ಸ್ಯಾಂಡಲ್‌ವುಡ್‌ ಪ್ರತಿಭಾನ್ವಿತ ಕಲಾವಿದೆ ಮಾನ್ವಿತಾ ಹರೀಶ್‌ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ತಮ್ಮ ಅಭಿಪ್ರಾಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಎಲ್ಲೆಡೆ ವೈರಲ್ ಆಗುತ್ತಿರುವ ಪೊಲೀಸರ ವರ್ತನೆಯ ವಿಡಿಯೋವೊಂಗನ್ನು ಶೇರ್ ಮಾಡಿಕೊಂಡು, ಖಾಕಿ ಪಡೆ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಟಗರು ಪುಟ್ಟಿ' ಮಾನ್ವಿತಾ ಫೋನ್‌ ನೋಡ್ರಿ, ಸೀಕ್ರೆಟ್‌ ಮಾತ್ರವಲ್ಲ ವೆಯ್ಟ್ ಗೊತ್ತಾಗುತ್ತೆ!

ವಿಡಿಯೋ ವೈರಲ್!
ಮಾನ್ವಿತಾ ಟ್ಟಿಟರ್‌ ಖಾತೆಯಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಯಸ್ಸಾದ ಬಡವನೊಬ್ಬ ಬಾಳೆ ಹಣ್ಣು ಮಾರುತ್ತಿದ್ದು, ನಾಲ್ವರು ಪೊಲೀಸರು ಅಡ್ಡ ಹಾಕಿ ಆತನ ಬಾಳೆಹಣ್ಣಿನ ಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರಿಂದ ಬಿಡಿಸಿಕೊಳ್ಳಲಾಗದೇ ಅಸಹಾಯಕನಾಗಿ ವೃದ್ಧ ಅಳುತ್ತಾ ಸೈಕಲ್ ತುಳಿದುಕೊಂಡು  ಹೋಗುತ್ತಾನೆ. ಈ ವಿಡಿಯೋವನ್ನು ಚಿತ್ರೀಕರಿಸಿದ ಅಪರಿಚಿತ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

 

ನೆಟ್ಟಿಗರ ಸ್ಪಷ್ಟನೆ:
ಮಾನ್ವಿತಾ ಹರೀಶ್‌ ಪೋಸ್ಟ್‌ ನೋಡಿ ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಪೊಲೀಸರು ವೃದ್ಧನನ್ನು ಠಾಣೆಗೆ ಕರೆದು ಬಾಳೆಹಣ್ಣು ಬುಟ್ಟಿ ಕೊಟ್ಟು ಕಳುಹಿಸಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಘಟನೆ ಎಲ್ಲಿ ನಡೆಯಿತು, ಯಾವಾಗ ನಡೆಯಿತು ಎಂಬ ಬಗ್ಗೆ ಮಾಹಿತಿ ಇಲ್ಲ.

 

ಕೊರೋನಾ ವಿರುದ್ಧದ ಹೋರಾಟದಲ್ಲಿ ವಾರಿಯರ್ಸ್ ಆಗಿರುವ ಪೊಲೀಸರ ವರ್ತನೆ ಬಗ್ಗೆ ಹಲವೆಡೆ ಪ್ರಶಂಸೆ ವ್ಯಕ್ತವಾದರೂ, ಮತ್ತೆ ಕೆಲವೆಡೆ ಅವರು ಈ ಟೈಮಲ್ಲೂ ಲಂಚ ಕೇಳುತ್ತಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ. ಆದರೆ, ಲಾಕ್‌ಡೌನ್ ವೇಳೆ ಎಲ್ಲೆಡೆ ಶಾಂತಿ ಸುವ್ಯವಸ್ಥೆ ಕಾಪಾಡಲು ಟೊಂಕ ಕಟ್ಟಿ ನಿಂತಿರುವ ಪೊಲೀಸರಿಗೆ ಸಲಾಂ ಎನ್ನಲೇಬೇಕು.