ಮೊದಲ ಬಾರಿಗೆ ಅಭಿಷೇಕ್‌ ಜೈನ್‌ ನಿರ್ದೇಶನದ ಕಿರುತೆರೆ ನಟರಾದ ಆರ್ವಗೌಡ್ರು, ಅನುಷಾ ನಾಯಕ- ನಾಯಕಿಯಾಗಿ ನಟಿಸಿರುವ ಡಿಂಗ ಬಿ ಪಾಸಿಟಿವ್‌ ಚಿತ್ರವು ಸೊಗಸಾಗಿ ಮೂಡಿಬಂದಿದೆ. ಮೈಸೂರಿನ ಪ್ರೇಕ್ಷಕರ ಜತೆಗೆ ರಾಜ್ಯಾದ್ಯಂತ ಇರುವ ಸಿನಿ ಪ್ರೇಕ್ಷಕರು ಸಿನೆಮಾ ನೋಡಿ ಹುರಿದುಂಬಿಸುವಂತೆ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

TikTokನಲ್ಲಿ 'ಹ್ಯಾಂಡ್ಸ್‌ ಅಪ್' ಆಯ್ತು, ಈಗಾ 'ಡಿಂಗ' ಡ್ಯಾನ್ಸ್‌ ಫುಲ್ ವೈರಲ್!

ದೇಶದಲ್ಲೇ ಪ್ರಥಮ ಬಾರಿಗೆ ಪೂರ್ಣ ಸಿನಿಮಾವನ್ನು ಫೋನೋಗ್ರಫಿ ಟೆಕ್ನಾಲಜಿಯಿಂದ ಚಿತ್ರೀಕರಿಸಲಾಗಿದೆ. ಶುದ್ಧೋರಾಯ್‌ ಸಂಗೀತ ಸಂಯೋಜನೆ, ಶ್ರೀಕಾಂತ್‌ ಸಂಕಲನ, ವಿಜಯ್‌ ಈಶ್ವರ್‌, ಕಾಂತ ಕನ್ನಾಲೆ ಸಾಹಿತ್ಯ, ರಾಮನಾಥ್‌ ಗುಪ್ತ, ಸಿ. ಜಗದೀಶ್‌, ಜ್ಞಾನೇಶ್ವರಿ ಸುರೇಶ್‌, ಶಿವಪ್ರಕಾಶ್‌, ಎನ್‌. ಸುಜನಾ ಆನಂದ್‌, ಜಿ. ಕಿಶೋರ್‌ಕುಮಾರ್‌, ಸುರೇಶ್‌, ಎಚ್‌.ವಿ. ಜೆ.ಇ. ಶಿವಕುಮಾರ್‌ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದೆ. ಚಿತ್ರದ ಟೈಟಲ್‌ ಟ್ರಾಕ್‌ ಅನ್ನು ಅರ್ಜುನ್‌ ಜನ್ಯ ನಿರ್ದೇಶನದಲ್ಲಿ ಸಂಜೀವ್‌ ಹೆಗಡೆ, ಅನುರಾಧಾ ಭಟ್‌, ನವೀನ್‌ ಸಜ್ಜು ಹಾಡಿದ್ದಾರೆ ಎಂದರು. ನಾಯಕ ನಟ ಆರ್ವಗೌಡ್ರು, ನಾಯಕಿ ಅನುಷ ಇದ್ದರು.