ಡಿಫರೆಂಟ್ ಆಗಿ ಸಿನಿ ರಸಿಕರನ್ನು ಚಿತ್ರಮಂದಿರಕ್ಕೆ ಆಹ್ವಾನ ಮಾಡಿದ ಮನೋರಂಜನ್. ಮದುವೆ ಎಂದು ಕನ್ಫ್ಯೂಸ್ ಆದ ಫ್ಯಾನ್ಸ್‌..

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಹಿರಿಯ ಪುತ್ರ ಮನೋರಂಜನ್‌ (Manoranjan) ಅಭಿನಯಿಸಿರುವ ಪ್ರಾರಂಭ ಸಿನಿಮಾ ಮೇ 13ರಂದು ರಿಲೀಸ್ ಆಗುತ್ತಿದೆ. ಸಖತ್ ಡಿಫರೆಂಟ್ ಆಗಿರುವ ಕಥೆಗೆ ಡಿಫರೆಂಟ್ ಟೈಟಲ್ ಕೊಟ್ಟಿರುವ ಚಿತ್ರತಂಡ ಪ್ರಚಾರವನ್ನು ಇನ್ನೂ ಡಿಫರೆಂಟ್ ಆಗಿ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ (Social Media) ಮೂಲಕ ಸಿನಿ ರಸಿಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಲು ಪತ್ರಿಕೆ ರಿಲೀಸ್ ಮಾಡಿದ್ದಾರೆ. ಆದರೆ ಅಭಿಮಾನಿಗಳು ಇದು ಆಮಂತ್ರಣ ಎಂದು ಕನ್ಫ್ಯೂಸ್ ಆಗಿದ್ದಾರೆ. 

ಹೌದು! ಮದುವೆ ಆಮಂತ್ರಣ ಪತ್ರಿಕೆ ಶೈಲಿಯಲ್ಲಿ ಸಿನಿಮಾ ರಿಲೀಸ್‌ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆಹ್ವಾನ ಪತ್ರಿಕೆ ಡಿಫರೆಂಟ್ ಆಗಿ ಡಿಸೈನ್ ಮಾಡಲಾಗಿದ್ದು, ನಾವು ಕಾಯುತ್ತಿದ್ದೀವಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ನಾನು ನನ್ನ ಹೆಂಡ್ತೀರು; ತಂದೆ ಹಾಡಿಗೆ ಹೆಜ್ಜೆ ಹಾಕಿದ ಮನೋರಂಜನ್ ರವಿಚಂದ್ರನ್!

'ಶ್ರೀ ದೇವರ ಅನುಗ್ರಹದಿಂದ ಹಾಗೂ ಶ್ರೂ ಗುರುಹಿರಿಯರ ಕೃಪೆಯಿಂದ ನಮ್ಮ ಸಿನಿಮಾ ಸ್ವಸ್ತಶ್ರೀ ವಿಜಯಭ್ಯುದಯ ಶ್ರೀ ಶಾಲಿವಾಹನ ಶಕ ವರ್ಷಂಗಳ 1994ನೆ ಶ್ರೀ ಶುಭಕೃತನಾಮ ಸಂವತ್ಸರದ ವೈಶಾಖಮಾನ ಶುಕ್ಲ ಪಕ್ಷ ದಿನಾಂಕ 13.5.2022ನೇ ಶುಕ್ರವಾರ ನಮ್ಮ ಪ್ರಾರಂಭ ಚಿತ್ರ ಬಿಡುಗಡೆಯಾಗಲಿದೆ' ಎಂದು ಬರೆಯಲಾಗಿದೆ. 

'ಚಿ||ರಾ|| ಮನೋರಂಜನ್ ರವಿಚಂದ್ರನ್ (ಯಂಗ್ ಕ್ರೇಜಿಸ್ಟಾರ್)
(ಶ್ರೀಮತಿ ಸುಮತಿ ಮತ್ತು ಶ್ರೀ ಡಾ|| ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೇಷ್ಠ ಪುತ್ರ)

ಮತ್ತು

ಚಿ|| ಸೌ||ಕು|| ಕೀರ್ತಿ ಕಲ್ಕೇರಿ (ಚಿತ್ರ ನಟಿ)
(ಶ್ರೀಮತಿ ಸುಮತಿ ಮತ್ತು ರಮೇಶ್‌ ಕಲ್ಕೇರಿ ಅವರ ಜೇಷ್ಠ ಪುತ್ರಿ)

ಇವರ ಪ್ರಾರಂಭ ಚಿತ್ರ ಬಿಡುಗಡೆ ಮಹೋತ್ಸವವನ್ನು ನಡೆಸಲು ನಿರ್ಮಾಣ ಸಂಸ್ಥೆ ಹಾಗು ನಿರ್ದೇಶಕರು ಕಷ್ಟಪಟ್ಟು, ಇಷ್ಟಪಟ್ಟು ನಿಶ್ಚಯಿಸಿರುವುದರಿಂದ ತಾವುಗಳು ನಮ್ಮ ಸುಮಧುರ ಸಮಯವನ್ನು ಎತ್ತಿಟ್ಟು 20 ರಿಂದ 70ರ ವಯಸ್ಕರು ಕುಟುಂಬ ಸಮೇತ ಆಗಮಿಸಿ ಆಶೀರ್ವಧಿಸಬೇಕಾಗಿ ವಿನಂತಿ..

ಮುಯ್ಯಿ ನಿಮ್ದು, ಮನಸ್ಸು ಮುಟ್ಟೋ ಕೆಲ್ಸ ನಮ್ದು

ಶುಭ ಮುಹೂರ್ತ 13.5.2022 
ಸ್ಥಳ: ನಿಮ್ಮ ಹತ್ತಿರದ ಚಿತ್ರಮಂದಿರ

ತಮ್ಮ ಸುಖಶಗಮನ ಬಯಸುವವರು:
ಶ್ರೀ ಜಗದೀಶ್ ಕಲ್ಯಾಡಿ ( ನಿರ್ಮಾಪಕರು) ಶ್ರೀ ಮನು ಕಲ್ಯಾಡಿ (ನಿರ್ದೇಶಕರು)
ನಾವೆಲ್ಲಾ ಆಲ್ಪಪ್ರಿಯರು, ಕುಬೇರರಾನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದು ಹಾಗು ಎಲ್ಲಾ ತಾಂತ್ರಿಕ ವರ್ಗ

ವಿಶೇಷ ಮಾಹಿತಿ:
ನಿಮ್ಮ ಹತ್ತಿರದ ಅಂಚೆ ಪೆಟ್ಟಿಗೆ bookmyshowಗೆ ಬೇಟಿ ನೀಡಿ ಆಸಕ್ತಿ ತೋರಿಸಿ ನಮ್ಮ ಟಿಕೆಟ್ ಅನ್ನು ಬುಕ್ ಮಾಡಿ. ಇದಕ್ಕು ಮುನ್ನವೇ ನಿಶ್ಚಿತಾರ್ಥವಾಗಿದ್ದು ಆನಂದ್ ಆಡಿಯೋಗೆ ಒಮ್ಮೆ ಭೇಟಿ ಮಾಡಿ ಓಟಿಂಗ್ ನೀಡಿ.

View post on Instagram

ಮನೋರಂಜನ್ ಆರೋಗ್ಯ:

'ಸಾಹೇಬ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್‌ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದು, ಇದ್ದಕ್ಕಿದ್ದಂತೆ ತೂಕ ಹೆಚ್ಚಾಗಿತ್ತು. ಸುಮಾರು 25 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನೋರಂಜನ್‌ ಇದೇ ಮೊದಲ ಬಾರಿ ಆಗಿದ್ದೇನು ಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ.

ಸಿನಿಮಾ ರಿಲೀಸ್‌ಗೂ ಮುನ್ನ ಚಾಮುಂಡೇಶ್ವರ ದರ್ಶನ ಪಡೆಯಲು ಪುತ್ರನಿಗೆ ಹೇಳಿದ ರವಿಚಂದ್ರನ್!

ಇಷ್ಟು ದಿನಗಳ ಕಾಲ ಮನೋರಂಜನ್‌ ಅವರನ್ನು ಯಾರೇ ಭೇಟಿ ಮಾಡಿದರೂ ಮೊದಲು ಅವರ ತೂಕದ ಬಗ್ಗೆ ಮಾತನಾಡುತ್ತಿದ್ದರಂತೆ. ಪಾತ್ರವೊಂದಕ್ಕೆ ಹೀಗೆ ತಯಾರಿ ಮಾಡಿಕೊಂಡಿರುವುದಾಗಿ ಸುಳ್ಳು ಹೇಳುತ್ತಿದ್ದ ಮನೋರಂಜನ್ ಅಸಲಿ ಕಾರಣವನ್ನು ಇದೀಗ ತೆರೆದಿಟ್ಟಿದ್ದಾರೆ. 78 ಕೆಜಿ ತೂಕವಿದ್ದ ಮನೋರಂಜನ್‌ 2018ರಲ್ಲಿ ನರಗಳ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಸುಮಾರು 25ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ಅನಿವಾರ್ಯವಾಗಿ ಸ್ಟೆರಾಯ್ಡ್ಸ್ ನೀಡಲಾಗಿತ್ತು. ಈ ಕಾರಣದಿಂದ ತೂಕ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.