ಲಾಕ್‌ಡೌನ್‌ ಆರಂಭದಿಂದಲ್ಲೂ ಅಭಿಮಾನಿಗಳ ಜತೆ ಉತ್ತಮ ಸಂಪರ್ಕ ಹೊಂದಲು ಸೆಲೆಬ್ರಿಟಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್  ಆಗಿದ್ದಾರೆ  ಆದರೆ ಈಗ ಅದೇ ಅವರನ್ನು ತೊಂದರೆಗೆ ಸಿಲುಕಿಕೊಳ್ಳುವಂತೆ ಮಾಡಿದೆ...

ಹೌದು! ಕೋವಿಡ್‌19 ವೈರಸ್‌ ಸಮಸ್ಯೆ ಎದುರಿಸುತ್ತಿರುವ ಜನರು ಈಗ ಅದೆಲ್ಲಿಂದಲೋ ಲಿಂಕ್ ಕಳುಹಿಸಿ ಮೊಬೈಲ್‌ಗೆ ವೈರಸ್‌ ಸ್ಪ್ರೇಡ್‌ ಮಾಡುತ್ತಿರುವ ದುಷ್ಕರ್ಮಿಗಳಿಗೆ ಹೆದರಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ನೋಡಿ. ಈ ಪಟ್ಟಿಯಲ್ಲಿ ಈಗಾಗಲೇ ಬಾಲಿವುಡ್‌ ಮಂದಿ ಇದ್ದು ಅದಕ್ಕೆ ಸ್ಯಾಂಡಲ್‌ವುಡ್‌ ನಟಿಯರು ಸೇರಿಕೊಳ್ಳುತ್ತಿದ್ದಾರೆ.

ಸಮಂತಾ-ಪೂಜಾ ಹೆಗ್ಡೆ ನಡುವೆ ಬಿಗ್ ವಾರ್‌; ಅಕೌಂಟ್‌ ಹ್ಯಾಕ್‌ ಮಾಡಿದ್ಯಾರು? 

ಟಗರು ಪುಟ್ಟಿ ಮಾನ್ವಿತಾ ಹರೀಶ್‌ ಹಾಗೂ ಚುಟು ಚುಟು ಬೆಡಗಿ  ಆಶಿಕಾ ರಂಗನಾಥ್ ಈ ಪಟ್ಟಿಯಲ್ಲಿದ್ದಾರೆ ಅಷ್ಟೇ ಅಲ್ಲದೇ  ಆರ್ಜೆ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಶ್ರದ್ಧಾ ಖಾತೆಯೂ ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಟಿಯರು ಅವರ ಅಕೌಂಟ್‌ಗಳಿಂದ ಬರುವ ಯಾವುದೇ ಮಾಹಿತಿಯನ್ನು ಹಾಗೂ ಅದರಲ್ಲಿರುವ ಲಿಂಕ್ ಓಪನ್ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಇಷ್ಟು ದಿನಗಳ ಕಾಲ ಸೆಲೆಬ್ರಿಟಿಗಳ ಟ್ಟಿಟ್ಟರ್ ಖಾತೆಯನ್ನು ಹ್ಯಾಕ್‌ ಮಾಡುವುದು ಅವರ ಗುರಿಯಾಗಿತ್ತು ಆದರೀಗ ಅದೇ ಇನ್‌ಸ್ಟಾಗ್ರಾಂ ಮಾಡಲು ಪ್ರಾರಂಭಿಸಿದ್ದಾರೆ. ನಟಿ ಮಾನ್ವಿತ ಅವರ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಎರಡೂ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್‌ ಆಗಿದೆ. 'ನನ್ನ ಅಕೌಂಟ್‌ ಹ್ಯಾಕ್ ಆಗಿದೆ, ತುಂಬಾ ಕಷ್ಟ ಪಟ್ಟು ಫೇಸ್‌ಬುಕ್‌ ಸರಿ ಮಾಡಲಾಗಿದೆ ಆದರೀಗ ಇನ್‌ಸ್ಟಾಗ್ರಾಂ ಮಾಡುತ್ತಿರುವೆ. ಅದರಿಂದ ಬರುವ ಯಾವ ಮೆಸೇಜ್ ಓಪನ್‌ ಮಾಡಬೇಡಿ' ಎಂದು ಪೋಸ್ಟ್‌ ಮಾಡಿದ್ದಾರೆ.

2.9 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಲೀಕ್‌!

ಇನ್ನು ಚುಟು ಚುಟು ಹುಡುಗಿ ಆಶಿಕಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಹ್ಯಾಕ್‌ ಆಗಿದೆ ಯಾರೋ ದುಷ್ಕರ್ಮಿಗಳು ಲಿಂಕ್ ಕಳುಹಿಸುತ್ತಿದ್ದಾರೆ ಅದನ್ನು ಓಪನ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಆರ್ಜೆ ಶ್ರದ್ಧಾ ಕೂಡ ಶೇರ್ ಮಾಡಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್‌ ಆಗಿ ಮೂರು ನಟಿಯರ ಖಾತೆ ಹ್ಯಾಕ್‌ ಆಗಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಇದು ಬೇಕಂತಲೇ ಮಾಡಿದ ಹ್ಯಾಕ್‌? ಅಥವಾ ಇದರ ಹಿಂದೆ ಯಾರದೋ ಕೈವಾಡ ಇದ್ದು ಕೆಲವರನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ಹ್ಯಾಕ್‌ ಆಗಲು ಕಾರಣವೇನು?

ಸೆಲೆಬ್ರಿಟಿಗಳಾಗಲಿ ,ಸಾಮಾನ್ಯರಾಗಲಿ  ಅವರು ಅಕೌಂಟ್‌ ಹ್ಯಾಕ್ ಮಾಡುವುದು ಸುಲಭವಲ್ಲ. ಇನ್‌ಸ್ಟಾಗ್ರಾಂಗೆ ಪಾಸ್‌ವರ್ಡ್‌ ಹಾಕದೇ ಫೇಸ್‌ಬುಕಿಂಗ್ ಓಪನ್ ಮಾಡಿದರೆ ಎರಡು ಅಕೌಂಟ್‌ ಹ್ಯಾಕ್‌ ಆಗುವ ಸಾಧ್ಯತೆಗಳಿವೆ  ಅಷ್ಟೇ ಅಲ್ಲದೆ ನಮ್ಮ ಪ್ರೊಫೈಲ್‌ನಿಂದ ವೆರಿಫೈಡ್‌ ಆಗದ ಲಿಂಕ್ ಓಪನ್ ಮಾಡಿದರೂ ಹೀಗೆ ಆಗುತ್ತದೆ. ಹಾಗೂ ಪಬ್ಲಿಕ್‌ ಪ್ರೊಪೈಲ್ ಗಳನ್ನು ಲೈಕ್‌ ಮಾಡುವ ಮುನ್ನ ಯೋಚಿಸಿ.....