Asianet Suvarna News Asianet Suvarna News

ಲಹರಿ ಸಂಸ್ಥೆಯ ಭಾವಗೀತೆ ಯೂಟ್ಯೂಬ್‌ ಚಾನಲ್‌; 10 ಲಕ್ಷ ಚಂದಾದಾರರು, 36 ಕೋಟಿ ಹಿಟ್ಸ್‌

10 ಲಕ್ಷ ಚಂದಾದಾರರು ಹಾಗೂ 36 ಕೋಟಿ ವೀಕ್ಷಣೆ ಪಡೆದಿರುವ ಲಹರಿ ಭಾವಗೀತೆ ಯುಟ್ಯೂಬ್ ಚಾನೆಲ್‌ ಗೋಲ್ಡ್‌ ಮೆಡಲ್ ಪಡೆದುಕೊಂಡಿದೆ. 

Kannada Lahari Bhavageethegalu and folk youtube channels hits 10 lakh subscribers vcs
Author
Bangalore, First Published Oct 22, 2021, 10:37 AM IST
  • Facebook
  • Twitter
  • Whatsapp

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ದೊಡ್ಡ ಹೆಸರು ಪಡೆದುಕೊಂಡಿರುವ ಲಹರಿ ಆಡಿಯೋ (Lahari Audio) ಸಂಸ್ಥೆಯ ಲಹರಿ ಭಾವಗೀತೆಗಳು ಆ್ಯಂಡ್‌ ಫೋಕ್‌ (Lahari Bhavageethegalu and folk) ಹೆಸರಿನ ಯೂಟ್ಯೂಬ್‌ ಚಾನಲ್‌ ಗೋಲ್ಡ್‌ ಮೆಡಲ್‌ (Gold Medal) ದಾಖಲೆ ಮಾಡಿದೆ. ಜಾನಪದ ಹಾಗೂ ಭಾವಗೀತೆಗಳನ್ನೇ ಪ್ರಸಾರ ಮಾಡುವ ಈ ಯೂಟ್ಯೂಬ್‌ ಚಾನಲ್‌ಗೆ 10 ಲಕ್ಷ ಮಂದಿ ಚಂದಾದಾರರಾಗಿದ್ದಾರೆ (Subscribers). ಈ ಸಾಧನೆಗೆ ಯೂಟ್ಯೂಬ್‌ ಸಂಸ್ಥೆ ಗೋಲ್ಡ್‌ ಮೆಡಲ್‌ ನೀಡಿ ಗೌರವಿಸಿದೆ.

ಜಾನಪದ ಹಾಗೂ ಭಾವಗೀತೆಗಳನ್ನು ಒಳಗೊಂಡ ಯೂಟ್ಯೂಬ್‌ ಚಾನಲ್‌ಗೆ ಇಷ್ಟುದೊಡ್ಡ ಪ್ರಮಾಣದಲ್ಲಿ ಜನ ಸಬ್‌ಸ್ಕೆ್ರೖಬ್‌ ಆಗಿರುವುದು ಭಾರತದಲ್ಲಿ ಇದೇ ಮೊದಲು. ‘ಇದು ನಮ್ಮ ಸಂಸ್ಥೆಗೆ ದಕ್ಕಿರುವ ಮತ್ತೊಂದು ಹಿರಿಮೆ. ಲಹರಿ ಭಾವಗೀತೆಗಳು ಆ್ಯಂಡ್‌ ಫೋಕ್‌ ಹೆಸರಿನ ಯೂಟ್ಯೂಬ್‌ ಚಾನಲ್‌ ಹೊಂದಿದ್ದೇವೆ. ಸಿನಿಮಾ ಹಾಡುಗಳಿಗೆ ಮಾತ್ರ ಸೀಮಿತವಾಗದೆ ದೇಸಿತನ, ದೇಸಿ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಜಾನಪದ ಹಾಗೂ ಭಾವಗೀತೆಗಳನ್ನು ಕೇಳುಗರಿಗೆ ನೀಡುತ್ತಿದ್ದೇವೆ. ಕನ್ನಡಿಗರ ಪ್ರೀತಿಗೆ ಆಭಾರಿ’ ಎನ್ನುತ್ತಾರೆ ಲಹರಿ ವೇಲು.

ದೊಡ್ಡ ಮೊತ್ತಕ್ಕೆ ರಾಜಮೌಳಿ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದ ಲಹರಿ ಮ್ಯೂಸಿಕ್!

ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಇಲ್ಲಿಯವರೆಗೆ 36 ಕೋಟಿ ಜನ ಕೇಳಿದ್ದಾರೆ. ಕುವೆಂಪು (Kuvempu), ದ.ರಾ ಬೇಂದ್ರೆ (DR.Bendre), ನಿಸಾರ್‌ ಅಹಮದ್‌ (Nissar Ahmed), ಪಿ ಕಾಳಿಂಗರಾಯರು (P.Kalinga Rao), ಮೈಸೂರು ಅನಂತ್‌ಸ್ವಾಮಿ (Mysore Ananthaswamy), ಸಿ ಅಶ್ವತ್‌್ಥ, ರತ್ನಮಾಲಾ ಪ್ರಕಾಶ್‌, ಬಿ ಕೆ ಸುಮಿತ್ರ (BK Sumitra), ಬಿ ಆರ್‌ ಛಾಯಾ, ಎಂ ಡಿ ಪಲ್ಲವಿ (MD Pallavi), ಅರ್ಚನಾ ಉಡುಪ (Archana Udupa), ನರಸಿಂಹ ನಾಯಕ್‌, ಯಶ್ವಂತ್‌ ಹಳಿಬಂಡಿ, ಅಬ್ಬಿಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್‌, ಮಂಜುಳ ಗುರುರಾಜ್‌, ಗುರುರಾಜ್‌ ಹೊಸಕೋಟೆ, ಪಿ ಬಿ ಶ್ರೀನಿವಾಸ್‌ ಹೀಗೆ ಕನ್ನಡಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಲಹರಿ ಆಡಿಯೋ ಕಂಪನಿ ನೆನಪಿಸಿಕೊಂಡಿದೆ.

 

Follow Us:
Download App:
  • android
  • ios