ ಸಿಕ್ಕಿದೆ. ಬರಪೀಡಿತ, ಅನಕ್ಷರಸ್ಥರೇ ಇರುವ ಹಳ್ಳಿಯಲ್ಲಿ ಒಬ್ಬ ರೈತ ಸ್ವತಂತ್ರವಾಗಿ ಬದುಕಲು ಹೊರಟಾಗ ಏನೆಲ್ಲ ಸಮಸ್ಯೆಗಳಾಗುತ್ತವೆ. ಎದುರಿಸಲಾಗದ ಆ ಸಮಸ್ಯೆಗಳು ಆತನನ್ನು ಹೇಗೆ ನೇಣಿನ ಕುಣಿಕೆಯೊಳಗೆ ನೂಕುತ್ತವೆ ಎಂಬುದನ್ನಿಲ್ಲಿ ಹೇಳಲಾಗಿದೆ’ ಎಂದರು. ರೈತನ ಮಗಳು ಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಿದ ಸ್ನೇಹಾ ಶರ್ಮಾ,‘ರೈತನ ಬವಣೆಗಳನ್ನು ವಿವರಿಸುವ ಈ ಚಿತ್ರ ಎಲ್ಲಾ ಕಾಲಕ್ಕೂ ಪ್ರಸ್ತುತ’ ಎಂದರು.

9 ಜನ ನಿರ್ದೇಶಕರು, 12 ಸಿನಿಮಾ; ಹೊಸ ಸಾಹಸಕ್ಕೆ ಜಯವಾಗಲಿ!

ನಿರ್ಮಾಪಕ ಕೆ. ಅಶೋಕ್‌ ಕುಮಾರ್‌, ಬಾಲ ನಟ ಮಾಸ್ಟರ್‌ ಹೇಮಂತ್‌, ನಿರ್ದೇಶಕ ನಾಗೇಂದ್ರ ಅರಸ್‌ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಎರಡು ಹಾಡುಗಳ ಬಿಡುಗಡೆಯಾಯಿತು.