ಈ ಹೊತ್ತಿನಲ್ಲಿ ಹೊರ ದೇಶಗಳಲ್ಲೂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕಳೆದ ಎರಡು ವಾರಗಳ ಹಿಂದಷ್ಟೇ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಟನೆಯ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ಬಿಡುಗಡೆಯಾಗಿತ್ತು. ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಖುಷಿಯಲ್ಲಿದೆ ಚಿತ್ರತಂಡ.

'ಎಲ್ಲಿದ್ದೆ ಇಲ್ಲಿ ತನಕ' ಚಿತ್ರಕ್ಕೆ ದರ್ಶನ್‌ ಫಿದಾ!

ಕೌಟುಂಬಿಕ ಮನರಂಜನೆಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಚಿತ್ರ ಈಗ ಅನಿವಾಸಿ ಭಾರತೀಯರನ್ನೂ ತಲುಪುತ್ತಿದೆ. ಸಿಡ್ನಿ, ಮೆಲ್ಬೋರ್ನ್, ಪರ್ತ್, ನ್ಯೂಜಿಲೆಂಡ್ ಮೊದಲಾದ ದೇಶಗಳಲ್ಲಿ ಈಗಾಗಲೇ ಸಿನಿಮಾ ಬಿಡುಗಡೆಯಾಗಿದೆ. ಮುಂದಿನ ವಾರದಿಂದ ಯುಎಸ್, ಆಸ್ಟ್ರೇಲಿಯಾ, ಲಂಡನ್ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆಯಂತೆ. ‘ಸೃಜನ್ ಕಾಮಿಡಿಯನ್ನು ಅಲ್ಲಿನ ಕನ್ನಡಿಗರು ಇಷ್ಟಪಡುತ್ತಾರೆ ಎಂಬ ಉದ್ದೇಶದಿಂದ ಆದಷ್ಟು ಬೇಗ ಎಲ್ಲೆಡೆ ರೀಚ್ ಮಾಡುವ ಉದ್ದೇಶ ಇದೆ’ ಎಂಬುದು ಚಿತ್ರದ ನಿರ್ದೇಶಕ ತೇಜಸ್ವಿ ಅನಿಸಿಕೆ.

ಚಿತ್ರ ವಿಮರ್ಶೆ: ಎಲ್ಲಿದ್ದೆ ಇಲ್ಲಿ ತನಕ

ರಾಜ್ಯದಲ್ಲಿ ಈ ವಾರ 25ನೇ= ದಿನಗಳನ್ನ ಪೂರೈಸಲಿದೆ. ಲೊಕೇಶ್ ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸೃಜನ್ ಜೋಡಿಯಾಗಿ ಹರಿಪ್ರಿಯಾ ನಟಿಸಿದ್ದಾರೆ.