ಮೂವರು ಸ್ನೇಹಿತರ ತುಂಟಾಟ-ಜಗಳ-ಪ್ರೀತಿ ಕಥೆಗೆ 'ಗಾಳಿಪಟ' ಕಟ್ಟಿ ಹಾರಿಸಿದ ಮಾಸ್ಟರ್ ನಿರ್ದೇಶಕ ಯೋಗರಾಜ್‌ ಭಟ್‌ 'ಗಾಳಿಪಟ-2'ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಅರ್ಜುನ್ ಜನ್ಯಾ ಕಂಪೋಸಿಷನ್‌ನ ಇಂಟ್ರಡಕ್ಷನ್‌ ಸಾಂಗನ್ನು ಸದ್ಯ ಕುದುರೆಮುಖದಲ್ಲಿ ಶೂಟಿಂಗ್  ನಡೆಸಲಾಗುತ್ತಿದೆ.  ಈ ಹಿಂದೆ ರಿಷಿ- ಶರಣ್ ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು.  ಆ ನಂತರ  ಚಿತ್ರತಂಡವೇ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಿತ್ತು.

ಗಾಳಿಪಟ-2: ಶರಣ್‌-ರಿಷಿ ಔಟ್, ಗಣೇಶ್- ದಿಗಂತ್ ಇನ್‌!

ಚಿತ್ರದಲ್ಲಿ ಯಂಗ್ ಆಗಿ ಕಾಣಿಸಿಕೊಳ್ಳಬೇಕೆಂದು ನಿರ್ದೇಶಕ ಪವನ್ ಕುಮಾರ್ ಮುವಾಯ್ ಥಾಯ್ ಅಭ್ಯಾಸ ಮಾಡಿದ್ದಾರೆ. ಡಿಸೆಂಬರ್ 2 ರಿಂದ ಶೂಟಿಂಗ್ ಶುರುವಾಗಿದ್ದು ಜನವರಿ 8 ರ ವರೆಗೂ ನಡೆಯಲಿದೆ.

ಇನ್ನು ನಾಯಕಿರ ಪಾತ್ರದ ಆಯ್ಕೆ ಬಗ್ಗೆ ಗೊಂದಲದಲ್ಲಿದ್ದ ತಂಡ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ,  ಸಂಯುಕ್ತಾ ಮೆನನ್ ನಾಯಕಿಯರನ್ನು ಖಚಿತಪಡಿಸಿದೆ.

'ಗಾಳಿಪಟ 2'ಗೆ ನಾಯಕಿಯರು ಬದಲಾದರು!