ಬೆಂಗಳೂರು (ಏ. 14): ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ’ಕವಲುದಾರಿ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ.  

ಈ ಕಾರಣಕ್ಕೆ ’ಕವಲುದಾರಿ’ ಅನಂತ್‌ನಾಗ್‌ಗೆ ಸ್ಪೆಷಲ್!

ಮಸಾಲೆ ದೋಸೆ, ಮೈಸೂರು ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಅನಂತ್ ನಾಗ್, ಪತ್ನಿ ಗಾಯತ್ರಿ, ನಿರ್ದೇಶಕ ಹೇಮಂತ್ ರಾವ್ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. 

ನಟ ರಿಷಿ ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

 

’ಕವಲುದಾರಿ ’ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ ಹೇಮಂತ್‌ರಾವ್ ಅವರ ಎರಡನೆಯ ಸಿನಿಮಾ ಇದು. 

ಅನಂತ್ ನಾಗ್ ಬಗ್ಗೆ ನೀವು ತಿಳಿಯಬೇಕಾದ ಇಂಟರೆಸ್ಟಿಂಗ್ ವಿಚಾರಗಳಿವು!

ಮಹಾನಗರದ ಪರಿಸರದಲ್ಲಿ ತಂದೆ-ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮೊದಲ ಸಿನಿಮಾದಲ್ಲಿ ಅನ್ವೇಷಿಸಿದ ಹೇಮಂತ್, ಕವಲುದಾರಿ ಚಿತ್ರದಲ್ಲಿ ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹೇಮಂತ್‌ರಾವ್ ಈ ಸಿನಿಮಾವನ್ನು ಸವಿವರವಾಗಿ ಕಟ್ಟಿಕೊಡುತ್ತಾರೆ.