‘ಕೋಟಿಗೊಬ್ಬ 3’ ಚಿತ್ರತಂಡ ಚಿತ್ರದ ನಾಯಕ ಸುದೀಪ್‌ ಅವರ 25 ವರ್ಷಗಳ ಸಿನಿಮಾ ಪ್ರಯಾಣವನ್ನು ಸ್ಮರಿಸುವ ಕಾರ್ಯಕ್ರಮವನ್ನು ರೂಪಿಸಿದೆ. 

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಮಾ.15ರ ಸೋಮವಾರ ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ನಟ ಸುದೀಪ್‌ ಅವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ. ಚಿತ್ರತಂಡದ ಪರವಾಗಿ ಮುಖ್ಯಮಂತ್ರಿಗಳಿಗೂ ಸನ್ಮಾನ ನಡೆಯಲಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

ಬಂದೇ ಬಿಟ್ಟ ಖತರ್ನಾಕ್ ಕಿಲಾಡಿ ಕೋಟಿಗೊಬ್ಬ 

"

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಶಿವಕಾರ್ತಿಕ್‌ ನಿರ್ದೇಶನದ, ಸೂರಪ್ಪ ಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಚಿತ್ರದ ಹಾಡುಗಳಿಗೆ ಹಲವು ನೃತ್ಯ ತಂಡಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಸುದೀಪ್‌ ಅವರು ನಡೆದು ಬಂದ ಹಾದಿಯನ್ನು ಮೆಲುಕು ಹಾಕುವ ವಿಶೇಷ ವಿಡಿಯೋ ಸೇರಿದಂತೆ ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಂದು ಚಿತ್ರರಂಗ ಸಾಕ್ಷಿ ಆಗುತ್ತಿದೆ. ಚಿತ್ರತಂಡದಿಂದ ನಡೆಯುತ್ತಿರುವ ಕಿಚ್ಚನ ಈ ಬೆಳ್ಳಿ ಮಹೋತ್ಸವಕ್ಕೆ ನಟರಾದ ರವಿಚಂದ್ರನ್‌, ಶಿವರಾಜ್‌ಕುಮಾರ್‌ ಹಾಗೂ ರಮೇಶ್‌ ಅರವಿಂದ್‌ ಸೇರಿದಂತೆ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶಾಸಕ ಮುನಿರತ್ನ , ಪಬ್ಲಿಕ್‌ ಟಿವಿ ಸಿಇಓ ಎಚ್‌ಆರ್‌ ರಂಗನಾಥ್‌, ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿಯ ಪ್ರಧಾನ ಸಂಪಾದಕರಾದ ರವಿ ಹೆಗಡೆ ಆಗಮಿಸಿ ಸುದೀಪ್‌ ಅವರಿಗೆ ಶುಭ ಹಾರೈಸಲಿದ್ದಾರೆ.

ಸನ್ಮಾನ ಮಾಡೋಕೆ ಬಂದವ್ರು ಸುದೀಪ್ ವಾಚ್ ನೋಡಿಯೇ ಬಾಕಿ 

ಕಿಚ್ಚನ ಬೆಳ್ಳಿ ಸಂಭ್ರಮವನ್ನು ಆಚರಿಸುವ ಮೂಲಕ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಯ ಸಂಭ್ರಮಕ್ಕೆ ನಿರ್ಮಾಪಕ ಸೂರಪ್ಪ ಬಾಬು ಅವರು ಚಾಲನೆ ನೀಡುತ್ತಿದ್ದಾರೆ.