'ಇಂಗ್ಲಿಷ್ ಮಂಜ' ಫಸ್ಟ್ಲುಕ್ ಬಿಡುಗಡೆ
ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ನಟನೆಯ ‘ಇಂಗ್ಲಿಷ್ ಮಂಜ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆರ್ಯ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು (ಜೂ. 26): ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ನಟನೆಯ ‘ಇಂಗ್ಲಿಷ್ ಮಂಜ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆರ್ಯ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕತ್ತಿಗೊಂದು ದಪ್ಪ ಚೈನು, ಕಣ್ಣಿಗೆ ಕೂಲಿಂಗ್ ಗ್ಲಾಸು ಧರಿಸಿಕೊಂಡು ನಿಂತಿರುವ ಪ್ರಮೋದ್ ಲುಕ್ ಗಮನ ಸೆಳೆಯುವಂತಿದೆ. ಗಿರೀಶ್ ಕೋಲಾರ ನಿರ್ಮಾಣದ ಈ ಸಿನಿಮಾ ತಂಡ ಶೀಘ್ರವೇ ಶೂಟಿಂಗ್ ಆರಂಭಿಸುವ ಆಲೋಚನೆಯಲ್ಲಿದೆ.