ಹೀಗೆ ಕಿಚ್ಚನ ಮುಂದೆ ಬಂದಿರುವುದು ಪವನ್‌ ಕಲ್ಯಾಣ್‌ ನಟನೆಯ ಸಿನಿಮಾ. ತೆಲುಗಿನ ಕ್ರಿಷ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ‘ವಿರೂಪಾಕ್ಷ’ ಎಂಬುದು ಚಿತ್ರದ ಹೆಸರು. ಮಲಯಾಳಂನ ಜನಪ್ರಿಯ ಸಿನಿಮಾ ‘ಅಯ್ಯಪ್ಪನುಮ್‌ ಕೋಶಿಯುಮ್‌’ ಚಿತ್ರದ ರೀಮೇಕ್‌ ಇದು. ಪವನ್‌ ಕಲ್ಯಾಣ್‌ ಪೊಲೀಸ್‌ ಅಧಿಕಾರಿ ಅಯ್ಯಪ್ಪನ್‌ ಪಾತ್ರದಲ್ಲಿ ನಟಿಸಲಿದ್ದು, ಸುದೀಪ್‌ ಕೋಶಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಮಲಯಾಳಂನಲ್ಲಿ ಈ ಪಾತ್ರವನ್ನು ಪೃಥ್ವಿರಾಜ್‌ ನಿರ್ವಹಿಸಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಅಶ್ವತ್ಥಾಮನ ಜಪ: ಹೊಸ ಸಿನಿಮಾದಲ್ಲಿ ಬಿಗ್‌ ಸ್ಟಾರ್ಸ್ 

"

ಇಗೋಗಾಗಿ ಹೋರಾಡುವ ಇಬ್ಬರ ಕತೆಯಲ್ಲಿ ನಟನೆಗೆ ಸಿಕ್ಕಾಪಟ್ಟೆಪ್ರಾಮುಖ್ಯವಿದ್ದು, ಪವನ್‌ ಕಲ್ಯಾಣ್‌ ಹಾಗೂ ಸುದೀಪ್‌ ಪರಸ್ಪರ ಎದುರಾಗಿ ನಿಂತರೆ ಚಿತ್ರದ ತೂಕ ಹೆಚ್ಚುತ್ತದೆ ಎಂಬುದು ನಿರ್ದೇಶಕರ ಲೆಕ್ಕಾಚಾರ. ಆದರೆ, ಸುದೀಪ್‌ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ವಿದ್ಯಾರ್ಥಿಗಳಿಗೆ ನಟ ಕಿಚ್ಚ ಸುದೀಪ್ ಆರ್ಥಿಕ ನೆರವು 

ಮತ್ತೊಂದು ಕಡೆ ಇದೇ ಚಿತ್ರದಲ್ಲಿ ಕನ್ನಡ ನಟಿ ಪ್ರಣೀತಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಈ ಕುರಿತು ಅವರನ್ನು ವಿಚಾರಿಸಿದರೆ, ‘ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ಮಾತುಕತೆ ಆಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇನೆ’ ಎನ್ನುತ್ತಾರೆ ಪ್ರಣೀತಾ.