ಸ್ಯಾಂಡಲ್‌ವುಡ್ ಬಾಕ್ಸ್‌ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ 'ಒಡೆಯ' ಚಿತ್ರ ಮೊದಲ ದಿನವೇ ಪ್ರೇಕ್ಷಕ ಮನ ಗೆದ್ದಿದೆ.  ಚಿತ್ರ ವೀಕ್ಷಿಸಿದ ಅಭಿಮಾನಿಗಳು ನಟಿ ಸನಾ ಅಭಿನಯಕ್ಕೆ ಪುಲ್ ಬೋಲ್ಡ್‌ ಆಗಿದ್ದಾರೆ. 

ದರ್ಶನ್ ಬಗ್ಗೆ ಈ ರೀತಿ ಹೇಳಿದ್ರಾ 'ಒಡೆಯ' ನಟಿ?

ದರ್ಶನ್ ತಾಯಿಯ ಶಿಫಾರಸ್ಸಿನ ಮೇರೆಗೆ ಸನಾಳನ್ನು ನಾಯಕಿಯಾಗಿ ಆಯ್ಕೆ ಮಾಡಿದ ಸಂತೋಷ್ ಪ್ರೊಡಕ್ಷನ್ ಚಿತ್ರತಂಡಕ್ಕೆ ಜೀವನವಿಡಿ ಋಣಿ ಎಂದು ಹೇಳಿದ್ದಾರೆ.  ಅಷ್ಟೇ ಅಲ್ಲದೇ ಫಸ್ಟ್ ಶೋ ವೀಕ್ಷಿಸಿದ ನಂತರ ಸನಾ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡುವಾಗ ಸಂತೋಷದಿಂದ ಕಣ್ಣೀರಿಟ್ಟಿದ್ದಾರೆ. 

ಇಂದು ದರ್ಶನೋತ್ಸವ;ಒಡೆಯ ಪಕ್ಕಾ ಕಮರ್ಷಿಯಲ್‌ ಸಿನಿಮಾ!

'ಜನರು ನೀಡುತ್ತಿರುವ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ. ಈ ಅನುಭವವನ್ನು ಹೇಗೆ ವಿವರಿಸಬೇಕೋ ತಿಳಿಯುತ್ತಿಲ್ಲ. ಚಿತ್ರತಂಡಕ್ಕೆ ನನ್ನಿಂದ ಏನಾದ್ರೂ ತಪ್ಪಾಗಿದ್ರೆ ಕ್ಷಮಿಸಿ. ನಾನು ಸಿನಿಮಾ ಮೂಲಕ ಎಲ್ಲರನ್ನು ರಂಜಿಸಲು ಪ್ರಾಮಾಣಿಕವಾಗಿ ಶ್ರಮ ಹಾಕುತ್ತೇನೆ' ಎಂದು ಮಾತನಾಡಿದ್ದಾರೆ.