ಕಲೆ ಮತ್ತು ಬದುಕು ಒಂದರಿಂದ ಒಂದು ಪ್ರಭಾವಿತವಾದದ್ದು. ಈ ಪ್ರಭಾವವನ್ನು ಸಿನಿಮಾ ಮೂಲಕ ಹೇಳುವ ಪ್ರಯತ್ನ ಜೀವ್ನಾನೇ ನಾಟ್ಕ ಸಾಮಿ ಚಿತ್ರ.
ನಿತ್ತಿಲೆ
ಒಂದು ಕಡೆ ಮಕ್ಕಳ ನಾಟಕ ರಿಯಾಲಿಟಿ ಶೋ, ಇನ್ನೊಂದು ಕಡೆ ಜೀವನ ನಾಟಕ ನಡೆಯುತ್ತಿರುತ್ತೆ. ಯಾವುದೋ ಹೊತ್ತಲ್ಲಿ ಜೀವನ ಮತ್ತು ನಾಟ್ಕಗಳ ಮುಖಾಮುಖಿ. ಆಗ ಘಟಿಸುವ ಬದಲಾವಣೆಯೇ ಚಿತ್ರದ ಮುಖ್ಯ ಅಂಶ.
ಇತ್ತೀಚೆಗೆ ರಿಯಾಲಿಟಿ ಶೋ ಹೆಸರಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಪೋಷಕರ ಒತ್ತಡ, ಹಿಂಸೆ, ಅದರ ಹಿಂದಿನ ಬ್ಯುಸಿನೆಸ್ ತಂತ್ರವನ್ನು ಹೇಳುವ ಪ್ರಯತ್ನವಿದೆ. ಅವಕಾಶಕ್ಕಾಗಿ ಒದ್ದಾಡುವ ನಿರ್ದೇಶಕನ ಸಂಕಟ, ಸವಾಲುಗಳಿವೆ. ದುರಂತ ಘಟಿಸಿದಾಗ ನಮ್ಮೆಲ್ಲ ಸಮಸ್ಯೆಗಳು ಹಿಂದೆ ಸರಿದು ಆ ದುರಂತವೇ ಮುಖ್ಯವಾಗುವ ಸ್ಥಿತಿ ಇದೆ. ಮೊದಲರ್ಧ ಮಧ್ಯಮ ವರ್ಗದ ನೀರಸ ಬದುಕಿನ ಚಿತ್ರಗಳನ್ನು ಕೊಡುವುದರಲ್ಲೇ ಕಳೆದುಹೋಗುತ್ತದೆ.
ಚಿತ್ರ ವಿಮರ್ಶೆ: ಶಾರ್ದೂಲ
ತಾರಾಗಣ : ಕಿರಣ್ ರಾಜ್, ಶ್ರೀ ಹರ್ಷ, ಅನಿಕಾ ರಮ್ಯಾ, ಪವಿತ್ರಾ ಕೋಟ್ಯಾನ್
ನಿರ್ದೇಶನ: ರಾಜು ಭಂಡಾರಿ ರಾಜವರ್ತ
ರೇಟಿಂಗ್: 2
ಎರಡನೇ ಭಾಗದಲ್ಲಿ ಮಕ್ಕಳು ಕಥೆಗೆ ಜೀವ ತುಂಬುತ್ತಾರೆ. ಅವರ ಆಟ, ತುಂಟಾಟಗಳು ರಂಜಿಸುತ್ತವೆ. ಕೊನೆಯಲ್ಲಿ ಮತ್ತದೇ ಹಳೆಯ ತಂತ್ರಕ್ಕೆ ನಿರ್ದೇಶಕರು ಶರಣಾಗಿ ಬಿಡುತ್ತಾರೆ. ನಿರೂಪಣೆಯಲ್ಲಿ ಚುರುಕು, ಸ್ಪಷ್ಟತೆ, ಕತೆಯಲ್ಲಿ ವೇಗ, ಮೇಕಿಂಗ್‌ನಲ್ಲಿ ವೃತ್ತಿಪರತೆಯನ್ನು ಈ ಚಿತ್ರ ಬೇಡುತ್ತದೆ. ಮಕ್ಕಳ ಅಭಿನಯವೇ ಚಿತ್ರದ ಹೈಲೈಟ್. ಉಳಿದ ಪಾತ್ರಗಳೇ ಹಾಗಿರುವ ಕಾರಣ ನಟನೆಯಲ್ಲಿ ಹೆಚ್ಚು ನಿರೀಕ್ಷಿಸಲಾಗದು.

