ಮತ್ತೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ನಟರ ಸಿನಿಮಾಗೂ NFT ಮಾರುಕಟ್ಟೆ ಭಾಗ್ಯ ದೊರೆಯುತ್ತಿದೆ. ಸಿನಿಮಾ ರಿಲೀಸ್ ಗೂ ಮುನ್ನ ಇಂಥದ್ದೊಂದು ಕಾರ್ಯಕ್ಕೆ ಮುಂದಾಗಿದೆ ಎನ್.ಎಫ್.ಟಿ. ಯಾರು ಆ ಹೀರೋ..?
NFT ಹೀಗಂತ ಹೊಸ ಟ್ರೆಂಡ್ ಒಂದು ಸಿನಿಮಾ ರಂಗದಲ್ಲಿ ಶುರುವಾಗಿದೆ. ಸ್ಟಾರ್ ಹೀರೋಗಳು ನಟಿಸೋ ತಮ್ಮ ಸಿನಿಮಾದಲ್ಲಿ ಬಳಸಿದ ಬೈಕ್ ಕಾರು. ಗನ್ ಆ ಹೀರೋ ಪ್ರತಿಮೆ ಇತ್ಯಾದಿ ವಸ್ತುಗಳನ್ನ ಸೇಮ್ ಟು ಸೇಮ್ ಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ಬಿಡೋ ಪದ್ಧತಿ ಈಗ ಚಿತ್ರರಂಗದಲ್ಲಿ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಬಳಸಲಾದ ಬೈಕ್, ಯಶ್ ಪ್ರತಿಮೆ, ಗನ್ ಸೇರಿದಂತೆ ಹಲವು ವಸ್ತುಗಳನ್ನು ತದ್ರೂಪಿ ಮಾಡಿ, ಅವುಗಳನ್ನು ಎನ್.ಎಫ್.ಟಿ ಮೂಲಕ ಅಭಿಮಾನಿಗಳಿಗೆ ತಲುಪಿಸುವ ಕಾರ್ಯವನ್ನು ಎನ್.ಎಫ್.ಟಿ (NFT) ಮಾಡಿತ್ತು.
ಇದೀಗ ಮತ್ತೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ನಟನ ಸಿನಿಮಾಗೂ ಈ ಎನ್ಎಫ್ಟಿ ಗೆ ಎಂಟ್ರಿ ಕೊಡೋ ಸಮಯ ಬಂದಿದೆ. ಕೆಜಿಎಫ್ ಸಿನಿಮಾ ಬಿಡುಗಡೆ ಆದ ಮೇಲೆ ಆ ಸಿನಿಮಾದಲ್ಲಿ ಕ್ರೇಜ್ ಸೃಷ್ಟಿಸಿದ್ದ ವಸ್ತುಗಳು ಎನ್ಎಫ್ಟಿಗೆ ಬಂದಿದ್ವು. ಆದ್ರೆ ಈಗ ಸ್ಯಾಂಡಲ್ವುಡ್ನಿಂದ ಬರುತ್ತಿರೋ ಪ್ಯಾನ್ ಇಂಡಿಯಾ ಮಟ್ಟದ ಹೊಸ ಸಿನಿಮಾ ರಿಲೀಸ್ ಗೂ ಮುನ್ನ ಇಂಥದ್ದೊಂದು ಕಾರ್ಯಕ್ಕೆ ಮುಂದಾಗಿದೆ.
ಕಿಚ್ಚನ ಹುಚ್ಚ ಸಿನಿಮಾಗೆ 21ರ ಹರೆಯ, ಅಂದೂ, ಇಂದೂ ಫೇಮಸ್ ಈ ಸೀನ್!
ಬಾಲಿವುಡ್ ನಲ್ಲಿ ಸಾಕಷ್ಟು ಫೇಮಸ್ ಆಗಿರುವ ಈ ಮಾರುಕಟ್ಟೆಗೆ ಸೆಲೆಬ್ರಿಟಿಗಳು ಈಗಾಗಲೇ ಒಬ್ಬೊಬ್ಬರಾಗಿಯೇ NFT ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಕಮಲ್ ಹಾಸನ್, ಅಮಿತಾಭ್ ಬಚ್ಚನ್, ಸನ್ನಿ ಲಿಯೋನ್ ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಇದೀಗ ಸೌತ್ ಇಂಡಸ್ಟ್ರೀಯ ಸೂಪರ್ ಸ್ಟಾರ್ ಒಬ್ರು NFT ವಲಯಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದ ಬಿಗೆಸ್ಟ್ ಸಿನಿಮಾವೊಂದು ಶೀರ್ಘದಲ್ಲಿಯೇ NFT ಮಾರುಕಟ್ಟೆಗೆ ಎಂಟ್ರಿ ಕೊಡಲಿದೆಯಂತೆ.
ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT
ಎನ್ಎಫ್ಟಿ ಮಾರುಕಟ್ಟೆ ಬರೀ ಹಾಲಿವುಡ್ ಸಿನಿಮಾಗಳಿಗೆ ಸೀಮಿತವಾಗಿತ್ತು. ಹಾಲಿವುಡ್ನ ಮಾರ್ವೆಲ್ಸ್ ಸಿನಿಮಾಗಳು ಇಲ್ಲಿ ಹೆಚ್ಚು ರಾರಾಜಿಸುತ್ತಿದ್ವು. ಆದ್ರೆ ಈಗ ಭಾರತರ ಪ್ಯಾನ್ ಇಂಡಿಯಾ ಸಿನಿಮಾಗಳು ಈ ಎನ್ಎಫ್ಟಿಯನ್ನ ಆವರಿಸಿಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಕನ್ನಡದಿಂದ ಕಿಚ್ಚ ಸುದೀಪ್ರ ವಿಕ್ರಾಂತ್ ರೋಣ ಸಿನಿಮಾ ಈಗಾಗ್ಲೆ ವರ್ಲ್ಡ್ ವೈಡ್ ದೊಡ್ಡ ಕ್ರೇಜ್ ಹುಟ್ಟುಹಾಕಿದ್ದು. ಈ ಸಿನಿಮಾ ಏನಾದ್ರು ಎನ್ಎಫ್ಟಿಗೆ ಎಂಟ್ರಿ ಕೊಡುತ್ತಾ ಅನ್ನೋ ಕುತೂಹಲ ಮೂಡಿದೆ.
