Asianet Suvarna News Asianet Suvarna News

ಚಲನಚಿತ್ರ ಕಾರ್ಮಿಕ ಒಕ್ಕೂಟ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ರಾಜೀನಾಮೆ!

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಟ ಅಶೋಕ್, ಶನಿವಾರ ಒಕ್ಕೂಟದ ಚುನಾವಣೆ ಸಭೆ ನಡೆಯಲಿದ್ದು, ಹೊಸ ಅಧ್ಯಕ್ಷರ ಬಗ್ಗೆ ಚರ್ಚೆ.

Kannada movie labour organization Ashok reigns awaits for new election vcs
Author
Bangalore, First Published Jan 7, 2021, 12:48 PM IST
  • Facebook
  • Twitter
  • Whatsapp

2016ರಿಂದ ಚಲನಚಿತ್ರ ಕಾರ್ಮಿಕ ಒಕ್ಕೂಟ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಟ ಅಶೋಕ್ ವೈಯಕ್ತಿಕ ಕಾರಣಗಳನ್ನು ನೀಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 

ಸ್ಯಾಂಡಲ್‌ವುಡ್‌ ಬೆಚ್ಚಿಬೀಳಿಸುವ ಸುದ್ದಿ! ದರ್ಶನ್ ಚಿತ್ರದ ನಿರ್ಮಾಪಕನ ಹತ್ಯೆಗೆ ಸ್ಕೆಚ್! 

ರಾಜೀನಾಮೆ ಪತ್ರ:
'ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಸ್ಥಾಪಕ ಅಧ್ಯಕ್ಷನಾಗಿ, ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹದಿಂದ ಸುದೀರ್ಘ ಸಮಯದಿಂದ ಸೇವೆ ಸಲ್ಲಿಸಿದ್ದೇನೆ. ಇದೀಗ ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷನಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕೆಂದು ಕೋರುತ್ತೇನೆ. ನಿಮ್ಮೆಲ್ಲರ ಸ್ನೇಹ ಸೌಹಾರ್ದಗಳನ್ನು ಸದಾ ಕಾಲ ನೆನಯುತ್ತೇನೆ. ವಂದನೆಗಳು' ಎಂದು ಪತ್ರದಲ್ಲಿ ಬರೆದಿದ್ದಾರೆ.

Kannada movie labour organization Ashok reigns awaits for new election vcs

ಇದೇ ಶನಿವಾರ (ಜನವರಿ 9) ಒಕ್ಕೂಟದ ಗೌರವಾಧ್ಯಕ್ಷರಾಗಿರೋ ಸಾರಾ ಗೋವಿಂದ್ ನೇತೃತ್ವದಲ್ಲಿ ಚುನಾವಣೆ ಬಗ್ಗೆ ಸಭೆ ನಡೆಯಲಿದ್ದು, ಇನ್ನು ಮೂರು ತಿಂಗಳಲ್ಲಿ ಅಶೋಕ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯೋ ಸಾಧ್ಯತೆಗಳಿದೆ ಎನ್ನಲಾಗಿದೆ. 

ನಿರ್ದೇಶನ ನನ್ನ ಕನಸು, ನಟನೆ ನನ್ನ ಪ್ಯಾಷನ್‌: ರಾಘು ಶಿವಮೊಗ್ಗ 

1975ರಲ್ಲಿ 'ಹೆಣ್ಣು ಸಂಸಾರದ ಕಣ್ಣು' ಚಿತ್ರದ ಮೂಲಕ ಅಶೋಕ್ ಕನ್ನಡ ಚಿತ್ರರಂಗದ ಜರ್ನಿ ಆರಂಭಿಸಿದರು. 70-80ರ ದಶಕದಲ್ಲಿ ಅತಿ ಹೆಚ್ಚು ರೋಮ್ಯಾಂಟಿಕ್ ಫಿಲ್ಮ್ ಮಾಡಿರುವ ಅಶೋಕ್, ಎಲ್ಲಾ ಟಾಪ್ ನಟಿಯರ ಜೊತೆಯಬ ಅಭಿನಯಿಸಿದ್ದಾರೆ. ಇದರ ಜೊತೆಗೆ ಕಿರುತೆರೆಯಲ್ಲಿಯೂ ಅಶೋಕ್ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ.

Follow Us:
Download App:
  • android
  • ios